Viral News : ಹೀಗೊಂದು ವಿಶೇಷ ಮದುವೆ,  ಬಾನಂಗಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿ  

ಇದಾಗಲೇ ಮದುವೆ ಸೀಸನ್ ಶುರುವಾಗಿದೆ. ಎಲ್ಲಿ ನೋಡಿದರೂ ಮದುವೆಗಳದ್ದೇ ಸುದ್ದಿ. ಹೀಗಿರುವಾದ ಇಲ್ಲೊಂದು ವಿಶೇಷ ಮದುವೆ ಸಮಾರಂಭವೊಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅದೇನೆಂದರೆ ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಜೋಡಿಯೊಂದು ಬಾನಗಂಗಳದಲ್ಲಿ  ಖಾಸಗಿ ಜೆಟ್​​​​ನಲ್ಲಿ ವಿವಾಹವಾಗಿದ್ದು, ಈ ವಿಶೇಷ ವಿವಾಹದ ಕುರಿತ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗಿದೆ. 

Viral News : ಹೀಗೊಂದು ವಿಶೇಷ ಮದುವೆ,  ಬಾನಂಗಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿ  
ವೈರಲ್​​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 27, 2023 | 3:45 PM

ಪ್ರತಿಯೊಬ್ಬರ ಜೀವನದಲ್ಲಿಯೂ ವಿವಾಹವು  ಬಹಳ ಮುಖ್ಯವಾದ  ಕ್ಷಣವಾಗಿದೆ.  ಮದುವೆಯ ಪ್ರತಿಯೊಂದು  ಕ್ಷಣವನ್ನು ಜೀವಮಾನವಿಡೀ ಸ್ಮರಣೀಯವಾಗಿರಿಸಲು ಪ್ರತಿಯೊಬ್ಬರು ಮದುವೆ ಸಮಾರಂಭವನ್ನು  ಬಹಳ ವಿಶೇಷವಾಗಿ ನಡೆಸಬೇಕೆಂದು ಬಯಸುತ್ತಾರೆ. ಕೆಲವರು ರಾಯಲ್ ಥೀಮ್ ಗಳಲ್ಲಿ ಮದುವೆಯಾದರೆ, ಇನ್ನೂ ಕೆಲವರು ತಮ್ಮ ಇಷ್ಟದ ದೇಶ ಅಥವಾ ಸ್ಥಳಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳುತ್ತಾರೆ. ಹೀಗೆ ಪ್ರತಿಯೊಬ್ಬರೂ ಅದ್ಧೂರಿಯಾಗಿ ತಮ್ಮ ಇಷ್ಟದಂತೆ ಮದುವೆ ಮಾಡಿಕೊಳ್ಳಬೇಕೆಂದು ಬಯಸುತ್ತಾರೆ. ಅದೇ ರೀತಿ ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಜೋಡಿಯೊಂದು   ಬಾನಂಗಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಇದು ನಿಜ. ದುಬೈನಲ್ಲಿ ನೆಲೆಸಿರುವ  ಭಾರತೀಯ ಮೂಲದ ನವ ಜೋಡಿಯೊಂದು ಶುಕ್ರವಾರ ದುಬೈನ ಖಾಸಗಿ ಜೆಟ್ ಅಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಈ ವಿಶೇಷ ಹಾಗೇನೇ ಅದ್ದೂರಿ ವಿವಾಹದ ಸುದ್ದಿ ಇದೀಗ ವೈರಲ್ ಆಗಿದೆ.

ಖ್ಯಾತ ಉದ್ಯಮಿ ದಿಲೀಪ್ ಪೋಪ್ಲೆ ಅವರ ಪುತ್ರಿ ವಿಧಿ ಪೋಪ್ಲೆ ಅವರು ಹೃದೇಶ್ ಸೈನಾನಿ ಎಂಬವರನ್ನು ಖಾಸಗಿ ಜೆಟ್ನಲ್ಲಿ ವರಿಸಿದ್ದಾರೆ.  ಜೆಟೆಕ್ಸ್ ಬೋಯಿಂಗ್ 747  ಹೆಸರಿನ ಖಾಸಗಿ ಜೆಟ್ ಅಲ್ಲಿ ಈ ವಿವಾಹ ಸಮಾರಂಭ ನಡೆದಿದ್ದು, ಸುಮಾರು 350 ಅಥಿತಿಗಳು ಈ ವಿಶೇಷ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಖಾಸಗಿ ಜೆಟ್ ಅನ್ನು  ದುಬೈನಿಂದ ಒಮಾನ್ ದೇಶಕ್ಕೆ  ಹಾರಿಸಲಾಯಿತು ಮತ್ತು ಈ ಮೂರು ಗಂಟೆಗಳ ಪ್ರಯಾಣದಲ್ಲಿ ಭಾರತೀಯ ಸಂಸ್ಕೃತಿಯಂತೆ ವಿವಾಹ ಕಾರ್ಯಕ್ರಮವನ್ನು  ನಡೆಸಲಾಯಿತು.  ಅಷ್ಟಕ್ಕೂ ವಿಮಾನದಲ್ಲಿ ಮದುವೆ ಹೇಗೆ ನಡೆಯಿತು? ಅದಕ್ಕೆ ಅಷ್ಟು ಜಾಗ ಎಲ್ಲಿದೆ ಎಂದು ನೀವು ಯೋಚಿಸುತ್ತಿದ್ದೀರಾ? ಅದೇನೆಂದರೆ ಈ ವಿಶೇಷ ಮದುವೆ ಕಾರ್ಯಕ್ರಮವನ್ನು ನಡೆಸಲು ಖಾಸಗಿ ಜೆಟ್ ಅಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದೆ. ಅಂದರೆ ವಿಮಾನದೊಳಗಿನ ಕೆಲವೊಂದು ರಚನೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಅಲ್ಲದೆ ಜೆಟ್ ಒಳಭಾಗವನ್ನು ಮದುವೆ ಥೀಮ್ಗೆ ಅನುಗುಣವಾಗಿ ಸುಂದರವಾಗಿ ಅಲಂಕರಿಸಲಾಗಿದೆ. ಅಷ್ಟೇ ಅಲ್ಲದೆ  ಮದುವೆಯಲ್ಲಿ ಭಾಗಿಯಾದ ಅಥಿತಿಗಳು ಮದುವೆಯ ವಿಧಿವಿಧಾನಗಳನ್ನು ಮತ್ತು ಎಲ್ಲಾ ಕಾರ್ಯಕ್ರಮಗಳನ್ನು ಸರಿಯಾಗಿ ನೋಡುವಂತೆ ಜೆಟ್ ಒಳಗಡೆ ಪ್ರೊಜೆಕ್ಟರ್ ಗಳನ್ನು ಸಹ ಅಳವಡಿಸಲಾಗಿದೆ.

ಮದುವೆ  ವಿಧಿವಿಧಾನಗಳು ಪೂರ್ಣಗೊಂಡ ನಂತರ, ಅಥಿತಿಗಳು ಜೆಟ್ ಒಳಗಡೆ ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು.

ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ

ಈ ಅದ್ದೂರಿ ವಿವಾಹ ಕಾರ್ಯಕ್ರಮದ ಬಗ್ಗೆ ವಧು-ವರರು ಹೇಗೆ ಪ್ರತಿಕ್ರಿಯಿಸಿದ್ದಾರೆ?

ಮಾಧ್ಯಮದವರೊಂದಿಗೆ ಮಾತನಾಡಿದ ವರ ಹೃದೇಶ್ ಸೈನಾನು ನನ್ನ ಹೈಸ್ಕೂಲ್ ಗೆಳತಿಯನ್ನು ಈ ರೀತಿಯಲ್ಲಿ ವಿಶೇಷವಾಗಿ ವಿವಾಹವಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದಕ್ಕಾಗಿ ನಮ್ಮಿಬ್ಬರ ಪೋಷಕರು ಮತ್ತು  ಜೆಟೆಕ್ಸ್ ಖಾಸಗಿ ಜೆಟ್ಗೆ ಧನ್ಯವಾದಗಳನ್ನು ತಿಳಿಸಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ನನ್ನ ಪೋಷಕರು ಕೂಡಾ ವಿಮಾನದಲ್ಲಿಯೇ ವಿವಾಹವಾಗಿದ್ದು, ಆದರೆ ಅವರ ವಿವಾಹವನ್ನು ನೋಡಲು ನಾನಿರಲಿಲ್ಲ. ಅದಕ್ಕಾಗಿ ಅದೇ ರೀತಿಯಲ್ಲಿ ಖಾಸಗಿ ಜೆಟ್ನಲ್ಲಿ ನನ್ನ ವಿವಾಹವನ್ನು ನಡೆಸಿಕೊಟ್ಟಿದ್ದಾರೆ. ಇಂತಹ ಅಚ್ಚರಿಯನ್ನು ನಾನು ಕಲ್ಪನೆ ಕೂಡಾ ಮಾಡಿರಲಿಲ್ಲ. ನನಗೆ ತುಂಬಾ ಸಂತೋಷವಾಗಿದೆ ಎಂದು ವಧು ವಿಧಿ ಪೋಪ್ಲೆ ಹೇಳಿದ್ದಾರೆ.

ಇದನ್ನೂ ಓದಿ: ನನ್ ಹುಡುಗಿಗೆ ಮೆಸೇಜ್ ಮಾಡ್ಬೇಕು, ಬೇಗ ಕರೆಂಟ್ ಕೊಡಿ ಸರ್; ಕೆ.ಇ.ಬಿ ಆಫೀಸರ್ ಮುಂದೆ ಗೋಳಾಡಿದ ಭಗ್ನ ಪ್ರೇಮಿ

ʼನನ್ನ ಮಗಳಿಗಾಗಿ ವಿಶೇಷವಾದದ್ದು ಏನಾದರೂ ಮಾಡಬೇಕೆಂದುಕೊಂಡಿದ್ದೆ, ನನ್ನ ಮಗಳ ಮದುವೆಯನ್ನು ಆಕಾಶದಲ್ಲಿ ಮಾಡಬೇಕೆಂಬುದು ನನ್ನ ಬಹುದೊಡ್ಡ ಕನಸಾಗಿತ್ತುʼ ಎಂದು ವಧುವಿನ ತಂದೆ ದಿಲೀಪ್ ಪೋಪ್ಲೆ ಹೇಳಿದ್ದಾರೆ.  ಅಷ್ಟೇ ಅಲ್ಲದೆ ದಿಲೀಪ್ ಪೋಪ್ಲೆ ಕೂಡಾ, 1994 ರಲ್ಲಿ ಏರ್ ಇಂಡಿಯಾ ವಿಮಾನದಲ್ಲಿಯೇ ವಿವಾಹವಾಗಿದ್ದರು. ಇದೀಗ ತಮ್ಮ ಮಗಳ ಮದುವೆಯನ್ನು ಕೂಡಾ ಬಾನಂಗಳದಲ್ಲಿ ನಡೆಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ