
ಕೆಲಸದ ಸ್ಥಳದಲ್ಲಿ ಎಷ್ಟೇ ಒತ್ತಡವಿದ್ರೂ ಅನಿರ್ವಾಯ ಕಾರಣಕ್ಕೆ ಎಲ್ಲವನ್ನು ಸಹಿಸಿಕೊಂಡು ಹೋಗ್ತಾರೆ. ಆದರೆ ಜೆನ್ ಝೆಡ್ ಉದ್ಯೋಗಿ (Gen Z Employee) ಸಿಇಒ ಮಾತಿಗೆ ತಿರುಗೇಟು ನೀಡಿದ್ದಾರೆ. ಉದ್ಯೋಗಿಯೊಬ್ಬನ ದಿನಚರಿ ಸಿಇಒಗೆ ಕಿರಿಕಿರಿ ಉಂಟು ಮಾಡಿದೆ. ಆಫೀಸ್ ಟೈಮಿಂಗ್ಸ್ ಪಾಲಿಸುವ ಉದ್ಯೋಗಿಗೆ ಈ ಕಂಪನಿಯನ್ನು ತನ್ನದೇ ಸಂಸ್ಥೆಯಂತೆ ಭಾವಿಸಿ ಹಗಲಿರಳು ದುಡೀಬೇಕು ಸಿಇಒ ಹೇಳಿದ್ದಾರೆ. ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ ಉದ್ಯೋಗಿ ಕಂಪನಿಯಲ್ಲಿ ಶೇ.50ರಷ್ಟು ಷೇರು ನೀಡಿದ್ರೆ ಮಾತ್ರ ನೀವು ಹೇಳಿದ್ದಂತೆ ಕೆಲಸ ಮಾಡುತ್ತೇನೆ ಎಂದು ಉತ್ತರ ನೀಡಿದ್ದಾನೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮರಿಯೋ ಪಿಟಿ (Mario PT) ಹೆಸರಿನ ಎಕ್ಸ್ ಖಾತೆಯಲ್ಲಿ ಸಹೋದ್ಯೋಗಿಯೊಬ್ಬನ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ನನ್ನ ಜೆನ್ ಝೆಡ್ ಸಹೋದ್ಯೋಗಿಯೊಬ್ಬನ ದಿನಚರಿಯು ನಮ್ಮ ಸಿಇಒಗೆ ತೀವ್ರ ಕಿರಿಕಿರಿ ಉಂಟುಮಾಡುತ್ತದೆ. ಪ್ರತಿದಿನ ಸಂಜೆ 4:50 ರ ಹೊತ್ತಿಗೆ ತನ್ನ ಕೆಲಸ ಮುಗಿಸಿ ಕಂಪ್ಯೂಟರ್ ಆಫ್ ಮಾಡುತ್ತಾನೆ. 5:00 ಗಂಟೆಗೆ ಆಫೀಸಿನಿಂದ ಹೋಗುತ್ತಾನೆ. ಬೆಳಗ್ಗಿನ ವೇಳೆ ಅಷ್ಟೇ ನಿಖರವಾಗಿ ಸಮಯವನ್ನು ಪಾಲಿಸುತ್ತಾನೆ. ಕೆಲಸದ ಅವಧಿ ಬೆಳಿಗ್ಗೆ 9:00 ಗಂಟೆಗೆ ಪ್ರಾರಂಭವಾಗುತ್ತದೆ. ಹೀಗಾಗಿ ಪ್ರತಿದಿನವೂ 9 ಗಂಟೆಗೂ ಮುಂಚಿತವಾಗಿಯೇ ಹಾಜರಿರುತ್ತಾನೆ ಎಂದು ಬರೆದುಕೊಂಡಿದ್ದಾರೆ.
One of my Gen Z coworkers has a routine that drives our CEO crazy. Every afternoon, around 4:50 PM, he starts wrapping things up, shuts down his computer, and at exactly 5:00 PM, he’s out the door.
Not 4:59. Not 5:01. Exactly 5:00.
What’s funny is that he’s just as precise in the morning. His shift starts at 9:00 AM, and he’s there before 9 every single day.
The CEO finally called him into his office. He told him, “If you want to move up here, you need to stop thinking like an employee and start thinking like an owner.”
My coworker asked, “What does that mean?”
— Mario, PT (@Mario_Sneh) September 29, 2026
ಇದೆಲ್ಲವನ್ನು ಗಮನಿಸಿದ ಸಿಇಒ ನೀನು ಇಲ್ಲಿ ಉನ್ನತ ಸ್ಥಾನಕ್ಕೇರಬೇಕೆಂದರೆ, ಕೇವಲ ಒಬ್ಬ ಉದ್ಯೋಗಿಯಂತೆ ಯೋಚಿಸುವುದನ್ನು ಬಿಟ್ಟು, ಮಾಲೀಕನಂತೆ ಯೋಚಿಸಲು ಪ್ರಾರಂಭಿಸಬೇಕು. ಇದಕ್ಕೆ ನನ್ನ ಸಹೋದ್ಯೋಗಿ ಪ್ರತಿಕ್ರಿಯಿಸಿದ್ದು, ಏನಿದರ ಅರ್ಥ. ಕಂಪನಿಯಲ್ಲಿ ಶೇ.50ರಷ್ಟು ಷೇರು ನೀಡಿದರೆ ಮಾತ್ರ ಸ್ವಂತ ಕಂಪನಿಯಂತೆ ದುಡಿಯುತ್ತೇನೆ. ಇಲ್ಲದಿದ್ದರೆ ತಾನು ಉದ್ಯೋಗಿಯಾಗಿದ್ದು, ತನ್ನ ಕೆಲಸದ ಸಮಯ ಮುಗಿದ ಬಳಿಕ ಹೊರಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾನೆ.
ಇದನ್ನೂ ಓದಿ: ಜ್ವರ ಇದ್ರೂ ಆಫೀಸಿಗೆ ಹೋದೆ; ಸಿಕ್ ಲೀವ್ ತೆಗೆದುಕೊಳ್ಳುವ ವಿಷ್ಯದಲ್ಲಿ ಕಿವಿ ಮಾತು ಹೇಳಿದ ಯುವತಿ
ಸೆಪ್ಟೆಂಬರ್ 29 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.8 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪ್ರಾಫಿಟ್ ಮಾತ್ರ ಬಾಸ್ ಗೆ ಹೋಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಕಡಿಮೆ ಸಂಬಳ ನೀಡಿ ಈ ರೀತಿ ನಿರೀಕ್ಷಿಸುವುದು ತಪ್ಪು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಟ್ಟೆ ತರಹ ದುಡಿದ್ರೂ ಕೆಲಸ ಮಾತ್ರ ಗ್ಯಾರಂಟಿ ಇರಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ