ವಿಶ್ವದಲ್ಲೇ ಅತೀ ಚಿಕ್ಕ ಗಾತ್ರದ ಅಂದರೆ ಟಿವಿ ರಿಮೋಟ್ಗಿಂತಲೂ ಚಿಕ್ಕ ಗಾತ್ರದ ಶ್ವಾನ ಗಿನ್ನೆಸ್ ವಿಶ್ವ ದಾಖಲೆ( Guinness World Records) ಯನ್ನು ಪಡೆದುಕೊಂಡಿದೆ. ಚಿಹೋವಾ(Chihuahua) ತಳಿಗೆ ಸೇರಿದ ಈ ಶ್ವಾನಕ್ಕೆ ಪರ್ಲ್(Pearl) ಎಂದು ಹೆಸರಿಡಲಾಗಿದೆ ಹಾಗೂ ಇದು ಎರಡು ವರ್ಷದ ಹೆಣ್ಣು ಶ್ವಾನ. ಸೆಪ್ಟೆಂಬರ್ 1, 2020 ರಂದು ಜನಿಸಿದ ಪರ್ಲ್, 9.14 ಸೆಂ.ಮೀ ಉದ್ದ ಹಾಗೂ 12.7 ಸೆಂ. ಮೀ ಎತ್ತರವಿದೆ. 2023 ಏಪ್ರಿಲ್ 10ರಂದು ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಟ್ವಿಟರ್ ಖಾತೆಯಿಂದ ವಿಶ್ವದ ಅತೀ ಚಿಕ್ಕ ಗಾತ್ರದ ಶ್ವಾನ ಪೋಟೋಗಳನ್ನು ಹಂಚಿಕೊಳ್ಳಲಾಗಿದೆ. ಆ ಪೋಸ್ಟ್ ಇಲ್ಲಿದೆ ನೋಡಿ.
Say hello to the shortest dog in the world, Pearl ? https://t.co/8lVcgmMOXs
— Guinness World Records (@GWR) April 9, 2023
ಇದನ್ನೂ ಓದಿ: ನಕಲಿ ಅನಾರೋಗ್ಯ ರಜೆಗಳಿಗೆ ಬ್ರೇಕ್; ಈಗ ನಿಮ್ಮ ಧ್ವನಿಯಿಂದ ನಿಮಗೆ ಶೀತವಿದೆಯೇ ಎಂದು ಕೃತಕ ಬುದ್ಧಿಮತ್ತೆ ಕಂಡುಹಿಡಿಯಬಹುದು!
ಪರ್ಲ್ ಶ್ವಾನದ ಮಾಲೀಕರಾದ ವನೇಸಾ ಸೆಮ್ಲರ್ ಇಟಾಲಿಯನ್ ಟಿವಿ ಶೋ ಒಂದರಲ್ಲಿ ತಮ್ಮ ಪರ್ಲ್ ಬಗ್ಗೆ ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಪರ್ಲ್ ಮಾಲೀಕ ತನ್ನ ಮುದ್ದಾದ ಶ್ವಾನದ ಬಗೆಗಿನ ಸಾಕಷ್ಟು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗಾ ಪರ್ಲ್ ಸೋಶಿಯಲ್ ಮೀಡಿಯಾ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:07 pm, Tue, 11 April 23