ಮಳೆ ಬರಲಿ ಎಂದು ಕಪ್ಪೆಗಳ ಮದುವೆ ಮಾಡಿಸಿದ ಗ್ರಾಮಸ್ಥರು; ವಿಡಿಯೋ ವೈರಲ್

|

Updated on: May 06, 2021 | 9:25 PM

Viral Video: ಇಂತಹ ಪರಿಸ್ಥಿತಿಯಲ್ಲಿ ಮಳೆಗಾಗಿ ಪಶ್ಚಿಮ ತ್ರಿಪುರಾದ ಗ್ರಾಮವೊಂದರ ಜನರು ಎರಡು ಕಪ್ಪೆಗಳಿಗೆ ಮದುವೆ ಮಾಡಿಸುವ ಮೂಲಕ ತಮ್ಮ ಸಂಪ್ರದಾಯವನ್ನು ಅನೂಚಾನವಾಗಿ ಪಾಲಿಸಿದ್ದಾರೆ.

ಮಳೆ ಬರಲಿ ಎಂದು ಕಪ್ಪೆಗಳ ಮದುವೆ ಮಾಡಿಸಿದ ಗ್ರಾಮಸ್ಥರು; ವಿಡಿಯೋ ವೈರಲ್
ಕಪ್ಪೆಗಳ ಮದುವೆ
Follow us on

ದೇಶದ ಹವಾಮಾನ ಇಲಾಖೆ ಈಗಾಗಲೇ ಮಳೆಯ ಮುನ್ಸೂಚನೆ ನೀಡಿದೆ. ಜೂನ್ 1ರ ವೇಳೆಗೆ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ ಭೂವಿಜ್ಞಾನ ಇಲಾಖೆ ಇಂದಷ್ಟೇ ತಿಳಿಸಿದೆ. ಈ ಬೆನ್ನಲ್ಲೇ ತ್ರಿಪುರಾ ರಾಜ್ಯದ ಹಳ್ಳಿಯೊಂದರಲ್ಲಿ ಮಳೆ ಬರಲಿ ಎಂದು ಎರಡು ಕಪ್ಪೆಗಳ ಮದುವೆ ಮಾಡಿಸುವ ವಿಡಿಯೋ ವೈರಲ್ ಆಗಿದೆ.

ಈಗಂತೂ ದೇಶದಲ್ಲಿ ಕೊರೊನಾ ದೆಸೆಯಿಂದ ಮದುವೆ ಸಮಾರಂಭಗಳು ನಿಂತಿವೆ. ಕೊವಿಡ್ ಭೀತಿ ಮದುವೆ, ಮುಂಜಿಯಂತಹ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದೆ. ಕೆಲವು ಪ್ರದೇಶಗಳಲ್ಲಂತೂ ಮದುವೆಯಂತಹ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳ ಕೊವಿಡ ಸೋಮಕಿನ ಹೆಚ್ಚಳಕ್ಕೆ ಕಾರಣವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಮಳೆಗಾಗಿ ಪಶ್ಚಿಮ ತ್ರಿಪುರಾದ ಗ್ರಾಮವೊಂದರ ಜನರು ಎರಡು ಕಪ್ಪೆಗಳಿಗೆ ಮದುವೆ ಮಾಡಿಸುವ ಮೂಲಕ ತಮ್ಮ ಸಂಪ್ರದಾಯವನ್ನು ಅನೂಚಾನವಾಗಿ ಪಾಲಿಸಿದ್ದಾರೆ.

ಎರಡು ಕಪ್ಪೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ನಮ್ಮ ರಾಜ್ಯದ ಹಲವು ಭಾಗಗಳಲ್ಲೂ ಇದೆ. ಕೆಲವು ಅದನ್ನು ಮೂಢ ನಂಬಿಕೆ ಎಂದು ವಾದಿಸುತ್ತಾರೆ. ಆದರೆ ಕಪ್ಪೆಗಳ ಮದುವೆ ಮಾಡಿಸುವ ಸಂಪ್ರದಾಯ ಆಚರಿಸುವವರು ಅದನ್ನು ಎಂದಿನಂತೆ ಪಾಲಿಸುತ್ತಾರೆ. ಈ ಮದುವೆಯಲ್ಲಿ ಒಂದು ಕಪ್ಪೆಯನ್ನು ಇಂದ್ರದೇವ ಎಂದೂ ಇನ್ನೊಂದು ಕಪ್ಪೆಯನ್ನು ವರುಣ ಎಂದು ಸಂಬೋಧಿಸಲಾಗುತ್ತದೆ.

ಇದನ್ನೂ ಓದಿ: ಕೊರೊನಾ ಟೆಸ್ಟ್ ರಿಪೋರ್ಟ್ ಬರುವ ಮುನ್ನವೇ ಸೋಂಕಿನ ಲಕ್ಷಣವಿದ್ದರೆ ಔಷಧಿಗಳ ಚೀಟಿ ನೀಡಲು ಆರೋಗ್ಯ ಇಲಾಖೆ ಸೂಚನೆ

ಮಕ್ಕಳಿಗೆ ಅಪಾಯ ಎಂಬ ಆತಂಕವಿರುವ ಕೊವಿಡ್ 3ನೇ ಅಲೆಯನ್ನು ಹೇಗೆ ನಿಭಾಯಿಸ್ತೀರಿ? ಭಾರತ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ