ಮದುವೆ ಸಮಾರಂಭಗಳಲ್ಲಿ ಆಗುವ ತರ್ಲೆ ತಮಾಷೆಗಳು, ಎಡವಟ್ಟುಗಳು, ಜಗಳಗಳು, ಅವಾಂತರಗಳ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇವುಗಳಲ್ಲಿ ಕೆಲವೊಂದು ದೃಶ್ಯಗಳು ಅತಿರೇಕವೆನಿಸಿದ್ರೂ ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಹೆಂಡ್ತಿ ಜೊತೆ ಒಂದು ಸ್ಟೆಪ್ಸ್ ಹಾಕಪ್ಪಾ ಎಂದು ಹೇಳಿದ್ದಕ್ಕೆ ಕೋಪಗೊಂಡ ಮದುಮಗ ಸ್ಟೇಜ್ ಮೇಲೆ ಡಾನ್ಸ್ ಮಾಡುತ್ತಲೇ ಮದುಮಗಳ ಕೈ ಹಿಡಿದು ಎಳೆದಾಡಿ ದೊಡ್ಡ ರಂಪಾಟವನ್ನೇ ಮಾಡಿದ್ದಾನೆ. ಮದುಮಗನ ಈ ಅವಾಂತರವನ್ನು ಕಂಡು ನೋಡುಗರು ಬೆಚ್ಚಿಬಿದ್ದಿದ್ದಾರೆ.
ಮದುವೆ ಮಂಟಪದಲ್ಲಿ ಫ್ರೆಂಡ್ಸ್ ಮತ್ತು ಸಂಬಂಧಿಕರೆಲ್ಲರೂ ಸೇರಿ ಮದುಗನನ್ನು ಚುಡಾಯಿಸುತ್ತಾ ಹೆಂಡ್ತಿ ಜೊತೆ ಡಾನ್ಸ್ ಮಾಡು ಎಂದು ಹೇಳಿದ್ರೆ ಮದುಮಗ ನಾಚಿಕೆಯಿಂದ ಮತ್ತು ಖುಷಿಯಿಂದಲೇ ಮದುಮಗಳ ಜೊತೆ ಸ್ಟೆಪ್ಸ್ ಹಾಕುತ್ತಾನೆ. ಆದ್ರೆ ಇಲ್ಲೊಬ್ಬ ಮದುಮಗ ಹೆಂಡ್ತಿ ಜೊತೆ ಡಾನ್ಸ್ ಮಾಡು ಎಂದು ಹೇಳಿದ್ದಕ್ಕೆ ಸ್ಟೇಜ್ ಮೇಲೆ ದೊಡ್ಡ ಅವಾಂತರವನ್ನೇ ಮಾಡಿದ್ದಾನೆ. ಈ ಕುರಿತ ಪೋಸ್ಟ್ ಒಂದನ್ನು lavanyawritings ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇನ್ನೊಮ್ಮೆ ಡಾನ್ಸ್ ಮಾಡಲು ಹೇಳುತ್ತೀರಾ…” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸ್ನೇಹಿತರೆಲ್ಲರೂ ಸೇರಿ ಮದುಮಗನ ಬಳಿ ಹೆಂಡ್ತಿ ಜೊತೆ ಒಂದು ಡಾನ್ಸ್ ಮಾಡಪ್ಪಾ ಎಂದು ಹೇಳುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಡಾನ್ಸ್ ಮಾಡುತ್ತಾ ಅದೇನಾಯ್ತೋ ಗೊತ್ತಿಲ್ಲ ಆತ ಮದುಮಗಳ ಕೈಯನ್ನು ಹಿಡಿದು ಎಳೆದಾಡಿ ಸ್ಟೇಜ್ ಮೇಲೆ ರಂಪಾಟವನ್ನು ಮಾಡಿದ್ದಾನೆ.
ಇದನ್ನೂ ಓದಿ: ಲಿಫ್ಟ್‌ನಲ್ಲಿ ಮೈ ಮುಟ್ಟಿ ಕಿರುಕುಳ ಕೊಟ್ಟವನ ಗ್ರಹಚಾರ ಬಿಡಿಸಿದ ಮಹಿಳೆ
ಅಕ್ಟೋಬರ್ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಬಹುಶಃ ಮದುಮಗ ಶಾರ್ಟ್ ಟೆಂಪರ್ಡ್ ಆಗಿರಬೇಕು, ಹಾಗಾಗಿ ಕಿರಿಕಿರಿಯಿಂದ ಹೀಗೆ ಮಾಡಿದ್ದಾನೆʼ ಎಂಬ ಕಾಮೆಂಟ್ ಬರೆದುಕೊಂಡಿದ್ಧಾರೆ. ಇನ್ನೂ ಕೆಲವರು ʼಇದು ಸ್ಕ್ರಿಪ್ಟೆಡ್ ವಿಡಿಯೋ ಇದ್ದಂತೆ ಕಾಣುತ್ತದೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ