ಪ್ರೀತಿ ಮಾಡಿದರೆ ಸಾಕು ಮನೆಯಲ್ಲಿ ನೂರೆಂಟು ಪ್ರಶ್ನೆಗಳು, ಯಾವ ಜಾತಿ ಆತನ ಸಂಪ್ರದಾಯವೇನು, ಒಂದೊಮ್ಮೆ ಬ್ರೇಕ್ ಅಪ್ ಆಗಿಬಿಟ್ಟರಂತೂ ಮನೆಯವರಿಗಿಂತ ನೆಂಟರಿಷ್ಟರ ನುಡಿಯೇ ಬ್ರೇಕ್ ಅಪ್ಗಿಂತ ಹೆಚ್ಚು ನೋವನ್ನು ನೀಡುತ್ತದೆ. ಆದರೆ ಇಂಥಾ ಅಜ್ಜಿ ಜೀವನದಲ್ಲಿದ್ದರೆ ಯಾವ ನೋವು ಆಗುವುದಿಲ್ಲ ನೋಡಿ. ಬ್ರೇಕಪ್‌ನಿಂದ ಬೇಸರಗೊಂಡ ಮೊಮ್ಮಗಳಿಗೆ ಅಜ್ಜಿ ಈ ಸುಂದರವಾದ ಸಲಹೆಯನ್ನು ನೀಡಿದ್ದಾರೆ, ಈ ವಿಡಿಯೋ ನೋಡಿದ್ರೆ ನೀವು ಕೂಡ ನಿಮಗೆ ಇಂಥಹದ್ದೇ ಅಜ್ಜಿ ಇರ್ಬೇಕಿತ್ತು ಎಂದು ಖಂಡಿತವಾಗಿಯೂ ಹೇಳುತ್ತೀರಿ.
ಆಕೆ ಬ್ರೇಕ್ ಅಪ್ ಆಗಿರುವ ಬಗ್ಗೆ ತನ್ನ ಅಜ್ಜಿಯ ಬಳಿ ಹೇಳಿಕೊಂಡಿದ್ದಾಳೆ, ಆಗ ಅಜ್ಜಿ ಆಕೆಗೆ ಬೈಯ್ಯುವ ಬದಲು ಅಥವಾ ಇದೇ ರೀತಿ ಆಗುತ್ತೆ ಎಂದು ನನಗೆ ಮೊದಲೇ ತಿಳಿದಿತ್ತು ಎಂದು ಹೀಯಾಳಿಸುವ ಬದಲು ಒಳ್ಳೆಯ ಮಾತುಗಳನ್ನಾಡಿದ್ದಾರೆ.
ನಮ್ಮದು ನಾಲ್ಕು ದಿನಗಳ ಬದುಕು ಮಗಳೇ, ಯಾವಾಗ ಹೋಗುತ್ತೇವೆ, ಎಷ್ಟು ದಿನ ಬಾಳುತ್ತೇವೆ ಎಂಬುದು ಯಾರಿಗೂ ಗೊತ್ತಿಲ್ಲ, ಹಾಗಾಗಿ ಬ್ರೇಕ್ ಅಪ್ ಆದ್ರೆ ಏನಾಯ್ತು ಮತ್ತೊಬ್ಬನನ್ನು ಹುಡುಕು ಎಂದಿದ್ದಾರೆ.
ಮತ್ತಷ್ಟು ಓದಿ: Love Breakup: ಲವ್ ಬ್ರೇಕ್ ಅಪ್ ನೋವಿನಿಂದ ಹೊರಬರುವುದು ಹೇಗೆ? ಇಲ್ಲಿದೆ ಕೆಲವು ಸಲಹೆ
ಜೀವನ ಇರುವುದು ಬೇಸರ ಮಾಡಿಕೊಳ್ಳುತ್ತಾ ಕೊರುಗುವುದನ್ನು ಜೀವನವನ್ನು ನಿಮಗೆ ಹೇಗೆ ಬೇಕೋ ಹಾಗೆ ಬದುಕಿ, ನಿಮ್ಮನ್ನು ಇಷ್ಟ ಪಡುವವರು ನಿಮ್ಮ ಜತೆ ಇರುತ್ತಾರೆ ಇಲ್ಲದವರ ಬಗ್ಗೆ ಬೇಸರ ಬೇಡ ಎಂದು ಧೈರ್ಯ ಹೇಳಿದ್ದಾರೆ.
ಈ ಅಜ್ಜಿ-ಮೊಮ್ಮಗಳ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇದುವರೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋವನ್ನು ಲಕ್ಷ ಲಕ್ಷ ಮಂದಿ ನೋಡಿದ್ದಾರೆ. ಅನೇಕ ಬಳಕೆದಾರರು ಅಜ್ಜಿಯ ಸಲಹೆಯನ್ನು ಶ್ಲಾಘಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ