AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದ ಒಳಾಂಗಣ ಫೋಟೋ ಬಿಡುಗಡೆ ಮಾಡಿದ ಸೌದಿ ಸರ್ಕಾರ

ಇದೀಗ ಬಿಡುಗಡೆಯಾಗಿರುವ ಮೆಕ್ಕಾದ ಪವಿತ್ರ ಬ್ಲ್ಯಾಕ್​ ಸ್ಟೋನ್​​ನ ಫೋಟೋ ಸುಮಾರು 49,000 ಮೆಗಾ ಫಿಕ್ಸೆಲ್​ ಇದೆ ಎಂದು ಸೌದಿ ಗ್ರ್ಯಾಂಡ್​ ಮಸೀದಿ ಮತ್ತು ಪಾಪೆಟ್ಸ್​ ಮಸೀದಿಯ ವ್ಯವಹಾರಗಳ ಜನರಲ್ ಪ್ರೆಸಿಡೆನ್ಸಿ ತಿಳಿಸಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದ ಒಳಾಂಗಣ ಫೋಟೋ ಬಿಡುಗಡೆ ಮಾಡಿದ ಸೌದಿ ಸರ್ಕಾರ
ಮೆಕ್ಕಾದ ಒಳಾಂಗಣದಲ್ಲಿರುವ ಪವಿತ್ರ ಕಲ್ಲುಗಳು
Lakshmi Hegde
|

Updated on:May 06, 2021 | 3:58 PM

Share

ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ ಮುಸ್ಲಿಮರ ಪಾಲಿಗೆ ಪವಿತ್ರವಾದ ಸ್ಥಳ. ಪ್ರತಿ ವರ್ಷ ಇಲ್ಲಿಗೆ ಬೇರೆ ದೇಶಗಳ ಮುಸ್ಲಿಮರೂ ಬರುತ್ತಾರೆ. ಅದನ್ನು ಹಜ್​ ಯಾತ್ರೆ ಎಂದೂ ಕರೆಯಲಾಗುತ್ತದೆ. ಈ ಮೆಕ್ಕಾ ಮಸೀದಿಯ ಹೊರಾಂಗಣ ಚಿತ್ರ ನಿಮಗೆ ನೋಡಲು ಸಿಕ್ಕಿದ್ದರೂ, ಅದರ ಒಳಾಂಗಣದಲ್ಲಿ ಏನಿದೆ ಎಂಬುದನ್ನು ನೋಡಲು ಸಾಧ್ಯವಾಗಿರಲಿಲ್ಲ. ಇದೀಗ ಇತಿಹಾಸದಲ್ಲೇ ಮೊದಲ ಬಾರಿಗೆ ಸೌದಿ ಅರೇಬಿಯಾ ಸರ್ಕಾರ, ಮೆಕ್ಕಾ ಮಸೀದಿಯೊಳಗೆ ಇರುವ ಪವಿತ್ರ ಕಪ್ಪುಕಲ್ಲು, ಧಾರ್ಮಿಕ ಕಲ್ಲುಗಳ ಹೈ ರೆಸಲ್ಯೂಶನ್​ ಇರುವ ಫೋಟೋವನ್ನು ಬಿಡುಗಡೆ ಮಾಡಿದೆ.

ಇದೀಗ ಬಿಡುಗಡೆಯಾಗಿರುವ ಮೆಕ್ಕಾದ ಪವಿತ್ರ ಬ್ಲ್ಯಾಕ್​ ಸ್ಟೋನ್​​ನ ಫೋಟೋ ಸುಮಾರು 49,000 ಮೆಗಾ ಫಿಕ್ಸೆಲ್​ ಇದೆ ಎಂದು ಸೌದಿ ಗ್ರ್ಯಾಂಡ್​ ಮಸೀದಿ ಮತ್ತು ಪಾಪೆಟ್ಸ್​ ಮಸೀದಿಯ ವ್ಯವಹಾರಗಳ ಜನರಲ್ ಪ್ರೆಸಿಡೆನ್ಸಿ ತಿಳಿಸಿದೆ. ಹಾಗೇ ಈ ಚಿತ್ರಗಳನ್ನು ತೆಗೆಯಲು ಸುಮಾರು 50 ತಾಸು ಬೇಕಾಯಿತು ಎಂದೂ ಮಾಹಿತಿ ನೀಡಿದೆ.

ಮೆಕ್ಕಾ ಮಸೀದಿಯಲ್ಲಿರುವ ಪವಿತ್ರ ಕಲ್ಲುಗಳ ಸುಮಾರು 1050 ಫೋಟೋಗಳನ್ನು ತೆಗೆಯುವಾಗ ಹಲವು ರೀತಿಯ ಟೆಕ್ನಿಕ್​​ನ್ನು ಬಳಸಲಾಗಿದೆ. ಹೀಗೆ ಈ ಫೋಟೋಗಳನ್ನು ತೆಗೆಯುವಾಗ ಎರಡೂ ಮಸೀದಿಗಳ ಜನರಲ್ ಪ್ರೆಸಿಡೆನ್ಸಿ ಮತ್ತು ಇಂಜಿನಿಯರಿಂಗ್ ವಿಭಾಗ ಜತೆಯಾಗಿ ಕೆಲಸ ಮಾಡಿವೆ. ಸುಮಾರು 7 ತಾಸುಗಳ ಕಾಲ ಯೋಜನೆ ರೂಪಿಸಿವೆ. ಮುಸ್ಲಿಮರ ಪಾಲಿಗೆ ಮೆಕ್ಕಾ ತುಂಬ ಪವಿತ್ರ. ಅಲ್ಲಿನ ಪವಿತ್ರ ಕಲ್ಲುಗಳ ವೀಕ್ಷಣೆಗೆಂದೇ ಪ್ರತಿವರ್ಷವೂ ಯಾತ್ರೆಗೆ ಹೋಗುತ್ತಾರೆ. ಇದೀಗ ಕೊವಿಡ್​ 19 ಅಲೆ ಜೋರಾಗಿದ್ದರಿಂದ ಮೆಕ್ಕಾ ಯಾತ್ರೆಗೂ ತಡೆ ಬಿದ್ದಿದೆ. ಇದೇ ಹೊತ್ತಲ್ಲಿ ಸೌದಿ ಸರ್ಕಾರ ಹೀಗೊಂದು ಮಹತ್ವದ ನಿರ್ಧಾರ ಕೈಗೊಂಡು, ಇತಿಹಾಸದಲ್ಲೇ ಪ್ರಥಮಬಾರಿಗೆ ಎಂಬಂತೆ ಮಸೀದಿಯ ಒಳಗಿನ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಸಂಬಳ ನೀಡುತ್ತಿಲ್ಲ ಎಂದು ಕರ್ತವ್ಯ ನಿರ್ವಹಿಸದೇ ಬಿಬಿಎಂಪಿ ಪಶ್ಚಿಮ ವಲಯದ ವಾರ್​ರೂಂ ಸಿಬ್ಬಂದಿ ಪ್ರತಿಭಟನೆ

Sanjana Galrani : ಬೆಂಗಳೂರಿನಲ್ಲಿ ಸಂಕಷ್ಟದಲ್ಲಿರೋ ಜನ್ರ ಸಹಾಯಕ್ಕೆ ಮುಂದಾಗ್ತಿರೋ ನಟಿ ಸಂಜನಾ ಗರ್ಲಾನಿ

Published On - 3:50 pm, Thu, 6 May 21

ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ
ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ
ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!