Viral Video: ಇಂಥ ಫ್ರೆಂಡ್​ಶಿಪ್​ ನಿಮಗೆ ದಕ್ಕಿದೆಯೇ? ವಿಡಿಯೋ ನೋಡಿ

Dog Love : ಇಷ್ಟೊಂದು ಪ್ರೀತಿಯನ್ನು ಅದಮ್ಯವಾಗಿ ಪಡೆಯುತ್ತಿರುವ ಇವಳೇ ನಿಜವಾದ ಶ್ರೀಮಂತೆ ಎಂದಿದ್ದಾರೆ ನೆಟ್ಟಿಗರು. 

Viral Video: ಇಂಥ ಫ್ರೆಂಡ್​ಶಿಪ್​ ನಿಮಗೆ ದಕ್ಕಿದೆಯೇ? ವಿಡಿಯೋ ನೋಡಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 08, 2022 | 12:47 PM

Viral: ಈ ವಿಡಿಯೋ ನೋಡಿ. ಈ ಸಂಬಂಧದಲ್ಲಿ ಎಲ್ಲವೂ ಮೌನದಲ್ಲಿ ಅರ್ಥ ಮಾಡಿಕೊಳ್ಳಲ್ಪಡುತ್ತದೆ. ಒಂದು ನೇವರಿಕೆ, ಒಂದು ಆಪ್ತನೋಟ, ಒಂದು ಕಾಳಜಿ, ಒಂದು ಅಪ್ಪುಗೆ… ಅದೆಷ್ಟು ಭರವಸೆ ಇದೆ ಇಲ್ಲಿ. ಸಾವಿರಾರು ವೈರಲ್ ಪೋಸ್ಟ್​ಗಳನ್ನು ನೋಡಿದ್ದೀರಿ; ಬೆಕ್ಕು, ನಾಯಿ, ಕೋತಿ ಹೀಗೆ ಅದೆಷ್ಟೋ ಪ್ರಾಣಿಗಳು ಸಾಕಿದವರನ್ನು ಮುದ್ದಿಸಿದ್ದು, ಮೊಂಡಾಟ ಮಾಡಿದ್ದು, ಕೋಪ ಮಾಡಿಕೊಂಡಿದ್ದು, ಪ್ರೀತಿಸಿದ್ದು ಹೀಗೆ. ಅಲ್ಲದೆ ಸಾಕಷ್ಟು ತಳಿಯ ನಾಯಿಗಳ ಬುದ್ಧಿವಂತಿಕೆ ಪ್ರದರ್ಶನ ನೀಡಿದ್ದನ್ನು ನೋಡಿ ಅಚ್ಚರಿ ಪಟ್ಟಿದ್ದೀರಿ. ಆದರೆ ಪ್ರೀತಿ ಎಂದೂ ಜಾಣತನದಿಂದ, ಬುದ್ಧಿವಂತಿಕೆಯಿಂದ ಕೂಡಿರುವುದಿಲ್ಲ. ಅದೊಂದು ಉತ್ಕೃಷ್ಟ ಭಾವ. ಅದಕ್ಕೆ ನೀತಿ ನಿಯಮಗಳಿಲ್ಲ. ಯಾವುದೇ ಗಡಿಗೋಡೆಗಳಿಲ್ಲ. ಈ ಹೆಣ್ಣುಮಗಳನ್ನು ಈ ನಾಯಿಗಳೆಲ್ಲ ಅಪ್ಪಿಕೊಳ್ಳುವುದನ್ನು ನೋಡಿದರೆ ಬಹುಶಃ ಸ್ನೇಹ ಪ್ರೀತಿ ಸಂಬಂಧ ಎಂದರೆ ಏನೆಂದು ಅರ್ಥವಾಗುತ್ತದೆ. ಈ ವಿಡಿಯೋವನ್ನು ಆರ್​ಪಿಜಿ ಎಂಟರ್​​ಪ್ರೈಝಸ್​ನ ಅಧ್ಯಕ್ಷ ಹರ್ಷ ಗೋಯೆಂಕಾ ಮರುಹಂಚಿಕೆ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದವರು ಅಜಯ್​ ಜೋಯ್​ ಎಂಬುವವರು.

‘ಸ್ನೇಹಕ್ಕೆ ಯಾವುದೇ ಲಿಂಗ, ಧರ್ಮ, ವಯಸ್ಸಿನ ಹಂಗಿಲ್ಲ. ಇಬ್ಬರು ವ್ಯಕ್ತಿಗಳ ಮಧ್ಯೆ ಮಾತ್ರ ಸ್ನೇಹವಿರಬೇಕೆಂದಿಲ್ಲ. ಪ್ರಾಣಿಗಳೊಂದಿಗೆ ಹೀಗೆ ಆಪ್ತ ಸಂಬಂಧ ಬೆಳೆಸಬಹುದು. ಈ ಹೆಣ್ಣುಮಗಳನ್ನು ಈ ನಾಯಿಗಳು ಗುಂಪಾಗಿ ಬಂದು ಅಪ್ಪಿಕೊಳ್ಳುವ ದೃಶ್ಯ ನೋಡಿ. ಬಹುಶಃ ಇದೇ ನಿಜವಾದ ಸ್ನೇಹಸಂಬಂಧ’ ಎಂದಿದ್ದಾರೆ ಹರ್ಷ. ಈ ವಿಡಿಇಯೋ 53,000 ವೀಕ್ಷಣೆ ಕಂಡಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಇಷ್ಟೆಲ್ಲ ನಾಯಿಗಳು ಒಮ್ಮೆಲೆ ಬಂದು ಆ ಹೆಣ್ಣುಮಗಳನ್ನು ಅಪ್ಪಿಕೊಳ್ಳುವುದನ್ನು ನೋಡಿದರೆ ಎಂಥ ಬಾಂಧವ್ಯ ಇರಬೇಕು ಇವರೆಲ್ಲರ ಮಧ್ಯೆ. ಬಾಂಧವ್ಯ ಅನ್ನುವುದು ಕ್ಷಣಾರ್ಧದಲ್ಲಿ ಆಗುವಂಥದ್ದಲ್ಲ. ಬೀಜ ನೆಟ್ಟು ಮರ ಬೆಳೆಸಿದಂತೆ. ಹಾಗೆಯೇ ಈ ಸ್ನೇಹ ಪ್ರೀತಿ ಎನ್ನುವುದಕ್ಕೆ ಅಗಾಧ ತಾಳ್ಮೆ, ಸಹನೆ, ಆದ್ಯತೆ ಎಲ್ಲವೂ ಬೇಕಾಗುತ್ತದೆ. ಅದಿಲ್ಲಿ ಸಾಧ್ಯವಾಗಿದೆ. ಸಾಧ್ಯವಾಗಿದೆ ಎಂದರೆ ಇಲ್ಲಿರುವುದು ನಿಸ್ಪೃಹತೆ.

ಇನ್ನಷ್ಟು ಇಂಥ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 12:46 pm, Mon, 8 August 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್