ಮದುವೆ ಎಂದರೆ ಅಲ್ಲಿ ಹಲವಾರು ಸಂಪ್ರದಾಯ, ಆಚರಣೆಗಳು ನಡೆಯುತ್ತದೆ. ಹಾಗೇ ಮದುವೆ ಮುಗಿದ ಬಳಿಕ ವಧು-ವರ ಪರಸ್ಪರ ಲಾಡು ಅಥವಾ ಇನ್ನಿತರ ಯಾವುದಾದರೂ ಒಂದು ಸಿಹಿಯನ್ನು ತಿನ್ನಿಸಿಕೊಳ್ಳುತ್ತಾರೆ. ಈ ಮದುವೆಯಲ್ಲಿ ಪತಿ ತನ್ನ ಪತ್ನಿಗೆ ಲಾಡು ತಿನ್ನಿಸಿದ ರೀತಿ ನಿಜಕ್ಕೂ ಕೋಪತರಿಸುವಂತಿದೆ. ವೈರಲ್ ಆದ ವಿಡಿಯೋ ನೋಡಿ ನೆಟ್ಟಿಗರು, ಇದು ಪ್ರೀತಿಯಲ್ಲ..ದೌರ್ಜನ್ಯ. ಮದುವೆ ದಿನವೇ ಪತ್ನಿಯನ್ನು ಹಿಂಸಿಸಿದ ಈ ವ್ಯಕ್ತಿ ಇನ್ನು ಮುಂದೆಯೂ ಹಾಗೇ ನಡೆಸಿಕೊಳ್ಳುತ್ತಾನೆ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಗಿದ್ದಿಷ್ಟು..ಮದುವೆ ಮುಗಿದಿದೆ. ವಧು-ವರ ಇಬ್ಬರೂ ಹಾರ ಹಾಕಿಕೊಂಡೇ ಇದ್ದಾರೆ. ಬಂಧುಬಳಗದವರೂ ಸುತ್ತಲೂ ಇದ್ದಾರೆ. ವಧುವಿನ ಕೈಯಲ್ಲಿ ಲಾಡು ಕೊಟ್ಟು ಅದನ್ನು ಪತಿಗೆ ತಿನ್ನಿಸುವಂತೆ ಮೊದಲು ಹೇಳಲಾಯಿತು. ಅದರಂತೆ ಆಕೆ ಆತನ ಬಾಯಿಗೆ ಇಟ್ಟಳು. ಒಂದೇ ಗುಟುಕಿಗೆ ಆ ಲಾಡನ್ನು ಅವನೇನೋ ತಿಂದ. ಆದರೆ ತಿರುಗಿ ವರ ತನ್ನ ಪತ್ನಿಗೆ ಲಾಡು ತಿನ್ನಿಸಲು ಬಂದಾಗ ಅವಳು ನಾಚಿಕೆಯಿಂದ ಪಕ್ಕಕ್ಕೆ ಬಾಗಿ, ಮುಖ ತಿರುಗಿಸಿದಳು. ಅದೇನಾಯಿತೋ ಇವನಿಗೆ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ತುರುಕೇಬಿಟ್ಟ… ಈ ವಿಡಿಯೋ ನೋಡಿದರೆ ನಿಮಗೂ ಒಂದು ಕ್ಷಣ ಕ್ರೂರತನ ಅನ್ನಿಸದೆ ಇರದು.
ಈ ವಿಡಿಯೋವನ್ನು ಇನ್ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡು, ಇದೊಂದು ಫನ್ನಿ ಎಂದಿದ್ದಾರೆ. ಆದರೆ ನೆಟ್ಟಿಗರು ಇದು ಜೋಕ್ ಅಲ್ಲ ಬದಲಿಗೆ ದೌರ್ಜನ್ಯ ಎಂದಿದ್ದಾರೆ. ಪತಿಯಾದವನು ಮದುವೆ ದಿನ ಹೀಗೆ ನಡೆಸಿಕೊಳ್ಳುವುದಾ ಎಂದೂ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Covishield ಕೊವಿಶೀಲ್ಡ್ ಲಸಿಕೆ ಪಡೆದವರ ಪ್ರಯಾಣಕ್ಕೆ ಐರೋಪ್ಯ ಒಕ್ಕೂಟದ ಏಳು ದೇಶಗಳಿಂದ ಅನುಮತಿ
Groom Forcefully Shoves Ladoo Into Bride’s Mouth
Published On - 5:48 pm, Thu, 1 July 21