Viral Video: ಉತ್ಸಾಹದಲ್ಲಿ ನೃತ್ಯ ಮಾಡೋಕೆ ಹೋಗಿ ಯುವತಿಯ ತಲೆಗೆ ಹಾಕಿದ್ದ ವಿಗ್​ ಕಿತ್ತು ಬಂತು! ಮುಂದೇನಾಯ್ತು? ವಿಡಿಯೊ ನೋಡಿ

ಉತ್ಸಾಹದಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯ ವಿಗ್​ ಕಳಚಿ ಬಿದ್ದಿದೆ. ಇದನ್ನು ಗಮನಿಸಿದ ಯುವತಿಗೆ ನಗು ತಡೆಯಲಾಗಿದೆ ನಕ್ಕಿದ್ದಾಳೆ. ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್​ ಆಗಿದೆ. ವಿಡಿಯೊ ಇದೆ ನೀವೇ ನೋಡಿ.

Viral Video: ಉತ್ಸಾಹದಲ್ಲಿ ನೃತ್ಯ ಮಾಡೋಕೆ ಹೋಗಿ ಯುವತಿಯ ತಲೆಗೆ ಹಾಕಿದ್ದ ವಿಗ್​ ಕಿತ್ತು ಬಂತು! ಮುಂದೇನಾಯ್ತು? ವಿಡಿಯೊ ನೋಡಿ
ನೃತ್ಯ ಮಾಡುತ್ತಿರುವ ಯುವತಿ
Edited By:

Updated on: Oct 25, 2021 | 9:30 AM

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವು ವಿಡಿಯೋಗಳು ಹೊಟ್ಟೆ ಹುಣ್ಣಾಗಿವಷ್ಟು ನಗು ತರಿಸುತ್ತವೆ. ಕೆಲವೊಮ್ಮೆ ವಿಡಿಯೊದಲ್ಲಿ ಪ್ರತಿಭಾವಂತರ ನೃತ್ಯದ ಹೆಜ್ಜೆಗಳು ಆಶ್ಚರ್ಯವನ್ನುಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನೃತ್ಯ ಮಾಡುತ್ತಿರುವ ದೃಶ್ಯಗಳು ಹೆಚ್ಚು ವೈರಲ್ ಆಗುತ್ತಿವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಯುವತಿ ಉತ್ಸಾಹದಲ್ಲಿ ನೃತ್ಯ ಮಾಡುತ್ತಿದ್ದಾಳೆ. ಯುವತಿ ಅದ್ಭುತ ಹೆಜ್ಜೆಯನ್ನು ಹಾಕಲು ಮುಂದಾಗಿದ್ದಾಳೆ. ಆ ವೇಳೆ ನಡೆದ ಘಟನೆ ನೋಡಿ ಯುವತಿಯೇ ನಗುತ್ತಿದ್ದಾಳೆ. ವಿಡಿಯೊ ಮಜವಾಗಿದೆ ನೀವೇ ನೋಡಿ.

ವಿಡಿಯೊದಲ್ಲಿ ಗಮನಿಸುವಂತೆ ರೂಮಿನೊಳಗೆ ಯುವತಿ ಡಾನ್ಸ್​ ಪ್ರಾಕ್ಟೀಸ್​ ಮಾಡುತ್ತಿದ್ದಾಳೆ. ತಲೆಗೆ ವಿಗ್​ ಧರಿಸಿದ್ದ ಯುವತಿ ನೃತ್ಯ ಮಾಡುತ್ತಿದ್ದಾಳೆ. ಅದ್ಭುತ ಸ್ಟೆಪ್​ ಹಾಕುತ್ತಾ ಜನರು ಮೆಚ್ಚುವಂತಹ ಡಾನ್ಸ್​ ಮಾಡುತ್ತಿದ್ದ ಯುವತಿಯ ಕಾಲಿಗೆ ಧರಿಸಿದ್ದ ಹೈಹೀಲ್ಡ್​ ಚಪ್ಪಲಿಗೆ ವಿಗ್​ ಸಿಲುಕಿಕೊಂಡಿದೆ. ತಲೆಗೆ ಹಾಕಿದ್ದ ವಿಗ್​ ಕಳಚಿ ಬಿದ್ದಿದೆ. ಇದನ್ನು ಕಂಡ ಯುವತಿಗೆ ನಗು ತಡೆಲಾಗದೆ ನಕ್ಕಿದ್ದಾಳೆ. ಈ ತಮಾಷೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಫುಲ್ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು ಯುವತಿಯ ನೃತ್ಯ ನೋಡಿ ಆಶ್ಚರ್ಯಗೊಂಡಿದ್ದಾರೆ. ಅದ್ಭುತ ನರ್ತಕಿ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಅನಿಸಿಕೆ ಹಂಚಿಕೊಂಡಿದ್ದಾರೆ. ಮುಂದಿನ ಬಾರಿ ಯುವತಿ ವಿಗ್ ಧರಿಸಿ ನೃತ್ಯ ಮಾಡಲು ಮುಂದಾಗುವುದಿಲ್ಲ ಎಂದು ಓರ್ವರು ಹೇಳಿದ್ದಾರೆ. ಇದೇ ರೀತಿಯ ಹಲವು ತಮಾಷೆಯ ಅನಿಸಿಕೆಗಳು ಕೇಳಿ ಬಂದಿವೆ.

ಇದನ್ನೂ ಓದಿ:

Viral Video: ಕ್ಯಾಮೆರಾ ಕಂಡು ಮನುಷ್ಯರಂತೆಯೇ ಪೋಸ್ ಕೊಟ್ಟ ಶ್ವಾನಗಳು; ವಿಡಿಯೋ ನೋಡಿ

Viral Video: ಪುಟ್ಟ ಬಾಲಕ ಏಣಿ ಇಳಿಯುವ ವೇಗ ನೋಡಿ ಬೆರಗಾದ ನೆಟ್ಟಿಗರು; ವಿಡಿಯೋ ಫುಲ್ ವೈರಲ್

TV9 Web

TV9 Kannada

Read More
Loading...
Unable to load recommendations.
Follow Us