Gurugram: ಇತ್ತೀಚೆಗೆ, ಗುರಗಾಂವ್ನಲ್ಲಿ ನಡೆದ ಜಿ 20 ಸಮಾವೇಶದಲ್ಲಿಅಲಂಕಾರಕ್ಕೆಂದು ತಂದಿಟ್ಟ ಹೂವಿನ ಕುಂಡಗಳನ್ನು ಕದ್ದು ಇಬ್ಬರು ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ. ವಿಐಪಿ ಲೈಸೆನ್ಸ್ ಪ್ಲೇಟ್ ಹೊಂದಿರುವ ಅತ್ಯಾಧುನಿಕ ವಾಹನದಲ್ಲಿ ಈ ವ್ಯಕ್ತಿಗಳು ಬಂದು ಇಂತಹ ಕೃತ್ಯವನ್ನು ಹಾಡು ಹಗಲೇ ಎಸಗಿದ್ದಾರೆ. ಈ ಇಬ್ಬರು ಪುರುಷರು ಹೂವಿನ ಕುಂಡಗಳನ್ನು ತೆಗೆದುಕೊಂಡು ತಮ್ಮ ಐಷಾರಾಮಿ ಕಾರಿನ ಡಿಕ್ಕಿಯಲ್ಲಿ ಇರಿಸುವುದನ್ನು ವೀಡಿಯೊದಲ್ಲಿ ಕಾಣಬಹುದು, ಇದರ ಜೊತೆಗೆ ಜಿ20 ಶೃಂಗಸಭೆಯ ಪೋಸ್ಟರ್‌ನ, ಸುತ್ತಮುತ್ತ ಅರಳಿದ ವರ್ಣರಂಜಿತ ಹೂವಿನ ಕುಂಡಗಳೂ ಈ ಪ್ರದೇಶದಲ್ಲಿ ಕಾಣಬಹುದು.
ಗುರುಗ್ರಾಮ್‌ನ ಶಂಕರ್ ಚೌಕ್‌ನಲ್ಲಿ ನಡೆದ ಜಿ20 ಕಾರ್ಯಕ್ರಮದಿಂದ ಇಬ್ಬರು ವ್ಯಕ್ತಿಗಳು ಹೂವಿನ ಕುಂಡಗಳನ್ನು ಕದಿಯುತ್ತಿರುವ ವೀಡಿಯೊವನ್ನು ಪತ್ರಕರ್ತ ರಾಜ್ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೊ ಆನ್‌ಲೈನ್‌ನಲ್ಲಿ ತ್ವರಿತವಾಗಿ ಎಲ್ಲರ ಗಮನ ಸೆಳೆಯಿತು, ಅನೇಕರು ಅದನ್ನು ಹಂಚಿಕೊಂಡಿದ್ದಾರೆ ಮತ್ತು ಘಟನೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ವರ್ಮಾ ಅವರು ವೀಡಿಯೊ ಜೊತೆಗೆ, “ಗುರುಗ್ರಾಮ್‌ನ ಶಂಕರ್ ಚೌಕ್‌ನಲ್ಲಿ #ಕಿಯಾ ಕಾರ್ ಸವಾರ ಹಾಡು ಹಗಲೇ ಸಸ್ಯಗಳ ಕುಂಡಗಳನ್ನು ಕದಿಯುತ್ತಿದ್ದಾನೆ” ಎಂದು ಬರೆದಿದ್ದಾರೆ. ಈ ವಿಷಯವನ್ನು ಪರಿಶೀಲಿಸಲು ಗುರುಗ್ರಾಮ್ ಪೊಲೀಸ್ ಅಧಿಕಾರಿಗಳು ಮತ್ತು ಡೆಪ್ಯೂಟಿ ಕಮಿಷನರ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಹೀಗಾಗಿ ಪ್ರಕರಣ ಜಿಲ್ಲಾಧಿಕಾರಿಗೆ ತಲುಪಿದ್ದು, ತನಿಖೆ ಆರಂಭಿಸುವಂತೆ ಪೊಲೀಸರಿಗೆ ಜಿಲ್ಲಾಧಿಕಾರಿ ತಿಳಿಸಿದರು.
#G20 के सौंदर्यीकरण के “चिंदी चोर”
गुरुग्राम में शंकर चौक पर #Kia कार सवार ने दिनदहाड़े पौधों के गमले उड़ाए ।।@gurgaonpolice @DC_Gurugram @cmohry @MunCorpGurugram @OfficialGMDA @TrafficGGM pic.twitter.com/aeJ2Sbejon— Raj Verma-Journalist?? (@RajKVerma4) February 27, 2023
ಈ ವ್ಯಕ್ತಿಗಳಿಬ್ಬರು ಹೂವಿನ ಕುಂಡಗಳನ್ನು ಏಕೆ ಕದಿಯುತ್ತಿದ್ದರು ಎಂಬುದು ಅಸ್ಪಷ್ಟವಾಗಿದ್ದರೂ, ಈ ವಿಡಿಯೋ ಕಳ್ಳತನ ಮತ್ತು ವಿಧ್ವಂಸಕತೆಯ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಈ ವಿಡಿಯೋ ವೈರಲ್ ಆದ ನಂತರ, ನೆಟ್ಟಿಗರು ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಗುರುಗ್ರಾಮ್ ಪೊಲೀಸರಿ ತನಿಖೆ ನಡೆಸುವಂತೆ ಒತ್ತಾಯಿಸಿದರು. ಕೆಲವು ಬಳಕೆದಾರರು ವಾಹನದ ನಂಬರ್ ಪ್ಲೇಟ್ ಅನ್ನು ಗುರುತಿಸಲು ವೀಡಿಯೊ ತುಣುಕನ್ನು ಜೂಮ್ ಇನ್ ಮಾಡಿದ್ದಾರೆ, ಅದು ವಿಐಪಿ ಗಾಡಿ ಎಂದು ಗುರುತಿಸಿದ್ದಾರೆ.
“ನಾಚಿಕೆಗೇಡು. ಅಧಿಕಾರಿಗಳು ಕ್ರಮಕೈಗೊಳ್ಳಬೇಕು!” ಎಂದು ಒಬ್ಬರು ಕಾಮೆಂಟ್ ಮಾಡಿ್ದರೆ, ಮತ್ತೊಬ್ಬರು “ವಾಹನ ಸಂಖ್ಯೆ ವಿಡಿಯೋದಲ್ಲಿ ಕಾಣಿಸುತ್ತದೆ, ಕಳ್ಳತನವಾಗಿದ್ದಾರೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ದುಬಾರಿ ಕಾರಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
Shameful
The authorities must act!— Chetan Bhutani (@BhutaniChetan) February 28, 2023
Lol people steal flower pots too?
— Partha Barman (@ParthaBarman) February 28, 2023
Lol people steal flower pots too?
— Partha Barman (@ParthaBarman) February 28, 2023
ಈ ವಿಡಿಯೋಗೆ ಕಾಮೆಂಟ್ ಮಾಡಿದ ಒಬ್ಬರ ಪ್ರಕಾರ, “ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ, ಅವರು ನಮ್ಮ ಪರಿಸರವಾದಿ ಅಂಕಲ್. ಅವರು ರಸ್ತೆಗಳಲ್ಲಿ ಸಾಯುತ್ತಿರುವ ಸಸ್ಯಗಳನ್ನು ದತ್ತು ತೆಗೆದುಕೊಂಡು ಅವುಗಳಿಗೆ ಆರೈಕೆ ಮಾಡುತ್ತಾರೆ. ಸಸ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತೋರಿಸಲು ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.
Stop spreading rumours, he is our environmentalist Uncle. He adopts dying plants from the roads and rejuvenates them with new life. He keeps them at home to show how plants are to be maintained. He is setting an example for society.
You journalists always have to find fault ?
— Vipul CypherPunk (@vipul19) February 28, 2023