Viral Video: ‘ಗೊತ್ತಿಲ್ಲ, ನನ್ನನ್ನು ಯಾಕೆ ರಿಜೆಕ್ಟ್ ಮಾಡಿದರೋ’ ಬೀದಿಯಲ್ಲಿ ಬಿಕ್ಕಿದ ಮರಿಕೋಗಿಲೆ
Viral Song : ಈ ಮಗುವನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲ ಎಂದು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈಕೆಯ ಧ್ವನಿಮಾಧುರ್ಯಕ್ಕೆ 5.8 ಲಕ್ಷ ನೆಟ್ಟಿಗರು ಫಿದಾ ಆಗಿದ್ದಾರೆ. ಕೇಳಿ ಪಿಯಾ ತೋಸೆ ನೈನಾ...
Viral : ಪ್ರತಿಭಾವಂತರಿಂದ ನಮ್ಮ ದೇಶ ತುಂಬಿತುಳುಕುತ್ತಿದೆ ಎನ್ನುವುದಕ್ಕೆ ಸಾಕ್ಷಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಇಂಥ ಇಂಪಾದ ಹಾಡುಗಳು. ಸಾಕಷ್ಟು ರಿಯಾಲಿಟಿ ಷೋಗಳಲ್ಲಿ ಅದೆಷ್ಟೋ ಪ್ರತಿಭಾವಂತ ಮಕ್ಕಳು, ಹದಿಹರೆಯದವರ ಗಾನವೈಖರಿಯನ್ನು ಕೇಳಿರುತ್ತೀರಿ. ಕೇಳಿ ಇವರಿಗೆ ಒಳ್ಳೆಯ ಅವಕಾಶ ಸಿಗಬೇಕೆಂದು ಮನಸ್ಸಿನಲ್ಲೇ ಹಾರೈಸಿರುತ್ತೀರಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುತ್ತೀರಿ. ಹೀಗೆ ಈ ಹುಡುಗಿಗೆ ಇಲ್ಲಿ ಪಿಯಾ ತೋಸೆ ನೈನಾ ಲಾಗೇ ರೇ ಹಾಡನ್ನು ಇಂಪಾಗಿ ಹಾಡುತ್ತಲೇ ದುಃಖ ಉಮ್ಮಳಿಸಿ ಬಂದಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. 5.8 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಇದು ಪಡೆದಿದೆ. ಯಾಕೆ ಆಕೆ ಅತ್ತಿದ್ದು?
ಈ ಹುಡುಗಿ ಗಾಯನ ಸ್ಪರ್ಧೆಯೊಂದರ ಆಡಿಷನ್ ಕೊಟ್ಟು ಹೊರಬಂದಾಗ ವರದಿಗಾರರೊಬ್ಬರು ಮಾತನಾಡಿಸಿದ್ದಾರೆ. ಆಗ ಆಕೆ ಲತಾ ಮಂಗೇಶ್ಕರ ಹಾಡಿದ ಪಿಯಾ ತೋಸೇ ನೈನಾ ಹಾಡನ್ನು ಹಾಡುತ್ತ, ತಾನು ಸೆಲೆಕ್ಟ್ ಆಗದೇ ಇದ್ದುದಕ್ಕಾಗಿ ಮಧ್ಯದಲ್ಲಿಯೇ ಹಾಡು ನಿಲ್ಲಿಸಿ ಬಿಕ್ಕಿದ್ದಾಳೆ. ಆದರೆ ಎಂಥ ಮಧುರ ಧ್ವನಿ ಇವಳದು, ಯಾರೂ ಮನಸೋಲುವಂಥದ್ದು.
बच्ची रिजेक्ट करने लायक़ तो नहीं ही है. खूबसूरत आवाज़.❤️ pic.twitter.com/86tfINziDB
— Awanish Sharan (@AwanishSharan) August 7, 2022
ಈ ಮುಗ್ಧ ಹುಡುಗಿಯ ಶಾರೀರ, ನಾದ ಹೊಮ್ಮಿಸುವಿಕೆ ನನ್ನ ಹೃದಯವನ್ನು ಗೆದ್ದಿದೆ. ನಿಮ್ಮ ರಿಯಾಲಿಟಿ ಷೋಗೆ ಇವಳನ್ನು ಸೇರಿಸಿಕೊಳ್ಳುವ ಮೂಲಕ ಪ್ರತಿಭೆಗೆ ನ್ಯಾಯ ಒದಗಿಸಿ ಎಂದು Soni tv, Ztv ಗೆ ಹಲವಾರು ಜನರು ಪ್ರತಿಕ್ರಿಯೆಗಳ ಮೂಲಕ ಮನವಿ ಮಾಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ
Published On - 4:33 pm, Mon, 8 August 22