Crime News: ಪಾಟ್ನಾ ಶಾಲೆಯ ಚರಂಡಿಯಲ್ಲಿ 3 ವರ್ಷದ ಬಾಲಕ ಶವವಾಗಿ ಪತ್ತೆ; ಕಟ್ಟಡಕ್ಕೆ ಬೆಂಕಿ ಹಚ್ಚಿದ ಪೋಷಕರು
ಪಾಟ್ನಾದ ಶಾಲೆಯೊಂದರಲ್ಲಿ 3 ವರ್ಷದ ಮಗುವಿನ ಶವ ಪತ್ತೆಯಾಗಿದೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆ ಮಗುವಿನ ಪೋಷಕರು ಕೋಪೋದ್ರೇಕಕ್ಕೆ ಒಳಗಾಗಿದ್ದಾರೆ. ಅಸಲಿಗೆ ಏನಿದು ಘಟನೆ? ಇಲ್ಲಿದೆ ಮಾಹಿತಿ.
ನವದೆಹಲಿ: 3 ವರ್ಷದ ಮಗುವಿನ ಶವ ಪಾಟ್ನಾದ (Patna) ಶಾಲೆಯ ಆವರಣದ ಚರಂಡಿಯೊಳಗೆ ಪತ್ತೆಯಾದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯಿಂದ ಕೋಪಗೊಂಡ ಮಗುವಿನ ಕುಟುಂಬಸ್ಥರು ಆ ಖಾಸಗಿ ಶಾಲೆಯನ್ನು ಗುರಿಯಾಗಿಸಿಕೊಂಡು ಇಂದು ಪಾಟ್ನಾದ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗೇ, ಶಾಲೆಯ ಕಟ್ಟಡಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಇಂದು (ಶುಕ್ರವಾರ) ಪಾಟ್ನಾದ ಖಾಸಗಿ ಶಾಲೆಯ ಚರಂಡಿಯೊಳಗೆ 3 ವರ್ಷದ ಬಾಲಕನ ಶವ ಪತ್ತೆಯಾಗಿದ್ದು, ಇದರಿಂದ ಆಕ್ರೋಶಗೊಂಡ ಮಗುವಿನ ಕುಟುಂಬ ಕಟ್ಟಡಕ್ಕೆ ಬೆಂಕಿ ಹಚ್ಚಿದೆ ಎಂದು ಎಎನ್ಐ ವರದಿ ಮಾಡಿದೆ. ಮಗುವಿನ ಕುಟುಂಬದವರು ರಸ್ತೆಗಳನ್ನು ನಿರ್ಬಂಧಿಸಿ, ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು ಮತ್ತು ಬೀದಿಗಳಲ್ಲಿ ಟೈರ್‌ಗಳನ್ನು ಸುಟ್ಟುಹಾಕಿದರು.
ಇದನ್ನೂ ಓದಿ: ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ವಿಶ್ವ ಯಾರು, ಈತನ ಹಿನ್ನೆಲೆ ಏನು? ಇಲ್ಲಿದೆ ಓದಿ
ತಮ್ಮ ಮಗು ಶಾಲೆಗೆ ಹೋದವನು ಶಾಲೆಯಿಂದ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದರು. ಅವರು ಮಗು ಎಲ್ಲಿದೆ ಎಂದು ಶಾಲೆಯಲ್ಲಿ ವಿಚಾರಿಸಿದರು. ಆದರೆ ಅವರು ನಿಮ್ಮ ಮಗು ಈಗಾಗಲೇ ಮನೆಗೆ ಹೋಗಿದ್ದಾನೆ ಎಂದು ಹೇಳಿದ್ದರು. ಕೊನೆಗೆ ಆ ಮಗುವಿನ ಕುಟುಂಬದವರು ಮಗುವಿನ ಹುಡುಕಾಟ ನಡೆಸಿದರು.
ಎಲ್ಲ ಕಡೆ ಹುಡುಕಾಡಿದ ನಂತರ ಅಂತಿಮವಾಗಿ ಆ ಮಗುವಿನ ಶವ ಶಾಲೆಯ ಚರಂಡಿಯಲ್ಲಿ ಪತ್ತೆಯಾಗಿದೆ. ಶಾಲೆಯ ಆವರಣದ ಒಳಗೆ ಇರುವ ಚರಂಡಿಯ ಗಟಾರದೊಳಗೆ ಅವರಿಗೆ ತಮ್ಮ ಮೂರು ವರ್ಷದ ಮಗುವಿನ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಒಂದುವರೆ ತಿಂಗಳ ಮಗುವಿಗೆ ಲಿವರ್ ಸಮಸ್ಯೆ; ತನ್ನ ಲೀವರ್ ಕೊಟ್ಟು ಕಾಪಾಡಿದ ತಂದೆ
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ನಿನ್ನೆ ಮಗುವಿನ ಅಪಹರಣ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಗು ಶಾಲೆಯೊಳಗೆ ಹೋಗಿದ್ದರೂ ಹೊರಗೆ ಬಾರದಿರುವುದು ಕಂಡುಬಂದಿತ್ತು. ತನಿಖೆ ವೇಳೆ ಇಬ್ಬರು ಬಾಲಕನ ಶವವನ್ನು ಶಾಲಾ ಕೊಠಡಿಯ ಚರಂಡಿಯಲ್ಲಿ ಇಡಲಾಗಿದೆ ಎಂದು ಶಾಲೆಯ ಮಕ್ಕಳು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ