ಟಿಕೆಟ್ ಇಲ್ಲದ ಪ್ರಯಾಣಿಕರು ರೈಲಿನಲ್ಲಿ ಕಾಯ್ದಿರಿಸಿದ ಆಸನದಲ್ಲಿ ಪ್ರಯಾಣಿಸುವುದು ಸರಿಯೇ? ಕೆಟ್ಟ ಅನುಭವ ಹಂಚಿಕೊಂಡ ವ್ಯಕ್ತಿ
ರೈಲಿನಲ್ಲಿ ಪ್ರಯಾಣಿಸುವಾಗ ಅನುಭವಿಸುವ ಸಮಸ್ಯೆ ಒಂದೆರಡಲ್ಲ, ಅದರೂ ಕೆಲವರು ಅನಿವಾರ್ಯವಾಗಿ ಪ್ರಯಾಣಿಸಲೇಬೇಕು. ಇನ್ನು ಕೆಲವರು ಹೀಗೆ ರೈಲ್ವೆ ಇಲಾಖೆಗೆ ಬಿಸಿಮುಟ್ಟಿಸುತ್ತಾರೆ ನೋಡಿ. ಭಾರತೀಯ ರೈಲ್ವೆಯ ಸ್ಲೀಪರ್ ಕೋಚ್‌ಗಳಲ್ಲಿ ಟಿಕೆಟ್ ಪಡೆಯದ ವ್ಯಕ್ತಿಗಳು ಬಂದು ಕಾಯ್ದಿರಿಸಿದ ಆಸನಗಳಲ್ಲಿ ಕುಳಿತುಕೊಂಡಿರುತ್ತಾರೆ. ಈ ಬಗ್ಗೆ ಎಕ್ಸ್ ಬಳಕೆದಾರರೊಬ್ಬರು ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ರೈಲಿನಲ್ಲಿ ಈ ಸಮಸ್ಯೆ ನಿಮಗೂ ಎದುರಾಗಿರಬಹುದು, ಈ ಕಿರಿಕಿರಿ ಬಗ್ಗೆ ಪ್ರಯಾಣಿಕರೊಬ್ಬರು ತಮ್ಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ರೈಲ್ವೆಯ ಸ್ಲೀಪರ್ ಕೋಚ್‌ಗಳಲ್ಲಿ ಟಿಕೆಟ್ ಪಡೆಯದ ವ್ಯಕ್ತಿಗಳು ಬಂದು ಕಾಯ್ದಿರಿಸಿದ ಆಸನಗಳಲ್ಲಿ ಕುಳಿತುಕೊಂಡಿರುತ್ತಾರೆ. ಈ ಬಗ್ಗೆ ಎಕ್ಸ್ ಬಳಕೆದಾರರೊಬ್ಬರು ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಭುಜ್-ಶಾಲಿಮಾರ್ ಎಕ್ಸ್‌ಪ್ರೆಸ್‌ನ ಕೋಚ್ S5 ನಲ್ಲಿ ಜನ ತುಂಬಿಕೊಂಡಿರುತ್ತಾರೆ. ಆದರೆ ಇದು ಕಾಯ್ದಿರಿಸಿದ ಬೋಗಿ, ಇದರಲ್ಲಿ ಟಿಕೆಟ್ ಪಡೆಯದ ವ್ಯಕ್ತಿಗಳು ಇರುತ್ತಾರೆ ಎಂದು ಹೇಳಿದ್ದಾರೆ.
ಅಹಮದಾಬಾದ್ ಜಂಕ್ಷನ್‌ನಿಂದ ರೈಲು ಹೊರಟ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ. ಟಿಕೆಟ್ ಇಲ್ಲದ ಅಪರಿಚಿತ ವ್ಯಕ್ತಿಗಳು ತಮ್ಮ ಕಾಯ್ದಿರಿಸಿದ ಆಸನವನ್ನು ಆಕ್ರಮಿಸಿಕೊಂಡಿದ್ದರು. ಈ ಬೋಗಿಯಲ್ಲಿ ಜನ ತುಂಬಿಕೊಂಡಿತ್ತು. ಇದರಿಂದ ಅವರು ಕುಟುಂಬ ಕೂಡ ಈ ಸಮಸ್ಯೆಯನ್ನು ಅನುಭವಿಸಬೇಕಾದ ಸ್ಥಿತಿ ಬಂತು.
Sleeper coach, reserved s5, 22829 which departed from Ahmedabad a while ago. Without ticket People not moving and giving place to us with reserved ticket. Please help. Pnr number – 8413099794 @RailwaySeva @RailMinIndia @AshwiniVaishnaw pic.twitter.com/NUhTvKIXWP
— Babu Bhaiya (@Shahrcasm) March 26, 2024
ತಾನು ಅನುಭವಿಸಿದ ಸಂಕಷ್ಟದಲ್ಲಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಭಾರತೀಯ ರೈಲ್ವೆ ಇಲಾಖೆಗೆ ಹಾಗೂ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಲಾಗಿದೆ. ರೈಲ್ವೆಯ ಅಧಿಕೃತ ಗ್ರಾಹಕ ಸೇವಾ ಖಾತೆಯಾದ ರೈಲ್ವೇ ಸೇವಾ ಈ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದೆ. ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಸುಲಭಗೊಳಿಸುವ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ: ಆಯುಧಗಳ ಸ್ವಚ್ಛಗೊಳಿಸುತ್ತಿರುವಾಗ ಪ್ರಮಾದ, ಎಕೆ-47ನಿಂದ ಗುಂಡು ಹಾರಿಸಿಕೊಂಡ ಕಮಾಂಡರ್
ಆದರೆ ಜನರಿಗೆ ಈ ಬಗ್ಗೆ ಇನ್ನು ಮನವರಿಕೆಯಾಗಿಲ್ಲ. ಈ ಪೋಸ್ಟ್ನ್ನು 1.3 ಮಿಲಿಯನ್‌ಗಿಂತಲೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಎಚ್ಚರಿಕೆಯನ್ನು ನೀಡಬೇಕು. ಹಾಗೂ ಈ ರೀತಿಯಲ್ಲಿ ಪ್ರಯಾಣಿಸುವುದು ಅಪಾಯಕ್ಕೆ ಕಾರಣವಾಗುತ್ತದೆ. ಇನ್ನು ಎಸಿ ಕಂಪಾರ್ಟ್ಮೆಂಟ್ನಲ್ಲೂ ಈ ಸಮಸ್ಯೆಗಳು ಉಂಟಾಗಿದೆ ಎಂದು ಎಕ್ಸ್ ಬಳಕೆದಾರರೂ, ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ