AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಶಿಯಲ್​​ ಮೀಡಿಯಾದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಯುವತಿಯ ಶವ ಪತ್ತೆ

ಸೋಶಿಯಲ್​​ ಮೀಡಿಯಾದ ಮೂಲಕ ಆರೋಪಿ ವಿನೋದ್​​ಗೆ ಪರಿಚಯವಾಗಿದ್ದ ಶೀತಲ್. ಮೇ. 05ರಂದು ಮನೆಯಲ್ಲಿದ್ದ 10 ಸಾವಿರ ದುಡ್ಡಿನೊಂದಿಗೆ ಶೀತಲ್​​ ಮನೆ ಬಿಟ್ಟು ವಿನೋದ್​ ಜೊತೆಗೆ ಓಡಿ ಹೋಗಿದ್ದಾಳೆ. ಬಳಿಕ ಈ ಜೋಡಿ ಮನಾಲಿಗೆ ತೆರಳಿ ಹೊಟೇಲ್​​​ ಒಂದರಲ್ಲಿ ತಂಗಿದ್ದಾರೆ. ಎರಡು ದಿನಗಳ ಬಳಿಕ ಹೊಟೇಲ್​ ಸಿಬ್ಬಂದಿಗೆ ಲಾಗೇಜ್​​ ಬ್ಯಾಗ್​​ನಲ್ಲಿ ಯುವತಿ ಶವ ಪತ್ತೆಯಾಗಿದೆ.

ಸೋಶಿಯಲ್​​ ಮೀಡಿಯಾದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಯುವತಿಯ ಶವ ಪತ್ತೆ
ಪ್ರಿಯಕರನಿಗಾಗಿ ಮನೆಬಿಟ್ಟು ಬಂದ ಯುವತಿ ಲಾಗೇಜ್​​ ಬ್ಯಾಗ್​​ನಲ್ಲಿ ಶವವಾಗಿ ಪತ್ತೆ
Follow us
ಅಕ್ಷತಾ ವರ್ಕಾಡಿ
|

Updated on: May 19, 2024 | 11:27 AM

ಭೋಪಾಲ್ (ಮಧ್ಯಪ್ರದೇಶ): ಭೋಪಾಲ್‌ನ ಶಹಪುರದ ಶೀತಲ್ ಕೌಶಲ್(24) ಎಂದು ಗುರುತಿಸಲಾದ ಯುವತಿಯ ಶವ ಹಿಮಾಚಲ ಪ್ರದೇಶದ ಮನಾಲಿಯ ಹೋಟೆಲ್‌ವೊಂದರಲ್ಲಿ ಪತ್ತೆಯಾಗಿದೆ. ಸೋಶಿಯಲ್​ ಮೀಡಿಯಾದ ಮೂಲಕ ಪರಿಚಯವಾದ ಆಕೆಯ ಸ್ನೇಹಿತ ವಿನೋದ್ ಠಾಕೂರ್ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ . ಆರೋಪಿ ವಿನೋದ್ ಆಕೆಯ ಮೃತ ದೇಹವನ್ನು ಲಾಗೇಜ್​​ ಬ್ಯಾಗ್​​ನಲ್ಲಿ ತುಂಬಿಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂಬುದು ವರದಿಯಾಗಿದೆ.

ಸೋಶಿಯಲ್​​ ಮೀಡಿಯಾದ ಮೂಲಕ ಆರೋಪಿ ವಿನೋದ್​​ಗೆ ಪರಿಚಯವಾಗಿದ್ದ ಶೀತಲ್. ಮೇ. 05ರಂದು ಮನೆಯಲ್ಲಿದ್ದ 10 ಸಾವಿರ ದುಡ್ಡಿನೊಂದಿಗೆ ಶೀತಲ್​​ ಮನೆ ಬಿಟ್ಟು ವಿನೋದ್​ ಜೊತೆಗೆ ಓಡಿ ಹೋಗಿದ್ದಾಳೆ. ಬಳಿಕ ಈ ಜೋಡಿ ಮನಾಲಿಗೆ ತೆರಳಿ ಹೊಟೇಲ್​​​ ಒಂದರಲ್ಲಿ ತಂಗಿದ್ದರು. ಆದರೆ ಬುಧವಾರ(ಮೇ.08) ಮನಾಲಿಯ ಹೊಟೇಲ್​ ಚೆಕ್ ಔಟ್ ಮಾಡುವ ವೇಳೆ ವಿನೋದ್​​ ಒಬ್ಬನನ್ನೇ ಕಂಡು ಹೋಟೆಲ್ ಸಿಬ್ಬಂದಿ ಅನುಮಾನಗೊಂಡಿದ್ದಾರೆ. ಇದಲ್ಲದೇ ಆತನ ಅಂಗಿಯ ಮೇಲಿನ ರಕ್ತದ ಕಲೆ ಕಂಡು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಆತ ಬ್ಯಾಗ್ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಬುಧವಾರ ತಡರಾತ್ರಿ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.

ಇದನ್ನೂ ಓದಿ: ಪತ್ನಿಯನ್ನು ಕೊಂದು, ಮೃತದೇಹದೊಂದಿಗೆ ಸೆಲ್ಫಿ ತೆಗೆದು ಸಂಬಂಧಿಕರಿಗೆ ಕಳುಹಿಸಿ, ಆತ್ಮಹತ್ಯೆ ಮಾಡಿಕೊಂಡ ಪತಿ

ಗಿರಿಧಾಮದ ಎಲ್ಲ ಗಡಿಗಳನ್ನು ಸೀಲ್ ಮಾಡಿದ ಪೊಲೀಸರು ಬುಧವಾರ ರಾತ್ರಿ ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರ್ಯಾಣ ಮೂಲದ ಆರೋಪಿ ವಿನೋದ್ ಠಾಕೂರ್ (23) ಮೂರು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಶೀತಲ್ ಕೌಶಲ್ ಜೊತೆ ಸ್ನೇಹ ಬೆಳೆಸಿದ್ದ ಎಂದು ಮನಾಲಿ ಡಿಎಸ್ಪಿ ಕೆಡಿ ಶರ್ಮಾ ಫ್ರೀ ಪ್ರೆಸ್‌ಗೆ ತಿಳಿಸಿದ್ದಾರೆ.

ಯುವತಿಯನ್ನು ಕೊಂದ ಹಿಂದಿನ ನಿಖರ ಕಾರಣವನ್ನು ಆರೋಪಿ ಬಹಿರಂಗಪಡಿಸಿಲ್ಲ. ಶುಕ್ರವಾರ ಮನಾಲಿ ತಲುಪಿದ ಶೀತಲ್ ತಂದೆ ಮತ್ತು ಇಬ್ಬರು ಸಹೋದರರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ