Viral Video: ಗೆಳೆಯನನ್ನು ಅರ್ಥ ಮಾಡಿಕೊಳ್ಳುವುದೆಂದರೆ ಹೀಗೆ…

Gift : ಗೆಳೆಯನ ಹುಟ್ಟುಹಬ್ಬದ ದಿನ ಗೆಳತಿ ಕೊಟ್ಟ ಉಡುಗೊರೆ ನೋಡಿ ಆತ ಕಣ್ಣೀರಾಗಿದ್ದು ಯಾಕೆ? ಈ ವಿಡಿಯೋದಲ್ಲಿರುವ ಅಮೂಲ್ಯವಾದ ಉಡುಗೊರೆ ಏನಿರಬಹುದು?

Viral Video: ಗೆಳೆಯನನ್ನು ಅರ್ಥ ಮಾಡಿಕೊಳ್ಳುವುದೆಂದರೆ ಹೀಗೆ...
ಗೆಳತಿ ಅಂಥ ಗಿಫ್ಟ್ ಏನು ಕೊಟ್ಟಿದ್ದು?
Edited By: ಶ್ರೀದೇವಿ ಕಳಸದ

Updated on: Aug 08, 2022 | 5:06 PM

Viral Gift Video : ತನ್ನ ಗೆಳೆಯನ ಹುಟ್ಟುಹಬ್ಬಕ್ಕೆ ಈಕೆ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾಳೆ. ಅದನ್ನು ತೆರೆಯುತ್ತಿದ್ದಂತೆ ಅವನ ಕಣ್ಣುಗಳು ಉಕ್ಕಿಬಂದಿವೆ. ಹುಟ್ಟುಹಬ್ಬದ ದಿನ ಹೀಗೆ ಅವ ದುಃಖಿಸಲು ಕಾರಣವೇನಿರಬಹುದು? ಎಂದು ಇದನ್ನು ಓದುತ್ತಿರುವ ನಿಮಗೂ ಅನುಮಾನ ಬಂದಿರಲು ಸಾಕು. ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ಅವರವರಿಗೇ ಗೊತ್ತು, ಸ್ವಲ್ಪಮಟ್ಟಿಗೆ ಅವರನ್ನು ಪ್ರೀತಿಸುವವರಿಗೂ ಗೊತ್ತು. ಕಳೆದುಕೊಂಡಿದ್ದನ್ನು ಯಾರೂ ಎಂದೂ ಮರಳಿಸಿ ಸರಿದೂಗಿಸಲು ಸಾಧ್ಯವೇ ಇಲ್ಲ. ಹೃದಯದಲ್ಲಿ ಅದೊಂದು ವಿಷಾದದ ಅಲೆ ಸದಾ ಅಚ್ಚೊತ್ತಿಬಿಡುತ್ತದೆ. ಜಗತ್ತಿನ ಯಾವ ಸುಖ ಸಂತೋಷಗಳೂ ಅವರನ್ನು ಸಂತೈಸಲಾರವು. ಇಂಥ ಸತ್ಯ ಗೊತ್ತಿದ್ದ ಈ ಹುಡುಗನ ಗೆಳತಿ ಅಪರೂಪದ ಗಿಫ್ಟ್​ ಕೊಟ್ಟಿದ್ದಾಳೆ. ಆಕೆ ಕೂಡ ಎಂಥ ಸಹೃದಯಿ ಅಲ್ವಾ?

ವಿಡಿಯೋ ನೋಡಿ

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಕ್ರಿಸ್ಟಲ್​ ಕೇಸ್​ವುಳ್ಳ ತ್ರಿಡಿ ಹೊಲೊಗ್ರಾಫಿಕ್​ನೊಳಗೆ ನಾಯಿಯ ಪ್ರತಿಕೃತಿ ಇರುವ ಮೌಲ್ಯಯುತ ಈ ಉಡುಗೊರೆಗಿಂತ, ಲಾನಿ ತನ್ನ ಗೆಳೆಯ ಜಯರ್​ನ ಭಾವನೆಯನ್ನು ಅದೆಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸುಮಾರು 25 ಸಾವಿರ ಲೈಕ್ಸ್​ ಹೊಂದಿದೆ.  600 ಪ್ರತಿಕ್ರಿಯೆಗಳನ್ನು ಪಡೆದಿದೆ.

ಇಂಥ ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 5:06 pm, Mon, 8 August 22

TV9 Web

TV9 Kannada

Read More
Loading...
Unable to load recommendations.
Follow Us