AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಮುದ್ರದಾಳದಲ್ಲಿ ಹೀಗೊಂದು ಸಮ್ಮೋಹಕ ‘ಸುಂಟರಗಾಳಿ’

Tornado : ಯಾವುದೋ ಹಾಲಿವುಡ್ ಸಿನೆಮಾಗೆ ಮಾಡಿದ ಗ್ರಾಫಿಕ್ಸ್ ಇದಲ್ಲ. ಪುಟ್ಟಪುಟ್ಟ ಮೀನುಗಳು ಅದೆಷ್ಟು ಕಲಾತ್ಮಕವಾಗಿ ಈಜುತ್ತ ಹೊರಟಿವೆ... ವಿಡಿಯೋ ನೋಡಿ.

Viral Video: ಸಮುದ್ರದಾಳದಲ್ಲಿ ಹೀಗೊಂದು ಸಮ್ಮೋಹಕ ‘ಸುಂಟರಗಾಳಿ’
ಸಮುದ್ರದಾಳದೊಳಗೆ ಮೀನುಗಳೆಬ್ಬಿಸಿದ ಸುಂಟರಾಗಳಿ
TV9 Web
| Edited By: |

Updated on: Aug 08, 2022 | 3:10 PM

Share

Viral Video: ಸಾವಿರಾರು ಮೀನುಗಳು ಗುಂಪುಗುಂಪಾಗಿ ನೀಲಸಮುದ್ರದೊಳಗೆ ತಿರುಗುತ್ತ ಹೋಗುವ ಈ ದೃಶ್ಯಕ್ಕೆ ಮನಸೋಲದವರು ಯಾರಿದ್ದಾರೆ? ಇಷ್ಟೊಂದು ಮೀನುಗಳು ಒಂದೇ ದಿಕ್ಕಿನತ್ತ ಚಲಿಸಬೇಕೆಂದರೆ… ಯಾರಾದರೂ ಒಬ್ಬರು ದಾರಿ ತೋರಲೇಬೇಕಲ್ಲ? ಸಮುದ್ರದಾಳದಲ್ಲಿ ಇಂಥ ದೃಶ್ಯಗಳನ್ನು ಕಾಣಬಹುದಾಗಿದೆ. ಸಣ್ಣಸಣ್ಣ ಜೀವಿಗಳು ಹೀಗೆ ಗುಂಪುಗುಂಪಾಗಿ ಚಲಿಸುವುದು ಸಹಜ. ಆದರೆ ಈ ಚಲನೆಯಲ್ಲಿ ಇಷ್ಟೊಂದು ಸೌಂದರ್ಯ ಅಡಗಿದೆ ಎನ್ನುವುದು ಸ್ಪಷ್ಟವಾಗಿ ಹೀಗೆ ಗೋಚರಿಸಿದಾಗಲೇ ತಿಳಿಯುವುದು. ಈ ಪುಟ್ಟಮೀನುಗಳ ನಾಯಕನು ಯಾರೋ? ಈ ವಿಡಿಯೋ ಅನ್ನು ಜಪಾನ್ ಮೂಲದ ತಸುರೋ ಎನ್ನುವವರು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಸುಮಾರು ಎರಡೂರೆ ಲಕ್ಷದಷ್ಟು ಲೈಕ್ಸ್​, 3.6 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಯನ್ನು ಇದು ಹೊಂದಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by ?Tatsuro ? (@ta.tsu.1)

ಈ ನಯನಮನೋಹರವಾದ ದೃಶ್ಯವನ್ನು ನೋಡಿ ಅನೇಕ ನೆಟ್ಟಿಗರು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋ ನೋಡಲು ಕ್ಲಿಕ್ ಮಾಡಿ