ಸಂಭೋಗದ ವೇಳೆ ತೀವ್ರ ರಕ್ತಸ್ರಾವ, ಪ್ರಿಯಕರನ ನಿರ್ಲಕ್ಷ್ಯದಿಂದ ಯುವತಿಯ ಪ್ರಾಣವೇ ಹೋಯ್ತು

|

Updated on: Oct 02, 2024 | 3:02 PM

ಲೈಂಗಿಕ ಸಂಭೋಗದ ಸಮಯದಲ್ಲಿ ಯುವತಿಯ ಖಾಸಗಿ ಭಾಗಗಳಿಗೆ ಗಾಯವಾಗಿದೆ. ವೈದ್ಯಕೀಯ ನೆರವು ಸಿಗದ ಕಾರಣ ಯುವತಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ. ಯುವತಿಯ ಸ್ಥಿತಿ ಚಿಂತಾಜನಕವಾದ ಬಳಿಕವೂ ಆರೋಪಿ ದೈಹಿಕ ಸಂಬಂಧ ಬೆಳೆಸಲು ಯತ್ನಿಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಸಂಭೋಗದ ವೇಳೆ ತೀವ್ರ ರಕ್ತಸ್ರಾವ, ಪ್ರಿಯಕರನ ನಿರ್ಲಕ್ಷ್ಯದಿಂದ ಯುವತಿಯ ಪ್ರಾಣವೇ ಹೋಯ್ತು
ಸಾಂದರ್ಭಿಕ ಚಿತ್ರ
Follow us on

ಗುಜರಾತ್‌: ಪ್ರಿಯಕರನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಅತಿಯಾದ ರಕ್ತಸ್ರಾವದಿಂದ 23 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಗುಜರಾತ್‌ನ ನವಸಾರಿ ಜಿಲ್ಲೆಯ ಹೋಟೆಲ್ ಒಂದರಲ್ಲಿ ನಡೆದಿದೆ. ಯುವತಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರೂ ಆಕೆಯ ಪ್ರಿಯಕರ ಆಂಬ್ಯುಲೆನ್ಸ್‌ಗೆ ಕರೆ ಮಾಡದೇ, ಸುಮಾರು 90 ನಿಮಿಷಗಳ ಕಾಲ ಆನ್‌ಲೈನ್‌ನಲ್ಲಿ ರಕ್ತಸ್ರಾವ ನಿಲ್ಲಿಸಲು ಮನೆಮದ್ದು ಹುಡುಕಿದ್ದಾನೆ. ಇದೀಗ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಎನ್‌ಡಿಟಿವಿ ವರದಿಯ ಪ್ರಕಾರ, ಲೈಂಗಿಕ ಸಂಭೋಗದ ಸಮಯದಲ್ಲಿ ಯುವತಿಯ ಖಾಸಗಿ ಭಾಗಗಳಿಗೆ ಗಾಯವಾಗಿದೆ, ಇದರಿಂದಾಗಿ ಆಕೆಗೆ ತೀವ್ರ ರಕ್ತಸ್ರಾವ ಪ್ರಾರಂಭವಾಗಿದೆ ಎಂದು ಫೋರೆನ್ಸಿಕ್ ವರದಿ ಬಹಿರಂಗಪಡಿಸಿದೆ. ವೈದ್ಯಕೀಯ ನೆರವು ಸಿಗದ ಕಾರಣ ಯುವತಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ. ಯುವತಿಯ ಸ್ಥಿತಿ ಚಿಂತಾಜನಕವಾದ ಬಳಿಕವೂ ಆರೋಪಿ ದೈಹಿಕ ಸಂಬಂಧ ಬೆಳೆಸಲು ಯತ್ನಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬಟ್ಟೆಯ ಸಹಾಯದಿಂದ ರಕ್ತಸ್ರಾವ ತಡೆಯಲು ಯತ್ನಿಸಿದರಾದರೂ ಪ್ರಯೋಜನವಾಗದೇ ಯುವತಿ ಪ್ರಜ್ಞಾಹೀನಳಾಗಿದ್ದಾಳೆ. ಯಾವುದೇ ವಿಧಾನದಿಂದ ರಕ್ತಸ್ರಾವವನ್ನು ನಿಲ್ಲಿಸಲು ಯಶಸ್ವಿಯಾಗದಿದ್ದಾಗ, ಯುವಕ ಸ್ನೇಹಿತನಿಗೆ ಕರೆ ಮಾಡಿದ್ದಾನೆ. ಬಳಿಕ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆಯವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿತ್ತು.

ಇದನ್ನೂ ಓದಿ: ತಂದೆಯೇ ತನ್ನ ಮಗಳನ್ನು ಮದುವೆಯಾಗುವ ಅನಿಷ್ಠ ಸಂಪ್ರದಾಯ, ಎಂಥಾ ವಿಚಿತ್ರ ಪದ್ಧತಿ ನೋಡಿ…

ನವಸಾರಿಯಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ಈ ಯುವತಿಗೆ, ಏಳು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಈ ಯುವಕನ ಪರಿಚವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿದೆ. ಇತ್ತೀಚಿಗಷ್ಟೇ ಇವರಿಬ್ಬರು ಭೇಟಿಯಾಗಿದ್ದು, ಲೈಂಗಿಕ ಸಂಭೋಗ ನಡೆಸಿದ್ದಾರೆ. ಆದರೆ ಅತಿಯಾದ ರಕ್ತಸ್ರಾವದಿಂದ ಯುವತಿ ಸಾವನ್ನಪ್ಪಿದ್ದಾಳೆ. ಯುವತಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರೆ ಆಕೆಯ ಜೀವ ಉಳಿಸಬಹುದಿತ್ತು ಎಂದು ಎಸ್ಪಿ ಸುಶೀಲ್ ಅಗರ್ವಾಲ್ ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Wed, 2 October 24