Viral Audio: ಹಲೋ ಸರ್​​​ ನನ್ ಹುಡುಗಿಗೆ ಮೆಸೇಜ್ ಮಾಡ್ಬೇಕು, ಪ್ಲೀಸ್​​​​ ಕರೆಂಟ್ ಕೊಡಿ ಸರ್: ಗೋಳಾಡಿದ ಪ್ರೇಮಿ

ಈ ಪ್ರೇಮಿಗಳಿಗೆ 24 ಗಂಟೆಯೂ ಅವರ ಪ್ರೀತಿದೇ ಚಿಂತೆ. ಊಟ ನಿದ್ದೆ ಬೇಕಾದರೂ ಬಿಟ್ಟು ಬಿಡುವರು, ಆದರೆ ತಮ್ಮ ಪ್ರೇಮಿಯೊಂದಿಗೆ ಮಾತನಾಡದೆ ಮಾತ್ರ ಇರಲಾರರು. ಅದಕ್ಕೆ ಸೂಕ್ತ ಉದಾಹರಣೆಯೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಅಮರ ಪ್ರೇಮಿಯೊಬ್ಬ, ಕೆ.ಇ.ಬಿ ಆಫೀಸರ್ ಗೆ ಕರೆ ಮಾಡಿ, ಸರ್ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ,  ನನ್ನ ಹುಡುಗಿಗೆ ಮೆಸೇಜ್ ಮಾಡ್ಬೇಕು, ಅದೇನಾದರೂ ಮಾಡಿ ಬೇಗ ಕರೆಂಟ್ ಕೊಡಿ  ಸರ್…  ಎಂದು ತಲೆ ತಿಂದಿದ್ದಾನೆ. 

Viral Audio: ಹಲೋ ಸರ್​​​ ನನ್ ಹುಡುಗಿಗೆ ಮೆಸೇಜ್ ಮಾಡ್ಬೇಕು, ಪ್ಲೀಸ್​​​​ ಕರೆಂಟ್ ಕೊಡಿ ಸರ್: ಗೋಳಾಡಿದ ಪ್ರೇಮಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 27, 2024 | 2:00 PM

ಪ್ರೀತಿಯಲ್ಲಿ ಬಿದ್ದವರಿಗೆ ಈ  ಲೋಕದ ಅರಿವೇ ಇರೊಲ್ಲ, ಪ್ರೇಮಪಕ್ಷಿಗಳಾಗಿ ತಮ್ಮ ಪ್ರೀತಿಯ ಲೋಕದಲ್ಲಿಯೇ ತೇಳುತ್ತಿರುತ್ತಾರೆ. ದಿನದ 24 ಗಂಟೆಯೂ ತಮ್ಮ ಪ್ರೇಮಿಯ ಬಗ್ಗೆಯೇ ಜಪ ಮಾಡುತ್ತಿರುತ್ತಾರೆ.  ಈ ಅಮರ ಪ್ರೇಮಿಗಳು ಊಟ ನಿದ್ದೆ ಬೇಕಾದರೂ ಬಿಡಬಹುದು, ಆದರೆ ತಮ್ಮ ಪ್ರೇಮಿಯೊಂದಿಗೆ ಮಾತನಾಡದೆ ಒಂದು ಕ್ಷಣವೂ ಇರಲಾರರು. ಹೀಗೆ ಈ ಪ್ರೇಮಪಕ್ಷಿಗಳು ತಮ್ಮ ಪ್ರೇಮಿಗಳಿಗಾಗಿ ಎಂತಹ ಸಾಹಸಕ್ಕೂ ಬೇಕಾದರೂ ತಯಾರಿರುತ್ತಾರೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ. ಅಮರ ಪ್ರೇಮಿಯೊಬ್ಬ  ಕೆ.ಇ.ಬಿ ಆಫೀಸರ್ಗೆ ಕರೆ ಮಾಡಿ, ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ, ನನ್  ಹುಡುಗಿಗೆ ಮೆಸೇಜ್ ಮಾಡ್ಬೇಕು, ಬೇಗ ಕರೆಂಟ್ ಕೊಡಿ  ಸರ್…. ಎಂದು ತಲೆ ತಿಂದಿದ್ದಾನೆ. ಇವರಿಬ್ಬರ ನಡುವಿನ ಮಾತುಕತೆಯ ಹಾಸ್ಯಮಯ ಆಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

@shetty_b_1994 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ  ಅಮರ ಪ್ರೇಮಿ ಹಾಗೂ ಕೆ.ಇ.ಬಿ ಆಫೀಸರ್ ನಡುವಿನ ಹಾಸ್ಯಮಯ ಮಾತುಕತೆಯನ್ನು   ಕಾಣಬಹುದು. ಈ ಆಡಿಯೋದಲ್ಲಿ ಯುವಕನೊಬ್ಬ ಕೆ.ಇ.ಬಿ ಆಫೀಸರ್ ಗೆ ಕರೆ ಮಾಡಿ, ಸರ್  ಆದಷ್ಟು ಬೇಗ ಕರೆಂಟ್ ಕೊಡಿ, ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ.  ನನ್ ಹುಡುಗಿಗೆ ಮೆಸೇಜ್ ಮಾಡ್ಬೇಕು…  ಏನೋ ಅಪರೂಪಕ್ಕೆ ಲವ್ ಮಾಡಿದ್ದೀನಿ ಸರ್ ಎಂದು  ಹೇಳುತ್ತಾನೆ.  ಈತನ ಈ ಮಾತನ್ನು  ತಾಳ್ಮೆಯಿಂದ ಕೇಳಿಸಿಕೊಂಡು ಯಾರ್ಯಾರಿಗೆ ಎಂತೆಂತಹ  ಕಷ್ಟ ಇರುತ್ತಲ್ವಾ ಯಪ್ಪಾ… ಎಂದು ನಗುತ್ತಲೇ  ಕೆ.ಇ.ಬಿ ಆಫೀಸರ್ ಉತ್ತರಿಸುತ್ತಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ;

ಬಳಿಕ ಆ ಯುವಕ ಬೇಗ  ಕರೆಂಟ್ ಕೊಡಣ್ಣೋ ಇಲ್ದಿದ್ರೆ ಲವ್ ಬ್ರೇಕಪ್ ಆಗ್ಬಿಡುತ್ತೆ, ಇವಾಗ 29 ವರ್ಷ, ಏನೋ  ಈಗ ಅಪರೂಪಕ್ಕೆ ಲವ್ ಮಾಡಿದ್ದೀನಿ.  ಸ್ವಲ್ಪ ಕಷ್ಟ ಅರ್ಥ ಮಾಡ್ಕೊಳ್ಳಿ ಸರ್,  ಬೇಗ ಕರೆಂಟ್ ಕೊಡಿ.  ಎಂದು ಕೇಳಿಕೊಳ್ಳುತ್ತಾನೆ. ಈ ಅಮರ ಪ್ರೇಮಿಯ ಕಾಟ ತಾಳಲಾರದೆ ಕೆ.ಇ.ಬಿ ಆಫೀಸರ್ ಆಯ್ತಪ್ಪಾ ಹೇಗಾದ್ರೂ ಮಾಡಿ ಕರೆಂಟ್ ಕೊಡಿಸ್ತೀನಿ ಎಂದು ಹೇಳುತ್ತಾರೆ. ಅದಕ್ಕೆ ಈ ಭೂಪ ಒಂದು ಜನರೇಟರ್ ವ್ಯವಸ್ಥೆ ಮಾಡಿಕೊಡಿ ಅಂತಾ ಕೇಳೋದಾ… ಇವರಿಬ್ಬರ ನಡುವಿನ ಈ ಹಾಸ್ಯಮಯ ಸಂಭಾಷನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: ಟ್ರೈನ್ ಚಕ್ರಗಳಿ​ಗೆ ರಬ್ಬರ್ ಟೈರ್ ಹಾಕಿದರೆ ಅದು ಸರಾಗವಾಗಿ ಚಲಿಸುತ್ತದಾ? ಈ ವೈರಲ್ ವೀಡಿಯೊ ನೋಡಿ

ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 6.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  408 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಅನೇಕ ಕಮೆಂಟ್​​ ಕೂಡ ಮಾಡಿದ್ದಾರೆ.  ಒಬ್ಬ ಬಳಕೆದಾರರು ʼಕೆ.ಇ.ಬಿ ಆಫೀಸರ್ಗೆ ನನ್ನ ಕಡೆಯಿಂದ ಧನ್ಯವಾದಗಳು… ಅವರ ತಾಳ್ಮೆ ಮತ್ತು ಸಹನೆಯನ್ನು ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಯಪ್ಪಾ ನಮ್ ಜನರಿಗೆ ಎಂತೆಂತಹ ಕಷ್ಟಗಳು ಬರ್ತವೆ ನೋಡಿʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಪಾಪ ಆ ಹುಡುಗ ಅಪರೂಪಕ್ಕೆ ಲವ್ ಮಾಡವ್ನೆ ಕೊಟ್ ಬಿಡ್ರೋ ಕರೆಂಟ್ʼ ಎಂದು ಹೇಳಿದ್ದಾರೆ. ಇನ್ನು ಹಲವರು ಕೆ.ಇ.ಬಿ ಆಫೀಸರ್  ಆ ಯುವಕನ ಜೊತೆಗೆ ತಾಳ್ಮೆಯಿಂದ ಮಾತನಾಡಿದ ರೀತಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ