Video: ನವದಂಪತಿಗೆ ಉಪಾಯದಿಂದ ವಿಸ್ಕಿ ಕುಡಿಸಿದ ಗೆಳೆಯರು; ವರ ಮುಖ ಸಿಂಡರಿಸಿದ, ವಧು ಪೂರ್ತಿ ಕುಡಿದಳು !

| Updated By: Lakshmi Hegde

Updated on: Apr 04, 2022 | 6:33 PM

ಬ್ರೈಡ್ಸ್ ಸ್ಪೆಶಲ್​ ಎಂಬ ಇನ್​ಸ್ಟಾಗ್ರಾಂ ಪೇಜ್​ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ. ಇಬ್ಬರು ಯುವಕರು (ಇವರು ವಧು-ವರರಲ್ಲಿ ಯಾರದ್ದೋ ಸ್ನೇಹಿತರು) ಎರಡು ಮಾವಿನ ಹಣ್ಣಿನ ಫ್ಲೆವರ್​​ನ ಫ್ರೂಟಿ ಪ್ಯಾಕೆಟ್​ ಇಟ್ಟುಕೊಂಡಿದ್ದಾರೆ.

Video: ನವದಂಪತಿಗೆ ಉಪಾಯದಿಂದ ವಿಸ್ಕಿ ಕುಡಿಸಿದ ಗೆಳೆಯರು; ವರ ಮುಖ ಸಿಂಡರಿಸಿದ, ವಧು ಪೂರ್ತಿ ಕುಡಿದಳು !
ಫ್ರೂಟಿ ಪ್ಯಾಕೆಟ್​​ನಲ್ಲಿ ವಿಸ್ಕಿ ಹಾಕಿಕೊಟ್ಟ ಸ್ನೇಹಿತರು
Follow us on

ಭಾರತದಲ್ಲಿ ಮದುವೆಯಲ್ಲಿ ಸಂಪ್ರದಾಯ, ಪದ್ಧತಿಗಳು ಹೆಚ್ಚು. ವಧು-ವರರ ಸಂಬಂಧಿಗಳು, ಹಿರಿಯರೆಲ್ಲ ಮದುವೆಯಲ್ಲಿ ಪಾಲ್ಗೊಂಡು ಮದುಮಕ್ಕಳನ್ನು ಆಶೀರ್ವದಿಸುತ್ತಾರೆ. ಇನ್ನು ಮದುವೆಗೆ ಬರುವ ವಧು-ವರರ ಸ್ನೇಹಿತರಂತೂ ಅವರ ಕಾಲೆಳೆಯಲೆಂದು ಕಾಯುತ್ತಿರುತ್ತಾರೆ. ಫನ್ನಿಯಾಗಿ ವಿಶ್​ ಮಾಡುವ ಮೂಲಕ, ವಿಚಿತ್ರ ಉಡುಗೊರೆಗಳನ್ನು ಕೊಟ್ಟು, ತಮಾಷೆ ಮಾಡಿಯೋ ನೂತನ ದಂಪತಿಯನ್ನು ಗೋಳುಹೊಯ್ದುಕೊಳ್ಳುತ್ತಾರೆ. ಹಾಗೇ ಇಲ್ಲೊಂದು ಮದುವೆಯಲ್ಲಿ ಸ್ನೇಹಿತರು ಇನ್ನೊಂದು ಹೆಜ್ಜೆ ಮುಂದಿಟ್ಟು, ನೂತನ ದಂಪತಿಗೆ ಮದುವೆ ಮನೆಯಲ್ಲಿಯೇ ಎಲ್ಲರೆದುರು ಮದ್ಯ ಕುಡಿಸಿಬಿಟ್ಟಿದ್ದಾರೆ. ಅದೂ ಕೂಡ ತಂಪು ಪಾನೀಯದೊಂದಿಗೆ ಮದ್ಯವನ್ನು ಮಿಕ್ಸ್ ಮಾಡಿ ಕೊಟ್ಟಿದ್ದಾರೆ. ಅದರಲ್ಲಿ ಲಿಕ್ಕರ್ ಇದೆ ಎಂದು ಗೊತ್ತಿಲ್ಲದೆ ವಧು-ವರ ಇಬ್ಬರೂ ಕುಡಿದಿದ್ದಾರೆ.

ಬ್ರೈಡ್ಸ್ ಸ್ಪೆಶಲ್​ ಎಂಬ ಇನ್​ಸ್ಟಾಗ್ರಾಂ ಪೇಜ್​ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ. ಇಬ್ಬರು ಯುವಕರು (ಇವರು ವಧು-ವರರಲ್ಲಿ ಯಾರದ್ದೋ ಸ್ನೇಹಿತರು) ಎರಡು ಮಾವಿನ ಹಣ್ಣಿನ ಫ್ಲೆವರ್​​ನ ಫ್ರೂಟಿ ಪ್ಯಾಕೆಟ್​ ಇಟ್ಟುಕೊಂಡಿದ್ದಾರೆ. ಹಾಗೇ ಇನ್ನೊಂದು ಗ್ಲಾಸ್​ನಲ್ಲಿ ವಿಸ್ಕಿ ಹಾಕಿಕೊಂಡಿದ್ದಾರೆ. ಅದರಲ್ಲೊಬ್ಬ ಇಂಜೆಕ್ಷನ್​ ಟ್ಯೂಬ್​ (ಸಿರಿಂಜ್​​)ನಲ್ಲಿ ಆ ವಿಸ್ಕಿಯನ್ನು ತುಂಬಿ ಫ್ರೂಟಿ ಪ್ಯಾಕೆಟ್​​ಗೆ ಚುಚ್ಚಿ ವಿಸ್ಕಿಯನ್ನು ಒಳಗೆ ಸೇರಿಸುತ್ತಾನೆ. ಬಳಿಕ ಅದನ್ನು ತೆಗೆದುಕೊಂಡು ಹೋಗಿ ನೂತನ ದಂಪತಿಗೆ ನೀಡುತ್ತಾರೆ. ಅವರಿಬ್ಬರೂ ಅದನ್ನು ಕುಡಿಯುತ್ತಾರೆ. ಒಂದೆರಡು ಗುಟುಕಿಗೇ ವರ ಮುಖ ಸಿಂಡರಿಸಿದ್ದಾನೆ. ಆದರೆ ವಧು ಏನೋ ಗೊತ್ತಾಗದೆ ಸೈಲೆಂಟ್ ಆಗಿ ಕುಡಿದಿದ್ದಾಳೆ. ಹಾಗೇ, ಭರ್ಜರಿ ವೀವ್ಸ್ ಕೂಡ ಬಂದಿದೆ. ನೆಟ್ಟಿಗರಂತೂ ಇದು ತುಂಬ ಫನ್ನಿ ಎಂದು ಕಮೆಂಟ್ ಸೆಕ್ಷನ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕೃಷಿ ಸಮಸ್ಯೆಗಳನ್ನು ಪರಿಶೀಲಿಸುವ ಉದ್ದೇಶಿತ ಸಮಿತಿಯಲ್ಲಿ ಭಾಗವಹಿಸಲು ಸರ್ಕಾರ ನೀಡಿದ ಆಹ್ವಾನ ತಿರಸ್ಕರಿಸಿದ ರೈತ ಸಂಘಟನೆ