Viral Video: ‘ಕಂದ ನಿಮ್ಮವನೆಂದು ಕಾಣಿರಿ’ ಹೀಗೆ ಹೇಳುತ್ತಿರುವವರು ಯಾರೆಂದು ಒಮ್ಮೆ ನೋಡಿ!

TV9 Digital Desk

| Edited By: ಶ್ರೀದೇವಿ ಕಳಸದ

Updated on:Aug 08, 2022 | 1:27 PM

Video : ಒರಾಂಗುಟಾನ್ ಮೇಡಮ್​ನ ಈ ಸಾಮರಸ್ಯದ ಪಾಠಕ್ಕೆ ನಮ್ಮೆಲ್ಲ ರಾಜಕಾರಣಿಗಳನ್ನು ಕಳಿಸಿದರೆ ಹೇಗಿರುತ್ತೆ?

Viral Video: ‘ಕಂದ ನಿಮ್ಮವನೆಂದು ಕಾಣಿರಿ’ ಹೀಗೆ ಹೇಳುತ್ತಿರುವವರು ಯಾರೆಂದು ಒಮ್ಮೆ ನೋಡಿ!
ಹುಲಿಮರಿಗೆ ಬಾಟಲಿ ಹಾಲು ಕುಡಿಸುತ್ತಿರುವ ಒರಾಂಗುಟಾನ್

Viral : ಮಹೀಂದ್ರಾ ಗ್ರೂಪ್​ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಆಗಾಗ ಪ್ರಾಣಿಪ್ರೀತಿಗೆ ಸಂಬಂಧಿಸಿದ ಪೋಸ್ಟ್​ಗಳನ್ನು ಹಂಚಿಕೊಂಡು ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಈ ಬಾರಿ ಇವರು ಹಂಚಿಕೊಂಡ ವಿಡಿಯೋ ನೆಟ್ಟಿಗರಲ್ಲಿ ವಿಶೇಷ ಸಂಚಲನ ಮೂಡಿಸಿದೆ. ಈ ವಿಡಿಯೋ ನೋಡಿದ ನೀವು ವಿವಿಧ ಆಯಾಮಗಳಿಂದ ಯೋಚಿಸಲಾರಂಭಿಸುತ್ತೀರಿ. ಹಾಗೆಯೇ ಸದ್ಯದ ಸಾಮಾಜಿಕ, ರಾಜಕೀಯ ವಾತಾವರಣದಲ್ಲಿ ಇದು ಅನೇಕ ರೀತಿಯ ಸಂದೇಶಗಳನ್ನು ಹೊಮ್ಮಿಸುವಂತಿದೆ. ಒರಾಂಗುಟಾನ್ ಹುಲಿಮರಿಗಳಿಗೆ ಹಾಲು ಕೊಡುತ್ತಿರುವ ಈ ವಿಡಿಯೋ ಐದೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆ, ಸುಮಾರು 23 ಸಾವಿರ ಲೈಕ್ಸ್​, 2,500 ಮರುಹಂಚಿಕೆ ಪಡೆದಿದೆ. ನಮ್ಮ ಮಕ್ಕಳೇ ಹಸಿವಿನಿಂದ ಅಳುತ್ತಿದ್ದರೆ, ಇನ್ನೇನೋ ಕಾರಣಕ್ಕೆ ಕಿರಿಕಿರಿ ಮಾಡುತ್ತಿದ್ದರೆ ನಮಗೆ ಸಂಭಾಳಿಸಲು ಪುರುಸೊತ್ತಿರುವುದಿಲ್ಲ. ಅಂಥದ್ದರಲ್ಲಿ ಬೇರೊಬ್ಬರ ಮಕ್ಕಳನ್ನು… ಆದರೆ ಇದು ಪ್ರಾಣಿಗಳಲ್ಲಿ ಅಯಾಚಿತವಾಗಿ ಸಾಧ್ಯವಾಗುತ್ತದೆ. ಹೇಗೆ ಎಂದು ಈ ವಿಡಿಯೋ ನೋಡಿ.

ಇದನ್ನು ನೋಡಿದ ನೆಟ್ಟಿಗರು, ‘ಈ ಪ್ರಾಣಿಗಳ ಲೋಕದಿಂದಾದರೂ ಪ್ರೀತಿ ಮತ್ತು ಸಾಮರಸ್ಯದ ಮಹತ್ವ ಅರಿಯಿರಿ. ಹೀಗೆ ಬದುಕಲು ಕಲಿಯಿರಿ’ ಎಂದಿದ್ದಾರೆ. ‘ಸಮಾನತೆ ಮತ್ತು ಪರಸ್ಪರ ಒಳಗೊಳ್ಳುವಿಕೆಯನ್ನು ಇಂಥ ಪ್ರಾಣಿಗಳಿಂದಲೇ ಮನುಷ್ಯ ಮರುತರಬೇತಿ ಪಡೆಯಬೇಕು’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ‘ಪ್ರಾಣಿಗಳು ಇತರೇ ವರ್ಗದ ಪ್ರಾಣಿಗಳನ್ನು ಪ್ರೀತಿಸುವುದೇ ಶುದ್ಧ ಸಂತೋಷ’ ಎಂದಿದ್ದಾರೆ. ‘ತಾಯಿಯ ಮಮತೆ ಅಪರಿಮಿತ’ ಎಂದು ಮಗದೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಇಂಥ ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada