Dog Video : ಬೆಕ್ಕು ನಾಯಿ ಸ್ನೇಹದಿಂದ ಇರುವುದನ್ನು ನೋಡಿದ್ದೀರಿ. ಕೋತಿ ನಾಯಿಗಳು ಪರಸ್ಪರ ಹೊಂದಿಕೊಂಡು ಇರುವುದನ್ನು ನೋಡಿದ್ದೀರಿ. ಹುಲಿಮರಿ ಮತ್ತು ಗೋರಿಲ್ಲಾ ಮರಿಗಳು ಆಟವಾಡಿಕೊಂಡಿರುವುದನ್ನು ನೋಡಿದ್ದೀರಿ. ಆದರೆ ಕರು ಮತ್ತು ನಾಯಿಗಳು ಗೆಳೆತನದಿಂದ ಇರುವುದನ್ನು ನೋಡಿದ್ದೀರಾ? ಹಾಗಿದ್ದರೆ ಈ ಕೆಳಗಿನ ವಿಡಿಯೋ ನೋಡಿ.
Doggo is friends with the calf..
by u/JettMe_Red in AnimalsBeingBros
ಈಗಾಗಲೇ ಈ ವಿಡಿಯೋ ಅನ್ನು ಸುಮಾರು 22,000 ಜನರು ನೋಡಿದ್ದಾರೆ. ಈ ವಿಡಿಯೋ ಎಷ್ಟು ಆಪ್ತವಾಗಿದೆ ಎಂದು ಅನೇಕರು ಕೊಂಡಾಡಿದ್ದಾರೆ. ಸ್ವಜಾತಿ ಸ್ನೇಹ ಸಹಜ. ಆದರೆ ಅನ್ಯಜಾತಿಯ ಈ ಬಂಧ ನಿಜಕ್ಕೂ ಅಪರೂಪ. ಇಂಥ ಸಹಾನುಭೂತಿ ಮನುಷ್ಯರಲ್ಲಿಯೂ ಇದ್ದರೆ ಎನ್ನುತ್ತಿದ್ದಾರೆ ಅನೇಕರು.
ಇದನ್ನೂ ಓದಿ : ಹಾವು ಆಕಳಿಸಿದಾಗ; ಬೆಳಗ್ಗೆ ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ; ಎಂದ ನೆಟ್ಟಿಗ
ನಾಯಿ ಕರುವನ್ನು ನೆಕ್ಕುವಾಗ, ಕರುವು ನಾಯಿಯನ್ನು ನೆಕ್ಕುವಾಗ ಅವುಗಳ ಮುಖಭಾವವನ್ನು ಗಮನಿಸಿ, ಮತ್ತೆ ಮತ್ತೆ ಈ ವಿಡಿಯೋ ನೋಡಬೇಕು ಎನ್ನಿಸುತ್ತದೆ. ನೂರಾರು ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಆಕಳು ಎಂದರೆ ದೊಡ್ಡದಾದ ನಾಯಿಯೇ ಎಂದರ್ಥ. ಎರಡೂ ಅಷ್ಟೇ ಆಪ್ತಪ್ರಾಣಿಗಳು ಎಂದಿದ್ದಾರೆ ಒಬ್ಬರು. ಪ್ರಾಣಿಗಳು ಎಂದರೆ ಸ್ನೇಹಿತರು, ಆಹಾರ ಅಲ್ಲ ಎಂದು ಮತ್ತೊಬ್ಬರು ಹೇಳಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:37 am, Thu, 4 May 23