ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ವಿಶ್ವ ಯಾರು, ಈತನ ಹಿನ್ನೆಲೆ ಏನು? ಇಲ್ಲಿದೆ ಓದಿ
ಹುಬ್ಬಳ್ಳಿಯಲ್ಲಿ ಒಂದು ತಿಂಗಳ ಅಂತರದಲ್ಲೆ ಇಬ್ಬರು ಯುವತಿಯರು ಬರ್ಬರವಾಗಿ ಕೊಲೆಯಾಗಿದ್ದಾರೆ. ಏಪ್ರಿಲ್ 18 ನೇಹಾ ಹಿರೇಮಠ ಕೊಲೆಯಾಗಿದ್ದರೇ, ಮೇ 15 ರಂದು ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಕೊಲೆ ಮಾಡಲಾಗಿದೆ. ಅಂಜಲಿ ಅಂಬಿಗೇರನನ್ನು ಕೊಲೆ ಮಾಡಿದ ಆರೋಪಿ ವಿಶ್ವ ಯಾರು, ಈತನ ಹಿನ್ನೆಲೆ ಏನು? ಇಲ್ಲಿದೆ ಓದಿ
ಹುಬ್ಬಳ್ಳಿ, ಮೇ 17: ಒಂದು ತಿಂಗಳ ಒಳಗಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ನಡೆದ ನೇಹಾ ಹಿರೇಮಠ (Neha Hiremath) ಮತ್ತು ಅಂಜಲಿ ಅಂಬಿಗೇರ (Anjali Ambiger) ಕೊಲೆ ಸದ್ಯ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿವೆ. ಇತ್ತೀಚಿಗೆ, ಹುಬ್ಬಳ್ಳಿಯ ಪ್ರಮುಖ ವಾಣಿಜ್ಯ ಮಾರುಕಟ್ಟೆಗಳಲ್ಲಿ ಒಂದಾಗಿರುವ ವೀರಾಪುರ ಓಣಿಯಲ್ಲಿ ಬುಧವಾರ (ಮೇ 15) ರಂದು ನಸುಕಿನ ಜಾವ 4:30ಕ್ಕೆ ಅಂಜಲಿ ಅಂಬಿಗೇರ ಕೊಲೆಯಾಗಿತ್ತು. ಈ ಕೊಲೆಯನ್ನು ಮಾಡಿದ್ದು ವಿಶ್ವ ಅಲಿಯಾಸ್ ಗಿರೀಶ್. ಅಷ್ಟಕ್ಕು ಯಾರು ಈ ಗಿರೀಶ್? ಅಂಜಲಿಯನ್ನು ಯಾಕೆ ಕೊಲೆ ಮಾಡಿದ್ದ? ನೇಹಾಳನ್ನು ಕೊಲೆಗೈದ ರೀತಿಯಲ್ಲೇ ಆರೋಪಿ ವಿಶ್ವ ಕೊಲೆ ಮಾಡಲು ಕಾರಣವೇನು? ಇಲ್ಲಿದೆ ಓದಿ…
ಬುಧವಾರ ಮೇ 15ರ ತಮ್ಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದ ಹುಬ್ಬಳ್ಳಿ ಜನರಿಗೆ ಬೆಳ್ಳಂ ಬೆಳಿಗ್ಗೆ ಅದೊಂದು ಸುದ್ದಿ ಅಘಾತ ಉಂಟು ಮಾಡಿತು. ಅದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಜ್ಜಿ ಮತ್ತು ತಂಗಿಯೊಂದಿಗೆ ವಾಸಿಸುತ್ತಿದ್ದ ಅಂಜಲಿ ಅಂಬಗೇರ (20) ಕೊಲೆ. ಶೋಕಿಗಾಗಿ ಕಳ್ಳತನ ಆರೋಪಿ ವಿಶ್ವ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಮೈಸೂರಲ್ಲಿ ಮಹಾರಾಜ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದನು.
ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಮತ್ತು ಕೊಲೆಯಾದ ಅಂಜಲಿ ಅಂಬಿಗೇರ ಸಹಪಾಠಿಗಳು. ನಾಲ್ಕನೇ ತರಗತಿಯಿಂದ 8ನೇ ತರಗತಿವರೆಗೆ ಒಟ್ಟಿಗೆ ಓದಿದ್ದಾರೆ. ಅಂಜಲಿ ಅಂಬಿಗೇರ ವೀರಾಪುರ ಓಣಿಯಲ್ಲಿ ಅಜ್ಜಿ ಮತ್ತು ತಂಗಿಯೊಂದಿಗೆ ವಾಸವಾಗಿದ್ದರೇ, ಆರೋಪಿ ವಿಶ್ವ ಪಕ್ಕದ ಯಲ್ಲಾಪುರ ಓಣಿಯಲ್ಲಿ ಈತನೂ ಅಜ್ಜಿಯೊಂದಿಗೆ ವಾಸವಾಗಿದ್ದನು. ಇಬ್ಬರು ಬಾಲ್ಯದಿಂದ ಗೆಳೆಯರು. ಅಂಜಲಿ ಕ್ಯಾಟ್ರಿಂಗ್ ಕೆಲಸ ಮಾಡಿಕೊಂಡು, ಮನೆ ನಡೆಸುತ್ತಿದ್ದಳು. ಆದರೆ ಆರೋಪಿ ವಿಶ್ವ ಕಳ್ಳತನ ಮಾಡಲು ಆರಂಭಿಸಿದನು.
ಇಬ್ಬರು ಸ್ನೇಹಿತರಾಗಿದ್ದರಿಂದ, ಇವರ ಸ್ನೇಹ ಮುಂದೆ ಪ್ರೀತಿಗೆ ತಿರುಗಿದೆ. ಪ್ರೀತಿಯಲ್ಲಿ ಬಿದ್ದ ಇಬ್ಬರು ಊರಲ್ಲಿ ಒಟ್ಟಿಗೆ ಸುತ್ತಾಡಿದ್ದಾರೆ. ಅಲ್ಲದೆ ಅಂಜಲಿ ಮೂರು ತಿಂಗಳು ಅಜ್ಜಿ ಮನೆ ಬಿಟ್ಟು ವಿಶ್ವ ಜೊತೆ ವಾಸವಾಗಿದ್ದು, 15 ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾಗಿಯೂ ಕೆಲವು ಮೂಲಗಳು ಮಾಹಿತಿ ನೀಡಿವೆ. ಎಂಟು ದಿನಗಳ ಹಿಂದೆ ಅಷ್ಟೇ ಅಂಜಲಿ ಅಜ್ಜಿ ಮನೆಗೆ ಬಂದಿದ್ದಳು.
ಇನ್ನು ವಿಶ್ವ ಇತ್ತೀಚಿಗೆ ಮೈಸೂರಿನಲ್ಲಿನ ಮಹಾರಾಜ ಹೊಟೇಲ್ನಲ್ಲಿ ಕೆಲಸ ಮಾಡುತ್ತಾ ಒಂಟಿಯಾಗಿದ್ದನು. ಅಂಜಲಿ ಹುಬ್ಬಳ್ಳಿಯಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಾ ಅಜ್ಜಿಯೊಂದಿಗೆ ವಾಸವಾಗಿದ್ದನು. ತನನ್ನು ಅಜ್ಜಿ ಮನೆ ಸೇರಿದ್ದ ಅಂಜಿಲಿಗೆ ವಿಶ್ವ ಕರೆ ಮಾಡಿ ಮೈಸೂರಿಗೆ ಬಾ ಎಂದು ಪೀಡಿಸುತ್ತಿದ್ದನು. ಆದರೆ ಇದಕ್ಕೆ ಅಂಜಿಲಿ ಒಪ್ಪಿರಲಿಲ್ಲ. ಈ ಮಧ್ಯೆ ಅಂಜಲಿ ಪ್ರಿಯಕರ ವಿಶ್ವನಿಗೆ ಎರಡು ಸಾವರಿ ಫೋನ್ ಪೇ ಮಾಡು ಎಂದಿದ್ದಳು. ಆದರೆ ವಿಶ್ವ ಒಂದು ಸಾವಿರ ಫೋನ್ ಪೇ ಮಾಡಿದ್ದನು.
ಇದಾದ ಬಳಿಕ ವಿಶ್ವ ಪ್ರಿಯತಮೆ ಅಂಜಲಿಗೆ ಪದೇ ಪದೇ ಕರೆ ಮಾಡಿ, ಮೈಸೂರಿಗೆ ಬಾ ಎಂದು ಕರೆ ಮಾಡುತ್ತಿದ್ದನು. ನೀನು ಮೈಸೂರಿಗೆ ಬಾರದೆ ಇದ್ದರೆ ನಿರಂಜನ ಹಿರೇಮಠ ಮಗಳು ನೇಹಾ ಹಿರೇಮಠಳನ್ನು ಕೊಲೆ ಮಾಡಿದ ರೀತಿ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನು. ಆರೋಪಿ ವಿಶ್ವ ತನ್ನ ಮೊಮಗ್ಗಳಿಗೆ ಬೆದರಿಕೆ ಹಾಕಿದ ವಿಚಾರವನ್ನು ಅಂಜಲಿ ಅಜ್ಜಿ ಬೆಂಡಿಗೇರಿ ಪೊಲೀಸರಿಗೆ ಹೇಳಿದ್ದರಂತೆ.
ಇದನ್ನೂ ಓದಿ: ಅಂಜಲಿ ಹತ್ಯೆ: ದೂರು ಬಂದಿದ್ರೂ ನಿರ್ಲಕ್ಷ್ಯ, ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್-ಪೇದೆ ಸಸ್ಪೆಂಡ್
ಆದರೆ ಪೊಲೀಸರು “ಇದೆಲ್ಲ ಮೂಡನಂಭಿಕೆ, ಆ ರೀತಿ ಎಲ್ಲ ನಡೆಯಲ್ಲ” ಎಂದು ಬೇಜಾಬ್ದಾರಿ ಮಾತುಗಳನ್ನು ಆಡಿದ್ದರು ಅಂತ ಅಂಜಲಿ ಅಜ್ಜಿ ಹೇಳಿದ್ದಾರೆ. ಜೀವ ಬೆದರಿಕೆ ಹಾಕಿದ್ದ ವಿಶ್ವ ಪ್ರಿಯತಮೆ ಅಂಜಲಿಗೆ ಪೀಡಿಸುವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ಬೇಸತ್ತ ಅಂಜಲಿ ಪ್ರಿಯಕರ ವಿಶ್ವನ ನಂಬರ್ ಬ್ಲಾಕ್ ಮಾಡಿದ್ದಳು. ಅಂಜಲಿ ಪ್ರಿಯಕರ ವಿಶ್ವನ ನಂಬರ್ ಬ್ಲಾಕ್ ಮಾಡಿದ ಬಳಿಕ, ವಿಶ್ವ ಕೊಲೆ ಮಾಡುವ ದಿನದವರೆಗೆ ತನ್ನ ಮೊಬೈಲ್ ಬಳಸಿರಲಿಲ್ಲ.
ಇನ್ನು ಆರೋಪಿ ವಿಶ್ವ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದನು. ವಿಶ್ವ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಬುಲೆಟ್ ಬೈಕ್, ಚಿನ್ನ, ಬೆಳ್ಳಿ ಮತ್ತು ಮನೆ ಮುಂದೆ ಇಟ್ಟಿದ್ದ ವಸ್ತುಗಳನ್ನ ಕಳ್ಳತನ ಮಾಡುತ್ತಿದ್ದರು. ವಿಶ್ವನ ಮೂವರು ಸ್ನೇಹಿತರು ಇಗಾಗಲೇ ಜೈಲು ಪಾಲಾಗಿದ್ದಾರೆ. ಆತ ಈ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದನು. ವಿಶ್ವನ ಸ್ನೇಹಿತನಾ ಹಿಂದೆ ಶೇಷ್ಯಾ ಹುಬ್ಬಳ್ಳಿ ತಾಲೂಕಿನ ಬಿಡನಾಳ ಬಳಿ ಯುವಕ ಸದ್ದಾಂ ಕೊಲೆ ಪ್ರಕರಣದಲ್ಲಿ 3 ದಿನದ ಬಂಧನವಾಗಿದ್ದಾನೆ. ಸದ್ದಾಂನನ್ನು ಶೇಷ್ಯಾ ಕೊಂದ ನಂತರ, ಅಂಜಲಿಯನ್ನು ಕೂಡ ತನ್ನ ಸ್ನೇಹಿತನಂತೆಯೇ ಕೊಲೆ ಮಾಡಬೇಕೆಂದು ವಿಶ್ವ ಸಂಚು ರೂಪಿಸಿದನು.
ಯಾವಾಗ ಅಂಜಲಿ ಪ್ರಿಯಕರ ವಿಶ್ವನ ಜೊತೆ ಮಾತನಾಡುವುದನ್ನು ಬಿಟ್ಟಳು, ಆಗ ವಿಶ್ವ ಅಲಿಯಾಸ್ ಗಿರೀಶ್ ಆಕೆಯ ಮೇಲೆ ಕೋಪಗೊಂಡಿದ್ದಾನೆ. ನಂತರ ವಿಶ್ವ ಮೇ 15 ರಂದು ನಸುಕಿನ ಜಾವ ಮೈಸೂರಿಂದ ಹುಬ್ಬಳ್ಳಿಗೆ ಬಂದಿದ್ದಾನೆ. ಹುಬ್ಬಳ್ಳಿ ಹೊಸ ನಿಲ್ದಾಣದಲ್ಲಿ 250 ರೂಪಾಯಿಗೆ ಆಟೋ ಬಾಡಿಗೆ ಪಡೆದಿದ್ದಾನೆ. ಆಟೋ ಚಾಲಕನಿಗೆ ಪ್ರಯಾಣಿಸುತ್ತಿರುವಾಗಲೇ ಹಣ ನಿಡಿದ್ದಾನೆ. ಆಟೋದಲ್ಲಿ ಅಂಜಲಿ ಮನೆಗೆ ಬಂದಿದ್ದಾನೆ. ಬಳಿಕ ಆಟೋದವನು ಸ್ಥಳದಿಂದ ತೆರಳಿದ್ದಾನೆ.
ನಂತರ ಅಂಜಿಲಿ ಮನೆಯೊಳಗೆ ನುಗ್ಗಿದ ವಿಶ್ವ ಅಂಜಲಿಯನ್ನು ಆಕೆಯ ಅಜ್ಜಿ ಹಾಗೂ ಇಬ್ಬರು ಸಹೋದರಿಯರ ಮುಂದೆಯೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಇರಿದಿದ್ದಾನೆ. ಮೊದಲಿಗೆ ಮನೆಯ ಪಡಸಾಲಿಯಲ್ಲಿ ಅಂಜಲಿಗೆ ಚಾಕು ಹಾಕಿದ ವಿಶ್ವ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಲ್ಲಿಂದ ಅಡುಗೆಯ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕು ಚುಚ್ಚಿದ್ದಾನೆ. ಅಂಜಲಿ ಕೊನೆಯುಸಿರೆಳೆದಿದ್ದಾಳೆ.
ಕೊಲೆ ಮಾಡಿದ ಬಳಿಕ ವಿಶ್ವ ಮತ್ತೆ ಹೊಸ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿ ಹಾವೇರಿಗೆ ಹೋಗಿದ್ದಾನೆ. ಹಾವೇರಿಯಲ್ಲಿ ಮೈಸೂರು ರೈಲು ಹತ್ತಿದ್ದಾನೆ. ರೈಲಿನಲ್ಲಿ ಬಿಹಾರ ವ್ಯಕ್ತಿಯೊಬ್ಬನ ಮೊಬೈಲ್ನಲ್ಲಿ ಯಾವುದೋ ಪೋಟೋ ನೋಡಿದ್ದಾನೆ. ಮೈಸೂರಿಗೆ ತಲುಪಿದ ಬಳಿಕ ತಾನು ಕೆಲಸ ಮಾಡುತ್ತಿದ್ದ ಮಹರಾಜ್ ಹೋಟೆಲ್ನಲ್ಲಿ ಮಲಗಿದ್ದನು.
ಆರೋಪಿ ವಿಶ್ವ ಕಳೆದ 15 ದಿನಗಳಿಂದ ಮೊಬೈಲ್ ಬಳಕೆ ಮಾಡಿರಲಿಲ್ಲ. ಅದೇನು ತಿಳಿಯಿತು ಆರೋಪಿ ವಿಶ್ವ ಪೊಲೀಸರಿಗೆ ಶರಣಾಗಲು ಹುಬ್ಬಳ್ಳಿಗೆ ಬರಲು ನಿರ್ಧರಿಸಿದ್ದಾನೆ. ಹೀಗಾಗಿ ಆರೋಪಿ ವಿಶ್ವ ಮೈಸೂರಿನಿಂದ ಅರಸಿಕೇರೆಗೆ ಬಂದು, ಇಲ್ಲಿ ವಿಶ್ವಮಾನ ಎಕ್ಸಪ್ರೆಸ್ ಜನರಲ್ ಬೋಗಿ ಹತ್ತಿದ್ದಾನೆ. ಇದೇ ರೈಲಿನಲ್ಲಿ ತುಮಕೂರಿನಿಂದ ದಂಪತಿ ಬರುತ್ತಿದ್ದರು. ಅರಸಿಕೆರೆಯಲ್ಲಿ ರೈಲು ಹತ್ತಿದ ನಂತರ ಆರೋಪಿ ವಿಶ್ವ ಮಹಿಳೆಯನ್ನು ಕೆಟ್ಟ ದೃಷ್ಟಯಿಂದ ನೋಡುತ್ತಿದ್ದನು. ರೈಲು ಚಿಕ್ಕಜಾಜೂರಿನ ನಿಲ್ದಾಣಕ್ಕೆ ಬಂದಾಗ ಮಹಿಳೆ ಶೌಚಕ್ಕೆ ಹೋದರು. ಈ ವೇಳೆ ಆರೋಪಿ ವಿಶ್ವ ಮಹಿಳೆಯನ್ನು ಹಿಂಬಾಲಿಸಿದ್ದಾನೆ.
ಇದನ್ನೂ ಓದಿ: ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸರ ಲೋಪವೂ ಇದೆ: ಜಿ ಪರಮೇಶ್ವರ್
ಬಳಿಕ ಶೌಚಾಲಯದ ಕಿಂಡಿಯಿಂದ ಒಳಗಡೆ ಇಣುಕಿ ನೋಡಿದ್ದಾನೆ. ಇದನ್ನು ಗಮನಿಸಿದ ಮಹಿಳೆ ನಿನಗೆ ಅಕ್ಕ-ತಂಗಿಯವರಿಲ್ಲ ಎಂದು ದಬಾಯಿಸಿದ್ದಾರೆ. ಆಗ ವಿಶ್ವ ಮಹಿಳೆಗೆ ಚಾಕು ತೋರಿಸಿ ಹೊಟ್ಟೆಗೆ ಚುಚ್ಚಲು ಮುಂದಾಗಿದ್ದಾನೆ. ಆಗ ಮಹಿಳೆ ಏಡಗೈ ಮುಂದೆ ತಂದಿದ್ದರಿಂದ ಚಾಕು ಕೈಗೆ ತಾಗಿದೆ. ಬಳಿಕ ಮಹಿಳೆ ಪತಿಯನ್ನು ಕರೆದಿದ್ದಾರೆ. ಅಷ್ಟೊತ್ತಿಗಾಗಲೆ ರೈಲು ದಾವಣಗೆರೆ ನಿಲ್ದಾಣ ತಲುಪಿತ್ತು. ಸ್ಥಳಕ್ಕೆ ಮಹಿಳೆಯ ಪತಿ ಹಾಗೂ ಸಾರ್ವಜನಿಕರು ಬರುವಷ್ಟರಲ್ಲಿ ರೈಲಿನಿಂದ ಜಿಗಿದು, ಓಡಿ ಹೋಗುತ್ತಿದ್ದನು.
ಕೂಡಲೆ ಅಲ್ಲಿನ ಸಾರ್ವಜನಿಕರು ಆತನನ್ನು ಹಿಮ್ಮೆಟ್ಟಿ ಹಿಡಿದಿದ್ದಾರೆ. ಬಳಿಕ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಬಂದು ಆರೋಪಿ ವಿಶ್ವನನ್ನು ವಶಕ್ಕೆ ಪಡೆದು, ಆಸ್ಪತ್ರೆಗೆ ದಾಖಲಸಿದ್ದಾರೆ. ಮಹಿಳೆಯನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬಳಿಕ ಪೊಲೀಸರಿಗೆ ಆರೋಪಿ ವಿಶ್ವ ಬಗ್ಗೆ ತಿಳಿದಿದೆ. ಅಂಜಲಿ ಕೊಲೆ ಪ್ರಕರಣ ಆರೋಪಿ ಎಂದು ತಿಳಿದ ಕೂಡಲೆ, ಮಾಹಿತಿಯನ್ನು ಹುಬ್ಬಳ್ಳಿ ಪೊಲೀಸರಿಗೆ ತಿಳಿಸಲಾಗಿದೆ. ಬಳಿಕ ದಾವಣಗೆರೆ ಪೊಲೀಸರು ಇಂದು (ಮೇ 17) ಆರೋಪಿ ವಿಶ್ವನನ್ನು ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ವಿಶ್ವನನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Fri, 17 May 24