Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪೊಲೀಸರಿಗೆ ಸವಾಲ್ ಆದ ಇ-ಮೇಲ್ ಹುಸಿ ಬಾಂಬ್ ಕೇಸ್​; ಕ್ಲ್ಯೂ ಸಿಗದೆ ಖಾಕಿ ಕಂಗಾಲು

ಅದೆಂತಾ ಗಂಭೀರ ಪ್ರಕರಣವಾದ್ರೂ ಭೇದಿಸುವ ಪೊಲೀಸರಿಗೆ ಇ-ಮೇಲ್ ಹುಸಿ ಬಾಂಬ್​ ಕಿಡಿಗೇಡಿ ಕೃತ್ಯ ಖಾಕಿ ಕೈ ಕಟ್ಟಿ ಕೂರುವಂತೆ ಮಾಡಿದೆ. ಒಂದರ ನಂತರ ಮತ್ತೊಂದರಂತೆ ಘಟನೆ ಮರುಕಳುಹಿಸಿದರೂ ಈವರೆಗೂ ಸಣ್ಣ ಕ್ಲ್ಯೂ ಸಿಗದೇ ಪೊಲೀಸರು ಕಂಗಾಲಾಗಿದ್ದಾರೆ. ಕೊನೆಗೆ ಕೇಂದ್ರ ತನಿಖಾ ತಂಡದ ಮೊರೆ ಹೊದರೂ ಯಾವುದೇ ಉತ್ತರ ಸಿಗದೇ ಕೈಕಟ್ಟಿ ಕುಳಿತಿದ್ದಾರೆ.

ಬೆಂಗಳೂರು ಪೊಲೀಸರಿಗೆ ಸವಾಲ್ ಆದ ಇ-ಮೇಲ್ ಹುಸಿ ಬಾಂಬ್ ಕೇಸ್​; ಕ್ಲ್ಯೂ ಸಿಗದೆ ಖಾಕಿ ಕಂಗಾಲು
ಬೆಂಗಳೂರು ಪೊಲೀಸ್
Follow us
Jagadisha B
| Updated By: ಆಯೇಷಾ ಬಾನು

Updated on: May 18, 2024 | 7:06 AM

ಬೆಂಗಳೂರು, ಮೇ.18: ಬೆಂಗಳೂರು ಪೊಲೀಸ್ (Bengaluru Police) ಅಂದ್ರೆ ದೇಶದಲ್ಲೇ ಬೆಸ್ಟ್ ಕಾಪ್ ಅನ್ನೊ ಹೆಗ್ಗಳಿಕೆ ಇದೆ. ಎಂತಹ ಗಂಭೀರ ಪ್ರಕರಣವಾದರೂ ಸಹ ತನಿಖೆ ಕೈಗೆತ್ತಿಕೊಂಡ್ರೆ ಸಾಕು ಕೃತ್ಯದ ಅಸಲಿ ಕಾರಣದ ಜೊತೆ ಆರೋಪಿಗಳನ್ನು ಬಂಧಿಸುವ ಚಾಕಚಕ್ಯತೆ ನಮ್ಮ ಬೆಂಗಳೂರು ಪೊಲೀಸರದ್ದು. ಆದರೆ ಇತ್ತೀಚಿಗೆ ನಗರದಲ್ಲಿ ಮರುಕಳುಹಿಸುತ್ತಿರುವ ಅದೊಂದು ಕೃತ್ಯ ಬೆಂಗಳೂರು ಪೊಲೀಸರಿಗೆ ತಲೆ ನೋವು ತಂದಿದ್ದಷ್ಟೇ ಅಲ್ಲದೇ ಕ್ಲ್ಯೂ ಇಲ್ಲದೇ ಕಂಗಾಲಾಗುವಂತೆ ಮಾಡಿದೆ.

ನಗರದಲ್ಲಿ ಇತ್ತೀಚೆಗೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶಗಳು ಹೆಚ್ಚಾಗಿವೆ. ಮೊದಲಿಗೆ ಪ್ರತಿಷ್ಠಿತ ಕಾಲೇಜುಗಳು, ನಂತರ ಶಾಲೆಗಳು, ಮ್ಯೂಸಿಯಂಗಳ ಬಳಿಕ ಆಸ್ಪತ್ರೆಗಳಿಗೂ ಸಹ ಇ-ಮೇಲ್ ಕಳುಹಿಸೊ ಮುಖಾಂತರ ಬಾಂಬ್ ಸ್ಪೋಟದ ಹುಸಿ ಬೆದರಿಕೆ ಇ-ಮೇಲ್ ಗಳು ಬಂದಿವೆ. ಆರಂಭದಲ್ಲಿ ಆರೋಪಿಗಳ ಪತ್ತೆ ಮಾಡಬಹುದು ಎಂದು ಕೊಂಡಿದ್ದ ಪೊಲೀಸರಿಗೆ ತನಿಖೆ ವೇಳೆ ಒಂದರ ನಂತರ ಮತ್ತೊಂದರಂತೆ ಸವಾಲುಗಳು ಎದುರಾಗಿದ್ದು, ತನಿಖೆಯ ಈ ವರೆಗೂ ಕಿಡಿಗೇಡಿ ಕೃತ್ಯ ಎಸಗಿದವರು ಯಾರು ಎಂಬ ಖಚಿತ ಕ್ಲ್ಯೂ ಪೊಲೀಸರಿಗೆ ಸಿಕ್ಕಿಲ್ಲ.

ಇದನ್ನೂ ಓದಿ: ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಮನೆಗೆ ಹೋಗುವಾಗ ಭೀಕರ ಅಪಘಾತ: ಮೂವರು ಸಾವು

ಕಿಡಿಗೇಡಿಗಳು ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಗಳನ್ನು ವಿಪಿಎನ್ ಬಳಸುವ ಮುಖಾಂತರ ಕಳುಹಿಸಿದ್ದು, ಸಂದೇಶ ಕಳುಹಿಸಿದವರ ಮಾಹಿತಿ ನೀಡುವಂತೆ ಪೊಲೀಸರು ಕಂಪನಿಗಳ ಮೊರೆ ಹೊಗಿದ್ದರು. ಆದರೆ ಕಂಪನಿಗಳು ಮಾಹಿತಿ ನೀಡಲು ನಿರಾಕರಿಸಿವೆ. ಆ ಬಳಿಕ ಕೇಂದ್ರ ತನಿಖಾ ತಂಡಗಳ ಮುಖಾಂತರ ಸಹ ಕೆಲ ಮಾಹಿತಿ ಪಡೆಯಲು ಮುಂದಾಗಿದ್ದ ಪೊಲೀಸರಿಗೆ ಈವರೆಗೂ ಉತ್ತರ ಬರದೇ ಇರುವುದು ಪೊಲೀಸರ ನಿದ್ದೆ ಕೆಡಿಸಿದೆ..

ಬೆಂಗಳೂರಿನ ಬಾಂಬ್ ಸ್ಪೋಟ ಪ್ರಕರಣದ ಬಳಿಕ ಮತ್ತಷ್ಟು ಗಂಭೀರವಾಗಿ ಈ ಕೃತ್ಯ ಪರಿಗಣಿಸಿದ ಪೊಲೀಸರಿಗೆ ಈಗ ಸವಾಲುಗಳು ಎದರಾಗಿದೆ. ಒಂದು ಕಡೆ ಹುಸಿ ಬಾಂಬ್ ನ ಕೃತ್ಯ ನಿಂತಿಲ್ಲ. ಮತ್ತೊಂದು ಕಡೆ ಇದರ ಹಿಂದಿರುವ ಕಿಡಿಗೇಡಿಗಳು ಯಾರೆಂಬ ಪ್ರಶ್ನೆಗೆ ಉತ್ತರವಿಲ್ಲ. ಪೊಲೀಸರಿಗೆ ಬೇಕಾದ ಮಾಹಿತಿ ಸಂಬಂಧ ಪಟ್ಟ ಕಂಪನಿಗಳು ಕೊಡುತ್ತಿಲ್ಲಾ ಅನ್ನೊದರ ಜೊತೆಗೆ ಕೇಂದ್ರ ತನಿಖಾ ತಂಡಗಳಿಂದ ಪೊಲೀಸರಿಗೆ ಯಾವುದೇ ಸಹಾಯ ಸಿಗುತ್ತಿಲ್ಲ. ಹೀಗಿರುವಾಗ ಈ ಹುಸಿ ಬಾಂಬ್ ಇ-ಮೇಲ್ ಕೃತ್ಯ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ