ಏಕಾಏಕಿ ಕಾರಿಗೆ ಹೊತ್ತಿಕೊಂಡ ಬೆಂಕಿ; ಕಾರಿನೊಳಗೆ ಆಟವಾಡುತ್ತಿದ್ದ ಪುಟ್ಟ ಮಕ್ಕಳಿಬ್ಬರು ಸಾವು

ಇದ್ದಕ್ಕಿದ್ದಂತೆ ಕಾರಿನಿಂದ ಹೊಗೆ ಬರಲಾರಂಭಿಸಿದ್ದು, ಮಕ್ಕಳ ಕಿರಿಚಾಟದಿಂದ ಮನೆಯವರು ಹೊರಗೆ ಧಾವಿಸಿದ್ದಾರೆ. ಆದರೆ ಏಕಾಏಕಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಯವರು ಮಕ್ಕಳಿಬ್ಬರನ್ನು ಕಾರಿನಿಂದ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಕಾರಿನ ಬಾಗಿಲು ಒಳಗಿನಿಂದ ಲಾಕ್ ಆಗಿದೆ.

ಏಕಾಏಕಿ ಕಾರಿಗೆ ಹೊತ್ತಿಕೊಂಡ ಬೆಂಕಿ; ಕಾರಿನೊಳಗೆ ಆಟವಾಡುತ್ತಿದ್ದ ಪುಟ್ಟ ಮಕ್ಕಳಿಬ್ಬರು ಸಾವು

Updated on: Dec 19, 2023 | 6:29 PM

ಬಿಹಾರ: ರಾಜಧಾನಿ ಪಾಟ್ನಾದ ಮಸೋಧಿ ಪ್ರದೇಶದಲ್ಲಿ ಅಹಿತಕರ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯೊಂದರ ಮುಂದೆ ನಿಲ್ಲಿಸಿದ್ದ ಆಲ್ಟೋ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಕಾರಿನೊಳಗೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಸುಟ್ಟುಕರಕಲಾಗಿದ್ದಾರೆ. ಗೌರಿಚಕ್ ಥಾಣೆ ಪ್ರದೇಶದ ಸೊಹ್ಗಿ ರಾಂಪುರದಲ್ಲಿ ಈ ಘಟನೆ ನಡೆದಿದ್ದು, ರಾಂಪುರದ ಸಂಜಿತ್ ಕುಮಾರ್ ಹಾಗೂ ಮನೆಯ ಉಳಿದ ಸದಸ್ಯರು ಮನೆಯೊಳಗಿದ್ದ ವೇಳೆ, ಪುಟ್ಟ ಮಕ್ಕಳಿಬ್ಬರು ಕಾರಿನೊಳಗೆ ಆಟವಾಡಲು ಬಂದಿರುವುದಾಗಿ ತಿಳಿದುಬಂದಿದೆ.

ಸಂಜಿತ್ ಕುಮಾರ್ ಎಂಬವರ 8 ವರ್ಷದ ಮಗ ಮತ್ತು ಅವರ ಸಹೋದರನ 6 ವರ್ಷದ ಮಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಇದ್ದಕ್ಕಿದ್ದಂತೆ ಕಾರಿನಿಂದ ಹೊಗೆ ಬರಲಾರಂಭಿಸಿದ್ದು, ಮನೆಯವರು ಹೊರಗೆ ಧಾವಿಸಿದಾಗ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ಏಕಾಏಕಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಯವರು ಮಕ್ಕಳಿಬ್ಬರನ್ನು ಕಾರಿನಿಂದ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಕಾರಿನ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಮಕ್ಕಳಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.

ಇದನ್ನೂ ಓದಿ:  ರೈಲಿನ ಕಿಟಕಿ ಬದಿ ಕುಳಿತಿದ್ದ ಯುವಕ ಚಳಿಯಿಂದ ಸಾವು; 300 ಕಿ.ಮಿ ಪ್ರಯಾಣಿಸುವವರೆಗೂ ಯಾರಿಗೂ ಗೊತ್ತೇಯಿಲ್ಲ

ಕೆಲ ಹೊತ್ತಿನ ಬಳಿಕ ಕಾರಿನ ಗಾಜು ಒಡೆದು ಮಕ್ಕಳನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಬೆಂಕಿ ನಂದಿಸಿ ಕಾರಿನಲ್ಲಿದ್ದ ಮಕ್ಕಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದರೂ ಸಹ ಅಷ್ಟೊತ್ತಿಗಾಗಲೇ ಮಕ್ಕಳಿಬ್ಬರ ದೇಹ ಅರೆಬರೆ ಸುಟ್ಟು ಹೋಗಿದೆ. ಪರಿಣಾಮ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿರುವುದು ವರದಿಯಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us