ಒಂದು ರೂಪಾಯಿ ದಾನ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಮೊಬೈಲ್ ಹ್ಯಾಕ್ ಮಾಡ್ತಾರೆ ಖದೀಮರು

ಇವತ್ತಿನ ಜನರೇಷನ್ ಹೇಗೆ ಅಂದ್ರೆ ಒಂದು ದಿನ ಊಟ ತಿಂಡಿ ನೀರು ಇಲ್ಲ ಅಂದ್ರು ತಲೆಕೆಡಿಸಿಕೊಳ್ಳೊಲ್ಲ, ಅದ್ರೆ ಸೋಶಿಯಲ್ ಮೀಡಿಯಾ ಇಲ್ಲ ಅಂದ್ರೆ ಪ್ರಪಂಚಾನೇ ಕಳೆದುಹೋದಂತೆ ಫೀಲ್ ಮಾಡ್ತಾರೆ. ಅಷ್ಟರ ಮಟ್ಟಿಗೆ ಸೋಶಿಯಲ್ ಮೀಡಿಯಾ ಪ್ರಾಮುಖ್ಯತೆ ಪಡೆದಿದೆ.‌ ಈಗ ಇದೇ ಸೋಶಿಯಲ್ ಮಿಡಿಯಾದಲ್ಲಿ ಮಾಡ್ರನ್ ಬಿಕ್ಷಾಟನೆ ಶುರುವಾಗಿದೆ. ಹೇಗೆ ಅಂತೀರಾ ಈ ಸ್ಟೋರಿ ಓದಿ.

ಒಂದು ರೂಪಾಯಿ ದಾನ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಮೊಬೈಲ್ ಹ್ಯಾಕ್ ಮಾಡ್ತಾರೆ ಖದೀಮರು
ದಾನ ಮಾಡಿ ಎಂದು ಪೋಸ್ಟ್ ಹಾಕಿ ಮೊಬೈಲ್ ಹ್ಯಾಕ್ ಮಾಡ್ತಾರೆ ಖದೀಮರು, ಎಚ್ಚರ!
Follow us
Kiran Surya
| Updated By: ಆಯೇಷಾ ಬಾನು

Updated on: Mar 16, 2024 | 2:56 PM

ಬೆಂಗಳೂರು, ಮಾರ್ಚ್​.16: ಸೋಶಿಯಲ್ ಮೀಡಿಯಾ ಎಷ್ಟು ಒಳ್ಳೆಯದ್ದೋ ಅಷ್ಟೇ ಡೆಂಜರ್ ಕೂಡ. ಎಷ್ಟೇ ಸೇಫ್ ಆಗಿ ಬಳಕೆ ಮಾಡಿದ್ರು ಒಂದಲ್ಲ ಒಂದು ರೀತಿಯಲ್ಲಿ ಸೈಬರ್ ವಂಚನೆಗೆ (Cyber Crime) ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತೆ. ಈಗ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಐಷಾರಾಮಿ ಬೈಕ್‌ ಪೋಸ್ಟ್ ಹಾಕಿ, ಇದು ಇಷ್ಟು ಬೆಲೆ. ನೀವೆಲ್ಲಾ ಒಬ್ಬೊಬ್ಬರು 1 ರೂಪಾಯಿ ದಾನ ಮಾಡಿದ್ರೇ ಈ ಬೈಕ್‌ ತೆಗೆದುಕೊಳ್ಳುತ್ತೇನೆ ಅಂತಾ ಪೋಸ್ಟ್ ಹಾಕಿ ದಾನ ಮಾಡಲು ಕ್ಯೂಆರ್ ಕೋಡ್ ಸಹ ನೀಡ್ತಿದ್ದಾರೆ. ಆದರೆ ಹಣ ಪೇ ಮಾಡಿದ್ರೇ ನಿಮ್ಮ ಮೊಬೈಲ್ ಹ್ಯಾಕ್ ಆಗಬಿಡುತ್ತದೆ.

1 ರೂಪಾಯಿ ದಾನ ಮಾಡಿದ್ರೇ ಈ ಬೈಕ್‌ ತೆಗೆದುಕೊಳ್ಳುತ್ತೇನೆ ಎಂಬ ಪೋಸ್ಟ್ ನೋಡಿ ಒಂದು ರೂಪಾಯಿ ತಾನೇ ಪಾಪಾ ಅಂತಾ ಹಾಕೋರು ನಮ್ಮ ನಡುವೆ ಇದ್ದಾರೆ. ಅದ್ರೆ ಗೊತ್ತಿಲ್ಲದೆ ಕ್ಯೂಆರ್ ಕೋಡ್ ಮೂಲಕ ಹಣ ಸೆಂಡ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು, ಅಷ್ಟೇ ಅಲ್ಲ ಕ್ಯೂ ಆರ್ ಕೋಡ್ ನಲ್ಲಿ ಮಾಲ್ ವೇರ್ ವೈರಸ್ ಇದ್ರೆ ನಿಮ್ಮ ಇಡೀ ಮೊಬೈಲ್, ಡೇಟಾ ಮಾತ್ರವಲ್ಲ ಗೂಗಲ್‌ ಅಕೌಂಟ್ ಗಳು ಸಹ ಹ್ಯಾಕ್‌ ಆಗಿ ನಿಮ್ಮ ಕಂಪ್ಲೀಟ್ ಡಿಟೈಲ್ಸ್ ಕದಿಯುವಂತಹ ಸಾಧ್ಯತೆಗಳು ಹೆಚ್ಚು, ಹೀಗಾಗಿ ಇಂತಹುಗಳಿಂದ ದೂರ ಇರಿ ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಬಿಡಿ ಎಂದು ಈಶ್ವರಪ್ಪನ್ನು ವಿನಂತಿಸುವೆ: ಬಿವೈ ವಿಜಯೇಂದ್ರ

ಇನ್ನು ಜನರು ಸಹ ಎಚ್ಚರಿಕೆಯಿಂದ ಇರಬೇಕು, ಈ ಮಾಡ್ರನ್ ಬೆಗ್ಗರ್ಸ್ ಯಾರು ಏನೂ ಅನ್ನೋ‌ ಮಾಹಿತಿ‌ ಇರೋದಿಲ್ಲ. ಸಹಾಯ ಮಾಡಲು ಹೋಗಿ ಹಣ ಕಳೆದುಕೊಳ್ಳುವ ಚಾನ್ಸ್ ಹೆಚ್ಚಾಗಿರುತ್ತೆ, ಈ ಹಿಂದೆಯೂ‌ ಈ ರೀತಿ ಅನೇಕ ಘಟನೆಗಳ ನಡೆದಿದೆ, ಗೊತ್ತಿಲ್ಲದ ವೆಬ್ ಸೈಟ್ ನಲ್ಲಿ ಕಡಿಮೆ‌ ಬೆಲೆಗೆ ವಸ್ತುಗಳು ಸಿಗುತ್ತೆ ಅಂತಾ ಅಲ್ಲೂ ಹಣ ಪೇ ಮಾಡಿ ಹಣ ಕಳೆದುಕೊಳ್ಳೋರು ಇದ್ದಾರೆ. ಅದನೆಲ್ಲ ಮಾಡಬೇಡಿ ಅಂತಾ ಜನರಿಗೆ ಸೈಬರ್ ತಜ್ಞರು ಎಚ್ಚರಿಕೆ‌ ನೀಡಿದ್ದಾರೆ, ಮತ್ತೊಂದೆಡೆ ಸೋಶಿಯಲ್ ಮೀಡಿಯಾ ಯೂಸ್ ಮಾಡುವ ಯುವಸಮೂಹವು ಈ ರೀತಿಯಲ್ಲಿ ಸಾಕಷ್ಟು ಪೋಸ್ಟ್ ಗಳನ್ನು ನೋಡ್ತಿದ್ದೀವಿ ಆದರೆ ನಾವು ಯಾರಿಗೋ ಹಣ ಹಾಕಲು ಹೋಗಿ ನಮ್ಮ ಅಕೌಂಟ್ ನಲ್ಲಿರುವ ಹಣವನ್ನೆಲ್ಲ ಹ್ಯಾಕರ್ಸ್ ಮಿಸ್ ಯೂಸ್ ಮಾಡಬಹುದು ಎಂದು ಯುವತಿಯೊಬ್ಬರು ಅಳಲು ತೋಡಿಕೊಂಡರು.

ಒಟ್ನಲ್ಲಿ ಇಂತಹ ಮಾಡ್ರನ್ ಬೆಗ್ಗರ್ಸ್ ಗಳ ಪೋಸ್ಟ್ ಗಳಿಗೆ ಉತ್ತೇಜನ ನೀಡಬೇಡಿ, ಫೇಸ್ ಬುಕ್ ವಾಟ್ಸ್ ಆಫ್ ಇನ್ಸ್ಟಾ ಅಂತಾ ಸೋಶಿಯಲ್‌ ಮೀಡಿಯಾ ಯುಸ್ ಮಾಡೋರು ಗೊತ್ತಿಲ್ಲದವರಿಗೆ ಹಣ ನೀಡೋದಕ್ಕೆ‌ ಹೋಗಿ ನಿಮ್ಮ ಹಣ ಕಳೆದುಕೊಳ್ಳಬಹುದು ಹುಷಾರ್.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ