Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 80 ವರ್ಷದ ಅಜ್ಜಿಯನ್ನು ಪ್ರೀತಿಸಿ ಮದುವೆಯಾದ 57 ವರ್ಷದ ವ್ಯಕ್ತಿ

57 ವರ್ಷದ ಕ್ಯಾಲಿಫೋರ್ನಿಯಾದ ವ್ಯಕ್ತಿ ತನಗಿಂತ 23 ವರ್ಷ ಹಿರಿಯ ಅಂದರೆ 80 ವರ್ಷದ ಮುದುಕಿಯ ಪ್ರೀತಿಯ ಬಲೆಯಲ್ಲಿ ಬಿದ್ದು, ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಆದರೆ ಡೇವಿಡ್ ತಮ್ಮ ತಾಯಿಯನ್ನು ಹಣಕ್ಕಾಗಿ ಪ್ರೀತಿಯ ಹೆಸರಿನಲ್ಲಿ ವಂಚಿಸಿದ್ದಾರೆ ಎಂದು ಮುದುಕಿಯ ಮಕ್ಕಳಿಬ್ಬರು ಆರೋಪಿಸಿದ್ದಾರೆ. ಇನ್ನಷ್ಟು ವಿವರ ಇಲ್ಲಿದೆ.

Viral: 80 ವರ್ಷದ ಅಜ್ಜಿಯನ್ನು ಪ್ರೀತಿಸಿ ಮದುವೆಯಾದ 57 ವರ್ಷದ ವ್ಯಕ್ತಿ
ಸಾಂದರ್ಭಿಕ ಚಿತ್ರImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Nov 28, 2023 | 10:54 AM

ಸೃಷ್ಟಿಯಲ್ಲಿ ಪ್ರೀತಿಯೇ ಅದ್ಭುತ. ​​ಪ್ರೀತಿಗೆ ವಯಸ್ಸು, ಜಾತಿ, ಧರ್ಮ, ವಯಸ್ಸು, ಬಡವ ಶ್ರೀಮಂತ ಎಂಬ ಯಾವುದೇ ಭೇದವಿಲ್ಲ. ಈಗಾಗಲೇ ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರನ್ನು ಪ್ರೀತಿಸಿ ಮದುವೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಅದೇ ರೀತಿ ತಮಗಿಂತ 30, 40 ವರ್ಷ ದೊಡ್ಡವರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೂ ಇದ್ದಾರೆ. ಇದೀಗಾ ಅಂತದ್ದೇ ವಿಚಿತ್ರ ಪ್ರೇಮ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 57 ವರ್ಷದ ಕ್ಯಾಲಿಫೋರ್ನಿಯಾದ ವ್ಯಕ್ತಿ ತನಗಿಂತ 23 ವರ್ಷ ಹಿರಿಯ ಅಂದರೆ 80 ವರ್ಷದ ಮುದುಕಿಯ ಪ್ರೀತಿಯ ಬಲೆಯನ್ನು ಬಿದ್ದು, ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮತ್ತೆ ಆಗಿದ್ದೇ ಬೇರೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ಡೈಲಿ ಸ್ಟಾರ್ ಪ್ರಕಾರ, ಡೇವಿಡ್ ಫೌಟ್(57) ಮತ್ತು ಕ್ಯಾರೊಲಿನ್ ಹಾಲೆಂಡ್ (80) ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ನಿವಾಸಿ ಡೇವಿಡ್ ಸ್ವಂತ ಮನೆ ಹೊಂದಿಲ್ಲ ಜೊತೆಗೆ ಖಾಯಂ ಕೆಲಸವಿಲ್ಲ. ಪ್ರತಿ ದಿನ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಮಾಡಿಕೊಂಡು ಜೀವನ ಕಳೆಯುತ್ತಿದ್ದರು. ಆದರೆ ಕೆಲವು ವಾರಗಳ ಹಿಂದೆ 80 ವರ್ಷದ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದು, ಇಬ್ಬರ ನಡುವೆ ಪ್ರೀತಿ ಅರಳಿದೆ. ಕ್ಯಾರೋಲಿನ್ ಬಹಳ ಶ್ರೀಮಂತ ಮಹಿಳೆ. ಈಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಡೇವಿಡ್ ತಮ್ಮ ತಾಯಿಯನ್ನು ಹಣಕ್ಕಾಗಿ ಪ್ರೀತಿಯ ಹೆಸರಿನಲ್ಲಿವಂಚಿಸಿದ್ದಾರೆ ಎಂದು ಕ್ಯಾರೋಲಿನ್ ಮಕ್ಕಳು ಆರೋಪಿಸಿದ್ದಾರೆ.

ಇದನ್ನೂ ಓದಿ: ತನ್ನ ಸೋದರಸಂಬಂಧಿಯನ್ನೇ ಪ್ರೀತಿಸಿ ಮದುವೆಯಾದ ಯುವತಿ

5 ಕೋಟಿ ಮೌಲ್ಯದ ಆಸ್ತಿಯನ್ನು ಮಾರಿ ಡೇವಿಡ್‌ಗೆ ಸಂಪೂರ್ಣ ಹಣವನ್ನು ನೀಡುವುದಾಗಿ ಕ್ಯಾರೊಲಿನ್ ಭರವಸೆ ನೀಡಿದ್ದರು. ಆದರೆ ಈ ನಡುವೆ ಕ್ಯಾರೋಲಿನ್ ಅವರ ಆರೋಗ್ಯವು ಹದಗೆಟ್ಟಿತು ಮತ್ತು ಸ್ವಲ್ಪ ಸಮಯದೊಳಗೆ ಅವರು ಸಾವನ್ನಪ್ಪಿದರು. ಆದರೆ ಕ್ಯಾರೊಲಿನ್ ಮರಣದ ನಂತರ ಆಕೆಯ ಎಲ್ಲಾ ಆಸ್ತಿಯನ್ನು ಆಕೆಯ ಇಬ್ಬರು ಹೆಣ್ಣುಮಕ್ಕಳು ಪಡೆದುಕೊಂಡಿದ್ದು,ಡೇವಿಡ್​​​​ಗೆ ಒಂದು ಪೈಸೆಯನ್ನೂ ನೀಡಲಿಲ್ಲ. ಈಗ ಡೇವಿಡ್ ಮತ್ತೆ ನಿರಾಶ್ರಿತನಾಗಿ ತನ್ನ ಹಳೆಯ ಜೀವನವನ್ನು ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ: