Guinness Records :ವಿಶ್ವ ದಾಖಲೆ ಬರೆದ ವಿಶ್ವದ ಅತಿ ಎತ್ತರದ ಗೂಳಿ ರೋಮಿಯೋ

ಈ ಗೂಳಿ ಹೋಲ್‌ಸ್ಟೈನ್ ಜಾತಿಯ ಗೂಳಿಯಾಗಿದ್ದು ಇದಕ್ಕೆ ಈಗ 6 ವರ್ಷ. ಇದರ ಹೆಸರು ರೋಮಿಯೋ. '1.94 ಮೀಟರ್ (6 ಅಡಿ 4.5 ಇಂಚು) ಎತ್ತರವಿರುವ ಈ ಗೂಳಿ ಗಿನ್ನೆಸ್ ವಿಶ್ವ ದಾಖಲೆ ಪುಟವನ್ನು ಸೇರಿದೆ.

Guinness Records :ವಿಶ್ವ ದಾಖಲೆ ಬರೆದ ವಿಶ್ವದ ಅತಿ ಎತ್ತರದ ಗೂಳಿ ರೋಮಿಯೋ
ವಿಶ್ವ ದಾಖಲೆ ಬರೆದ ವಿಶ್ವದ ಅತಿ ಎತ್ತರದ ಗೂಳಿ ರೋಮಿಯೋ

Updated on: May 26, 2024 | 10:35 AM

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗೂಳಿಯೊಂದು ಚರ್ಚೆಯಲ್ಲಿದೆ ಏಕೆಂದರೆ ಈ ಗೂಳಿ ಗಿನ್ನೆಸ್ ವಿಶ್ವ ದಾಖಲೆ ಪುಟವನ್ನು ಸೇರಿದೆ. ವಾಸ್ತವವಾಗಿ, 6 ವರ್ಷದ ಹೋಲ್‌ಸ್ಟೈನ್ ಸ್ಟೀರ್ ರೋಮಿಯೋ ಅನ್ನು ವಿಶ್ವದ ಅತಿ ಎತ್ತರದ ಬುಲ್ ಎಂದು ಪರಿಗಣಿಸಲಾಗಿದೆ. ಅಮೆರಿಕದ ಒರೆಗಾನೋದ ಪ್ರಾಣಿಧಾಮದಲ್ಲಿರುವ ರೋಮಿಯೋ ವಿಶ್ವದ ಅತಿ ಎತ್ತರದ ಗೂಳಿ ಎಂದು ಖ್ಯಾತಿ ಪಡೆದಿದ್ದು, ಜನರು ಈ ಗೂಳಿಯನ್ನು ಕಂಡರೆ ಭಯಪಡುತ್ತಾರೆ. ಆದಾಗ್ಯೂ, ಈ ಗೂಳಿ ಸ್ವಭಾವತಃ ಶಾಂತ ಮತ್ತು ಸೌಮ್ಯ ಎಂದು ಹೇಳಲಾಗುತ್ತದೆ.

ಇದೀಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಟ್ವಿಟರ್​​ ಖಾತೆಯಲ್ಲಿ ಈ ರೋಮಿಯೋ ಗೂಳಿಯ ಬಗ್ಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ‘1.94 ಮೀಟರ್ (6 ಅಡಿ 4.5 ಇಂಚು) ಎತ್ತರವಿರುವ ವಿಶ್ವದ ಅತಿ ಎತ್ತರದ ಗೂಳಿ ರೋಮಿಯೋ ಎಂದು ಕ್ಯಾಪ್ಷನ್​​ ಬರೆಯಲಾಗಿದೆ. ರೋಮಿಯೋ 6 ವರ್ಷದ ಹೋಲ್‌ಸ್ಟೈನ್ ಜಾತಿಯ ಗೂಳಿಯಾಗಿದ್ದು, ತನ್ನ ಮಾಲೀಕ ಮಿಸ್ಟಿ ಮೂರ್ ಜೊತೆ ವೆಲ್ಕಮ್ ಹೋಮ್ ಅನಿಮಲ್ ಅಭಯಾರಣ್ಯದಲ್ಲಿ ವಾಸಿಸುತ್ತಿದೆ. ಈ ಗೂಳಿಗೆ ಮಹಿಳೆಯೊಬ್ಬರು ಬಾಳೆಹಣ್ಣು ತಿನ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ಎಕ್ಸ್​​​ನಲ್ಲಿ ಸಖತ್​​ ಟ್ರೆಂಡ್ ಆಗುತ್ತಿದೆ ಹಾರ್ದಿಕ್ ಪಾಂಡ್ಯ ಡೈವೋರ್ಸ್ ಸುದ್ದಿಯ ಮೀಮ್ಸ್, ಇಲ್ಲಿದೆ ನೋಡಿ

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ರೋಮಿಯೋ ಆಹಾರ, ವಿಶೇಷವಾಗಿ ಸೇಬು ಮತ್ತು ಬಾಳೆಹಣ್ಣು. ಜೊತೆಗೆ ಈ ಗೂಳಿ ಪ್ರತಿದಿನ 100 ಪೌಂಡ್‌ಗಳಷ್ಟು (45 ಕಿಲೋಗ್ರಾಂಗಳಷ್ಟು) ಹುಲ್ಲು ಮತ್ತು ಧಾನ್ಯ ತಿನ್ನುತ್ತದೆ. ರೋಮಿಯೋಗೆ ಕೇವಲ 10 ದಿನಗಳ ಮಗುವಾಗಿದ್ದಾಗ, ಕಸಾಯಿಖಾನೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿಂದ ನಾನು ರಕ್ಷಿಸಿ ತಂದಿರುವುದಾಗಿ ಮಾಲಕಿ ಮಿಸ್ಟಿ ಹೇಳಿರುವುದು ವರದಿಯಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ