Donald Trump: ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧ ಎತ್ತಿ ಹಿಡಿದ ಫೇಸ್ಬುಕ್ ಮೇಲ್ವಿಚಾರಣೆ ಮಂಡಳಿ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ನಿಷೇಧವನ್ನು ಫೇಸ್ಬುಕ್ ಮೇಲ್ವಿಚಾರಣೆ ಮಂಡಳಿ ಎತ್ತಿಹಿಡಿದಿದೆ. ಇನ್ಸ್ಟಾಗ್ರಾಮ್, ಫೇಸ್ಬುಕ್ನಿಂದ ಅವರನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಲಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಹಾಕಿರುವ ನಿರ್ಬಂಧವನ್ನು ಫೇಸ್ಬುಕ್ನ ಮೇಲ್ವಿಚಾರಣೆ ಮಂಡಳಿ ಎತ್ತಿಹಿಡಿದಿದೆ. ಸಾಮಾನ್ಯವಾಗಿ ಫೇಸ್ಬುಕ್ ಹಾಕುವ ದಂಡವನ್ನು ಮೀರಿ ಅನಿರ್ದಿಷ್ಟಾವಧಿಯ ನಿಷೇಧ ಹೇರಿರುವುದನ್ನು ಟೀಕೆ ಮಾಡಲಾಗಿದೆ. ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಫೇಸ್ಬುಕ್ಗೆ ಹೇಳಿದೆ. ಸಾಮಾನ್ಯ ಬಳಕೆದಾರರು ಸೇರಿದಂತೆ ಎಲ್ಲರಿಗೂ ಅನ್ವಯಿಸುವಂತೆ ಸಮರ್ಥನೆ ನೀಡುವಂಥ ಸಮಾನಾಂತರ ಪ್ರತಿಕ್ರಿಯೆಯನ್ನು ನೀಡಬೇಕು ಎಂದು ತಿಳಿಸಲಾಗಿದೆ. ಕ್ಯಾಪಿಟಲ್ ಹಿಲ್ ಹಿಂಸಾಚಾರದ ನಂತರ, ಜನವರಿಯಲ್ಲಿ ಎತಡೂ ವೆಬ್ಸೈಟ್ನಿಂದ ಟ್ರಂಪ್ರನ್ನು ನಿಷೇಧಿಸಲಾಗಿತ್ತು.
ಆರಂಭದಲ್ಲಿ ಟ್ರಂಪ್ರನ್ನು ಶಾಶ್ವತವಾಗಿ ಅಮಾನತು ಮಾಡುವ ನಿರ್ಧಾರವು ಒಪ್ಪಿತವಲ್ಲದ್ದು ಹಾಗೂ ಗುಣಮಟ್ಟದ್ದಲ್ಲ ಎಂದು ಮೇಲ್ವಿಚಾರಣೆ ಮಂಡಳಿ ಹೇಳಿದೆ. ಸರಿಯಾದ ಸ್ಪಂದನೆಯು ಸ್ಥಿರವಾಗಿರಬೇಕು ಮತ್ತು ಇತರ ಎಲ್ಲ ಬಳಕೆದಾರರಿಗೂ ಅನ್ವಯ ಆಗುವಂಥದ್ದಾಗಿರಬೇಕು ಎಂದು ಹೇಳಲಾಗಿದೆ. ಇನ್ನು ಆರು ತಿಂಗಳ ಒಳಗೆ ಫೇಸ್ಬುಕ್ ಪ್ರತಿಕ್ರಿಯಿಸಬೇಕು ಎಂದು ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಲ್ಲೆ ಥ್ರೋನಿಂಗ್, ಶಿಮಿಟ್, ನಮ್ಮ ಬಳಿ ಯಾವುದೇ ಸುಲಭ ಉತ್ತರ ಇಲ್ಲ ಎಂದು ಒಪ್ಪಿಕೊಂಡರು.
ಫೇಸ್ಬುಕ್ ಇದೇ ವೇಳೆ ಪ್ರತಿಕ್ರಿಯೆ ನೀಡಿದ್ದು, ಮಂಡಳಿ ನಿರ್ಧಾರವನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿದೆ. ಮತ್ತು ಸಾಮಾನವಾಗಿರುವ ಹಾಗೂ ಸ್ಪಷ್ಟ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಫೇಸ್ಬುಕ್ ಹೇಗೆ ತನ್ನ ನೀತಿಗಳನ್ನು ಉತ್ತಮಗೊಳಿಸಬೇಕು ಮತ್ತು ಸಾಮಾಜಿಕ ಜಾಲ ಬಹಳ ಎಚ್ಚರಿಕೆಯಿಂದ ಇವೆಲ್ಲವನ್ನೂ ಪರಿಶೀಲಿಸಬೇಕು ಎಂದಿದೆ.
ಕಳೆದ ತಿಂಗಳೇ ಮಂಡಳಿಯಿಂದ ನಿರ್ಧಾರ ಬರಬೇಕಿತ್ತು. ಆದರೆ ಪ್ರಕರಣಗಳಿಗೆ ಸಂಬಂಧಿಸಿದಂತೆ 9000ಕ್ಕೂಹೆಚ್ಚು ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಪರಿಶೀಲಿಸಬೇಕಿತ್ತು. ಈ ಮಧ್ಯೆ ಟ್ರಂಪ್ರನ್ನು ಟ್ವಿಟ್ಟರ್ನಿಂದಲೂ ನಿಷೇಧಿಸಲಾಗಿದೆ. ಮಂಗಳವಾರ ಟ್ರಂಪ್ ಹೊಸ ವೆಬ್ಸೈಟ್ ಮಾಡಿದ್ದು, ತಮ್ಮ ಆಲೋಚನೆಯ ಬಗ್ಗೆ ಬೆಂಬಲಿಗರಿಗೆ ತಿಳಿಸುವುದಕ್ಕೆ ಬಳಸಲಿದ್ದಾರೆ.
ಇನ್ನು ಮಂಡಳಿಯ ನಿರ್ಧಾರ ಬಂದ ಮೇಲೆ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, ಏನು ಫೇಸ್ಬುಕ್, ಟ್ವಿಟ್ಟರ್ ಮತ್ತು ಗೂಗಲ್ ಮಾಡಿದೆಯೋ ಅದು ನಾಚಿಕೆಗೇಡು ಎಂದಿದ್ದಾರೆ. “ಮುಕ್ತ ಅಭಿಪ್ರಾಯವನ್ನು ಅಮೆರಿಕ ಅಧ್ಯಕ್ಷರಿಂದ ಕಿತ್ತುಕೊಳ್ಳಲಾಗಿದೆ. ಮೂಲಭೂತವಾದಿ ಉನ್ಮಾದಿ ಎಡಪಂಥೀಯರು ಸತ್ಯಕ್ಕೆ ಹೆದರುತ್ತಿದ್ದಾರೆ,” ಎಂದಿದ್ದಾರೆ ಟ್ರಂಪ್. ಅಷ್ಟೇ ಅಲ್ಲ, ತಮ್ಮನ್ನು ತಾವು ಅಮೆರಿಕ ಅಧ್ಯಕ್ಷ ಎಂದು ಕರೆದುಕೊಂಡಿದ್ದಾರೆ.
ನಮ್ಮ ದೇಶದ ಜನರ ಇದರ ಪರ ನಿಲ್ಲುವುದಿಲ್ಲ. ಇವು ಭಷ್ಟ ಸಾಮಾಜಿಕ ಮಾಧ್ಯಮಗಳು. ಕಂಪೆನಿಗಳು ರಾಜಕೀಯ ಬೆಲೆ ತೆರಬೇಕಾಗುತ್ತದೆ. ಎಂದಿಗೂ ನಮ್ಮ ಚುನಾವಣೆ ಪ್ರಕ್ರಿಯೆಯನ್ನು ನಾಶ ಮಾಡುವುದಕ್ಕೆ ಅಥವಾ ಹಾಳುಗೆಡುವುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಫೇಸ್ಬುಕ್ ವಿಚಾರಣೆ ಮಂಡಳಿ ತೀರ್ಮಾನದ ಬಗ್ಗೆ ಪ್ರತಿಕ್ರಿಯೆ ನೀಡಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರಾಕರಿಸಿದ್ದಾರೆ.
ಮೇಲ್ವಿಚಾರಣೆ ಮಂಡಳಿ ಏನು ಹೇಳಿದೆ? ಸದ್ಯಕ್ಕೆ ಟ್ರಂಪ್ ಮೇಲಿನ ನಿಷೇಧ ಮುಂದುವರಿಯಲಿದೆ. ಫೇಸ್ಬುಕ್ನ ಸಮುದಾಯ ಮಾರ್ಗದರ್ಶಿ ಸೂತ್ರಗಳನ್ನು ಟ್ರಂಪ್ ಮುರಿದಿದ್ದಾರೆ ಎಂದು ನಿರ್ಧರಿಸಿರುವ ಮೇಲ್ವಿಚಾರಣೆ ಮಂಡಳಿ ನಿಷೇಧವನ್ನು ಎತ್ತಿ ಹಿಡಿದಿದೆ.
ಆದರೆ, ಅನಿರ್ದಿಷ್ಟಾವಧಿಗೆ ನಿಷೇಧ ಹೇರಿರುವುದು ಅದರ ಸ್ವಂತ ನಿಯಮಾವಳಿಗಳಲ್ಲೇ ಇಲ್ಲ. ಅನಿರ್ದಿಷ್ಟಾವಧಿಗೆ ಒಬ್ಬ ಬಳಕೆದಾರರನ್ನು ಪ್ಲಾಟ್ಫಾರ್ಮ್ನಿಂದ ದೂರವಿಎಲು ಸಾಧ್ಯವಿಲ್ಲ. ಅದು ಕೂಡ ಯಾವಾಗ ಹಾಗೂ ಹೇಗೆ ಖಾತೆ ಮತ್ತೆ ಜೀವಂತ ಆಗುತ್ತದೆ ಎಂಬುದನ್ನು ತಿಳಿಸದೆ ಹೀಗೆ ಮಾಡವುದು ಸರಿಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಆ ಬಗೆಯ ಟ್ರಂಪ್ ಮೇಲಿನ ನಿಷೇಧವೂ ಯಾವುದೇ ಸ್ಪಷ್ಟ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂದಿದೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪರ ಕೆಲಸ ಮಾಡಿದ್ದ ರಷ್ಯಾಗೆ ಅಮೆರಿಕ ಆರ್ಥಿಕ ನಿರ್ಬಂಧ: ಭಾರತ ಸೇರಿ ಹಲವು ದೇಶಗಳ ಮೇಲೆ ಗಂಭೀರ ಪರಿಣಾಮ
(US former president Donald Trump ban upheld by Facebook oversight board. Here is the details)