AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 90 ರ ದಶಕದ ಹಾಡಿಗೆ ಅಜ್ಜಿಯ ಭರ್ಜರಿ ಸ್ಟೆಪ್ಸ್; ವಿಡಿಯೋ ಇಲ್ಲಿದೆ ನೋಡಿ

ವಯಸ್ಸಾದಾಗ ದೇಹದೊಂದಿಗೆ ಮನಸ್ಸಿಗೂ ಕೂಡಾ ಮುಪ್ಪು ಆವರಿಸುತ್ತದೆ, ಜೀವನೋತ್ಸಾಹವೇ ಬತ್ತಿ ಹೋಗುತ್ತದೆ ಅಂತೆಲ್ಲಾ ಹೇಳ್ತಾರೆ. ಆದ್ರೆ ಇಲ್ಲೊಬ್ರು ಅಜ್ಜಿ ವಯಸ್ಸು ದೇಹಕ್ಕಷ್ಟೇ ಹೊರತು ನನ್ನ ಜೀವನೋತ್ಸಾಹಕ್ಕಲ್ಲಾ ಎಂಬುದನ್ನು ತನ್ನ ಭರ್ಜರಿ ಡಾನ್ಸ್ ಮೂಲಕ ತೋರಿಸಿಕೊಟ್ಟಿದ್ದಾರೆ. ಅಜ್ಜಿಯ ಈ ಡಾನ್ಸ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಏಜ್ ಈಸ್ ಜಸ್ಟ್ ಎ ನಂಬರ್ ಅಂತಿದ್ದಾರೆ ನೆಟ್ಟಿಗರು.

Viral Video: 90 ರ ದಶಕದ ಹಾಡಿಗೆ ಅಜ್ಜಿಯ ಭರ್ಜರಿ ಸ್ಟೆಪ್ಸ್; ವಿಡಿಯೋ ಇಲ್ಲಿದೆ ನೋಡಿ
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: May 19, 2024 | 6:29 PM

Share

ವಯಸ್ಸು ಬರೀ ಸಂಖ್ಯೆಯಷ್ಟೇ… ಇಳಿ ವಯಸ್ಸಿನಲ್ಲೂ ತಮ್ಮ ಅದ್ಭುತ ಜೀವನೋತ್ಸಾಹದಿಂದ ಗಮನ ಸೆಳೆದಂತಹ ಅದೆಷ್ಟೋ ವೃದ್ಧರಿದ್ದಾರೆ. ಯುವಕರೇ ನಾಚುವಂತೆ ನೃತ್ಯ ಮಾಡುವ ಹಾಡು ಹಾಡುವ, ಸ್ಟೈಲ್ ಆಗಿ ಬೈಕ್, ಕಾರ್ ಓಡಿಸುವ ಹಿರಿ ಜೀವಗಳ ಕ್ಯೂಟ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಸದ್ಯ ಅದೇ ರೀತಿಯ ವಿಡಿಯೋ ಇದೀಗ ವೈರಲ್ ಆಗಿದ್ದು, ತನ್ನ ಇಳಿ ವಯಸ್ಸಿನಲ್ಲೂ ವೃದ್ಧೆಯೊಬ್ಬರು 90 ರ ದಶಕದ ಹಿಂದಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಅಜ್ಜಿನ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ವಿಡಿಯೋವನ್ನು @90s_songs._ ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವೃದ್ಧೆಯೊಬ್ಬರು ಹಿಂದಿ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕುವಂತಹ ದೃಶ್ಯವನ್ನು ಕಾಣಬಹುದು. 90 ರ ದಶಕದ ಹಿಟ್ ಹಾಡುಗಳಲ್ಲಿ ಒಂದಾದ ಲಾಮ ಲಾಮ ಘೂಂಗಟ್ ಕಹೇ ಕೋ ಡಾಲಾ ಎಂಬ ಹಾಡಿಗೆ ಅಜ್ಜಿ ಯುವಕರೂ ನಾಚುವಂತೆ ಸಖತ್ ಆಗಿ ನೃತ್ಯ ಮಾಡಿದ್ದಾರೆ.

ಇದನ್ನೂ ಓದಿ: ಸೋಶಿಯಲ್​​ ಮೀಡಿಯಾದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಯುವತಿಯ ಶವ ಪತ್ತೆ

ಕೆಲದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇಳಿ ವಯಸ್ಸಿನಲ್ಲೂ ಅಜ್ಜಿಯ ಜೀವನೋತ್ಸಾಹ ಮತ್ತು ಸುಂದರ ನೃತ್ಯಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ