Viral : ಇದು ಕಲರ್ ಕಲರ್ ಫ್ರೂಟ್ ಐಸ್ ಗೋಲಾ, ನೋಡಿದ್ರೆ ಬಾಯಲ್ಲಿ ನೀರೂರುತ್ತೆ

ಆಹಾರ ಪ್ರಿಯರಂತೂ ಹೊಸ ಹೊಸ ರುಚಿಯನ್ನು ಸವಿಯಲು ಇಷ್ಟ ಪಡುತ್ತಾರೆ. ಅದಲ್ಲದೇ ಆಹಾರಗಳಲ್ಲಿಯೂ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಈ ವಿಚಿತ್ರ ಆಹಾರ ಪ್ರಯೋಗಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುವುದಿದೆ. ಇದೀಗ ಫುಡ್​​​ ಸ್ಟ್ರೀಟ್​​​ನಲ್ಲಿ ವ್ಯಾಪಾರಿಯೊಬ್ಬನು 'ಫ್ರೂಟ್ ಐಸ್ ಗೋಲಾ' ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ಕಲರ್ ಫುಲ್ ಐಸ್ ಗೋಲಾ ನೆಟ್ಟಿಗರ ಗಮನ ಸೆಳೆದಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

Viral : ಇದು ಕಲರ್ ಕಲರ್ ಫ್ರೂಟ್ ಐಸ್ ಗೋಲಾ, ನೋಡಿದ್ರೆ ಬಾಯಲ್ಲಿ ನೀರೂರುತ್ತೆ
ವೈರಲ್ ವಿಡಿಯೋ
Image Credit source: Instagram

Updated on: Apr 27, 2025 | 11:13 AM

ಇತ್ತೀಚೆಗಿನ ದಿನಗಳಲ್ಲಿ ವಿಯರ್ಡ್ ಫುಡ್ ಕಾಂಬಿನೇಶನ್ (Weird Food Combination) ಗಳನೊಳಗೊಂಡ ಆಹಾರ ಪದಾರ್ಥಗಳ ವಿಡಿಯೋಗಳು ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಮ್ಯಾಗಿ ಆಮ್ಲೆಟ್, ಗುಲಾಬ್ ದೋಸೆ, ಓರಿಯೋ ಪಕೋಡ, ಕಾಫಿ ಮ್ಯಾಗಿ ಹೀಗೆ ಆಹಾರ ಪದಾರ್ಥಗಳ ಮೇಲೆ ನಡೆಯುವ ಪ್ರಯೋಗಗಳು ಒಂದೆರಡಲ್ಲ. ಬೀದಿ ಬದಿ ವ್ಯಾಪಾರಿಗಳು ಈ ಆಹಾರ ಪದಾರ್ಥಗಳಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡಿ ನೆಟ್ಟಿಗರ ಗಮನ ಸೆಳೆಯುತ್ತಾರೆ. ಆದರೆ ಇದೀಗ ಗುಜರಾತಿನ ಅಹಮದಾಬಾದ್‌ (ahmedabad of gujarat) ನಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬರು ಫ್ರೂಟ್ ಐಸ್ ಗೋಲಾ (fruit ice gola) ಮಾಡುತ್ತಿದ್ದು ಇದನ್ನೂ ನೋಡಿದರೆ ತಿನ್ನಬೇಕು ಅನಿಸುತ್ತದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ವಿಡಿಯೋಗೆ ಬಳಕೆದಾರರು ಮೆಚ್ಚುಗೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

foodiekru ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಫುಡ್ ವ್ಲಾಗರ್ ಒಬ್ಬರು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬರು ತಾಜಾ ಹಣ್ಣುಗಳ ಮಿಶ್ರಿತವಾದ ಸಿರಪ್ ಬಟ್ಟಲಿನಲ್ಲಿ ಇಟ್ಟಿರುವುದನ್ನು ಕಾಣಬಹುದು. ಸಿರಪ್ ಮಿಶ್ರಿತ ತಾಜಾ ಹಣ್ಣುಗಳು ತುಂಬಿರುವ ಪಾತ್ರೆಯಲ್ಲಿ ಐಸ್ ಗೋಲಾ ಸ್ಟಿಕನ್ನು ಮುಳುಗಿಸಲಾಗುತ್ತಿದೆ. ಆ ಬಳಿಕ ಒಂದು ಪ್ಲೇಟ್ ಮೇಲೆ ಮುಳುಗಿಸಿದ್ದ ಐಸ್ ಗೋಲಾ ಇಟ್ಟು ಅದರ ಮೇಲೆ ತಾಜಾ ಹಣ್ಣು ಸೇರಿದಂತೆ ಸಿರಪ್ ಅನ್ನು ಹಾಕಲಾಗುತ್ತಿದೆ. ಹೀಗೆ ಸಿರಪ್ ನೆನೆಸಿದ ತಾಜಾ ಹಣ್ಣುಗಳ ಫ್ರೂಟ್ ಐಸ್ ಗೋಲಾ ಸಿದ್ಧವಾಗಿರುವುದನ್ನು ಕಾಣಬಹುದು.

ಇದನ್ನೂ ಓದಿ
ಈ ಸ್ಪೆಷಲ್‌ ಎಳನೀರಿನ ಟೀಯನ್ನು ಯಾವತ್ತಾದ್ರೂ ಕುಡಿದಿದ್ದೀರಾ?
ಚೀನಾದಲ್ಲಿ ರಿಮೋಟ್ ಕಂಟ್ರೋಲ್ ಹಾಸಿಗೆ! ವಿಶೇಷತೆ ತಿಳಿದರೆ ಆಶ್ಚರ್ಯ ಆಗುತ್ತೆ
ನಮ್ಮ ಮೆಟ್ರೋದಲ್ಲಿ ಕುಳಿತು ವಿಮಲ್‌ ಪಾನ್‌ ಮಸಾಲಾ ಜಗಿದ ಪ್ರಯಾಣಿಕ
ಫೋನ್​ ಕಸಿದುಕೊಂಡ ಶಿಕ್ಷಕಿಯ ಜಡೆಹಿಡಿದು ಚಪ್ಪಲಿಯಲ್ಲಿ ಹೊಡೆದ ವಿದ್ಯಾರ್ಥಿನಿ

ಇದನ್ನೂ ಓದಿ : Viral: ಚಹಾ ಪ್ರಿಯರೇ… ಈ ಸ್ಪೆಷಲ್‌ ಎಳನೀರಿನ ಟೀಯನ್ನು ಯಾವತ್ತಾದ್ರೂ ಕುಡಿದಿದ್ದೀರಾ?

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ 53 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರು, ಈ ಫ್ರೂಟ್ ಐಸ್ ಗೋಲಾ ತಿಂದರೆ ಬೇಗನೇ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಫ್ರೂಟ್ ಕಲರ್ ಆರೋಗ್ಯಕ್ಕೆ ಮಾರಕವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊರ್ವ ಬಳಕೆದಾರರು, ಸಾವನ್ನು ನಿಮ್ಮ ಹತ್ತಿರಕ್ಕೆ ಆಹ್ವಾನಿಸಿದಂತಿದೆ ಎಂದು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದು ಯಾವ ಸ್ಥಳ ಎಂದು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:11 am, Sun, 27 April 25