Viral Video: ನಾಯಿ ಏನು ಫುಟ್ಬಾಲ್ ಅಲ್ಲ, ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಶ್ವಾನವನ್ನು ಕಾಲಲ್ಲಿ ಒದ್ದ ಭದ್ರತಾ ಸಿಬ್ಬಂದಿ

ಮೊನ್ನೆ ಭಾನುವಾರ (MI) ವರ್ಸಸ್  ಗುಜರಾತ್ ವರ್ಸಸ್  ಟೈಟಾನ್ (GT) ನಡುವಿನ ಐಪಿಎಲ್  ಪಂದ್ಯ ನಡೆದಿತ್ತು. ಈ ಪಂದ್ಯಾವಳಿಯ ವೇಳೆ ಮೈದಾನಕ್ಕೆ ನುಗ್ಗಿದಂತಹ ಬೀದಿನಾಯಿಯನ್ನು ಹೊರ ಓಡಿಸುವ ಭರದಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿಗಳು ನಾಯಿಗೆ ಮನಸೋಇಚ್ಛೆ ಒದ್ದಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇವರುಗಳ ಅಮಾನವೀಯ ವರ್ತನೆಯನ್ನು ಪ್ರಾಣಿಪ್ರಿಯರು ತೀವ್ರವಾಗಿ ಖಂಡಿಸಿದ್ದಾರೆ. 

Viral Video: ನಾಯಿ ಏನು ಫುಟ್ಬಾಲ್ ಅಲ್ಲ, ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಶ್ವಾನವನ್ನು ಕಾಲಲ್ಲಿ ಒದ್ದ ಭದ್ರತಾ ಸಿಬ್ಬಂದಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 27, 2024 | 12:37 PM

ಮೊನ್ನೆ ಭಾನುವಾರ ಅಹಮದಬಾದಿನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ  ಮುಂಬೈ ಇಂಡಿಯನ್ಸ್ (MI) ವರ್ಸಸ್  ಗುಜರಾತ್ ಟೈಟಾನ್ (GT) ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆದಿತ್ತು. ಈ ಪಂದ್ಯಾವಳಿಯ ವೇಳೆ ಶ್ವಾನವೊಂದು ಇದ್ದಕ್ಕಿದ್ದಂತೆ ಮೈದಾನಕ್ಕೆ ಎಂಟ್ರಿಕೊಟ್ಟ ವಿಡಿಯೋ ತುಣುಕುಗಳು  ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅಷ್ಟೇ ಅಲ್ಲದೆ ಮೈದಾನಕ್ಕೆ ಬಂದಂತಹ ನಾಯಿಯನ್ನು ಅಲ್ಲಿನ ಭದ್ರತಾ  ಸಿಬ್ಬಂದಿಗಳು  ಫುಟ್ಬಾಲ್ ನಂತೆ ಕಾಲಲ್ಲಿ ಒದ್ದು ಓಡಿಸಿದಂತಹ ವಿಡಿಯೋ ದೃಶ್ಯಾವಳಿಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ವೈರಲ್ ಆಗಿದ್ದು, ಭದ್ರತಾ ಸಿಬ್ಬಂದಿಗಳ ಅಮಾನವೀಯ ವರ್ತನೆಗೆ  ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಹೌದು ನಾಯಿಯನ್ನು ಕ್ರೀಡಾಂಗಣದಿಂದ ಹೊರ ಓಡಿಸುವ  ಭರದಲ್ಲಿ ಭದ್ರತಾ ಸಿಬ್ಬಂದಿ ಅದನ್ನು ಮನಸೋಇಚ್ಛೆ ಒದ್ದಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಾಣಿ ಪ್ರಿಯರು ಭದ್ರತಾ ಸಿಬ್ಬಂದಿಗಳು ಹಾಗೂ ಪೊಲೀಸರ  ಅಮಾನವೀಯ ವರ್ತನೆಯನ್ನು ಟೀಕಿಸಿದ್ದು, ಕಾಲಲ್ಲಿ ಒದೆಯಲು ಶ್ವಾನವೇನು ಫುಟ್ಬಾಲ್ ಅಂತ ಭಾವಿಸಿದ್ದೀರಾ ನೀವುಗಳು ಎಂದು  ಪ್ರಶ್ನೆ ಮಾಡಿದ್ದಾರೆ.   ಅಷ್ಟೇ ಅಲ್ಲದೆ ನಟ ವರುಣ್ ಧವನ್ ಕೂಡಾ ಈ ವಿರುದ್ಧ ಧ್ವನಿ ಎತ್ತಿದ್ದು,  “ಕಾಲಲ್ಲಿ ಒದ್ದು ಓಡಿಸಲು  ನಾಯಿ ಏನು ಫುಟ್ಬಾಲ್ ಅಲ್ಲ; ಅಲ್ಲದೆ ಶ್ವಾನ ಅಷ್ಟಾಗಿ  ಯಾರನ್ನೂ ಕಚ್ಚುವುದು ಕೂಡಾ ಇಲ್ಲ. ಅದರ ಜೊತೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬಹುದಿತ್ತು”  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವೊಂದನ್ನು  ವಿದಿತ್ ಶರ್ಮ (TheViditsharma)  ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಐಪಿಎಲ್ ಪಂದ್ಯದ ವೇಳೆ ಅಮಾನುಷವಾಗಿ ವರ್ತಿಸಿ ಭದ್ರತಾ ಸಿಬ್ಬಂದಿಗಳು ಶ್ವಾನವನ್ನು ಒದ್ದು ಓಡಿಸಿದ ದೃಶ್ಯ. ಈ ಘಟನೆಯು ಜನರು ಪ್ರಾಣಿಗಳ ಮೇಲೆ ಎಷ್ಟು ದೌರ್ಜನ್ಯವೆಸಗುತ್ತಾರೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಪ್ರಾಣಿಗಳ ಬಗ್ಗೆ ಸ್ವಲ್ಪ ಸಹಾನುಭೂತಿಯನ್ನು ಬೆಳೆಸೋಣ ಮತ್ತು ಅವುಗಳ ಮೇಲೆ ನಡೆಯುವ ಕ್ರೌರ್ಯದ ವಿರುದ್ಧ ಧ್ವನಿ ಎತ್ತೋಣ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ನನ್ನ ಮಗಳನ್ನು 1 ವಾರದೊಳಗೆ ಮದುವೆಯಾದರೆ ಬ್ಲ್ಯಾಂಕ್ ಚೆಕ್ ನೀಡುವೆ’, ಗಂಡ್​​​​ ಹೈಕ್ಳಿಗೆ ಬಿಗ್ ಆಫರ್​​ ನೀಡಿದ ತಂದೆ

ವೈರಲ್ ವಿಡಿಯೋದಲ್ಲಿ ಐಪಿಎಲ್ ಪಂದ್ಯದ ವೇಳೆ ಮೈದಾನಕ್ಕೆ ಬಂದಂತಹ ಬೀದಿನಾಯಿಯಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿಗಳು ಮತ್ತು ಪೊಲೀಸರು ಮಾನವೀಯತೆಯನ್ನು ಮರೆತು ಫುಟ್ಬಾಲ್ ಒದ್ದಂತೆ ನಾಯಿಯನ್ನು ಮನಸೋಇಚ್ಛೆ ಒದ್ದು, ಮೈದಾನದಿಂದ ಹೊರ ಓಡಿಸುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.

ಮಾರ್ಚ್ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ಇದು ನಿಜಕ್ಕೂ  ನಾಚಿಕೆಗೇಡಿನ ಸಂಗತಿ,  ಮಾನವೀಯತೆಯನ್ನು ಮರೆತು ಈ ರೀತಿ ವರ್ತಿಸುವುದು ಎಷ್ಟು ಸರಿ. ಇವರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Wed, 27 March 24