Viral Video:ಗಂಡ್ ಹೈಕ್ಳಿಗೆ ಬಿಗ್ ಆಫರ್: 1 ವಾರದೊಳಗೆ ನನ್ನ ಮಗಳನ್ನು ಮದುವೆಯಾದರೆ ಬ್ಲ್ಯಾಂಕ್ ಚೆಕ್ ನೀಡುತ್ತೇನೆ
"ನನ್ನ ಮಗಳನ್ನು ಮದುವೆಯಾಗಲು ವರ ಬೇಕಾಗಿದ್ದಾನೆ. ಆದರೆ ಹೆಚ್ಚು ಸಮಯಾವಾಕಾಶ ಇಲ್ಲ. ಕೇವಲ ಒಂದೇ ಒಂದು ವಾರದೊಳಗಾಗಿ ನನ್ನ ಮಗಳನ್ನು ಮದುವೆಯಾಗಬೇಕು. ಇದರ ಜೊತೆಗೆ ಆತನ ಅದೃಷ್ಟವು ಬದಲಾಗಲಿದೆ. ಯಾಕೆಂದರೆ ಆತನಿಗೆ ನಾನು ಬ್ಲ್ಯಾಂಕ್ ಚೆಕ್ ನೀಡುವೆ"
ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗಾ ತನ್ನ ಮಗಳನ್ನು ಒಂದು ವಾರದೊಳಗೆ ಮದುವೆಯಾಗಲು ಮುಂದೆ ಬರುವ ವರನಿಗೆ ಬ್ಲ್ಯಾಂಕ್ ಚೆಕ್ ನೀಡುವೆ ಎಂದು ಹೇಳಿರುವ ವ್ಯಕ್ತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋ ನಕಲಿಯೋ ಅಸಲಿಯೋ? ಎಂಬುದು ತಿಳಿದುಬಂದಿಲ್ಲ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊದಲ್ಲಿ, ತಂದೆ ತನ್ನ ಮಗಳೊಂದಿಗೆ ಜೀಪ್ ಮುಂದೆ ನಿಂತಿರುವುದನ್ನು ಕಾಣಬಹುದು. ತಂದೆಯ ಕೈಯಲ್ಲಿ ಚೆಕ್ ಬುಕ್ ಇದೆ. “ನನ್ನ ಮಗಳನ್ನು ಮದುವೆಯಾಗಲು ವರ ಬೇಕಾಗಿದ್ದಾನೆ. ಆದರೆ ಹೆಚ್ಚು ಸಮಯಾವಾಕಾಶ ಇಲ್ಲ. ಕೇವಲ ಒಂದೇ ಒಂದು ವಾರದೊಳಗಾಗಿ ನನ್ನ ಮಗಳನ್ನು ಮದುವೆಯಾಗಬೇಕು. ಇದರ ಜೊತೆಗೆ ಆತನ ಅದೃಷ್ಟವು ಬದಲಾಗಲಿದೆ. ಯಾಕೆಂದರೆ ಆತನಿಗೆ ನಾನು ಬ್ಲ್ಯಾಂಕ್ ಚೆಕ್ ನೀಡುವೆ” ಎಂದು ತಂದೆ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ‘ಉಡುಗೊರೆ ಬೇಡ, ಮೋದಿಗೆ ಮತ ಹಾಕಿ’ ಆಮಂತ್ರಣ ಪತ್ರಿಕೆಯಲ್ಲಿ ವರನ ತಂದೆಯಿಂದ ವಿಶೇಷ ಮನವಿ
@shadi_karne_wali_girls ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾರ್ಚ್ 18 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 12 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಲವು ಕಾಮೆಂಟ್‌ಗಳು ಬಂದಿವೆ. ಇದೆಲ್ಲವೂ ನಕಲಿ ಎಂದು ಹಲವರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ. ಈ ವೀಡಿಯೋ ಹರಿಯಾಣದ್ದು ಎಂದು ಹೇಳಲಾಗಿದೆ. ಏಕೆಂದರೆ ವಾಹನದ ಸಂಖ್ಯೆ hr ನಿಂದ ಪ್ರಾರಂಭವಾಗುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ