ಟಿವಿ9ನಲ್ಲಿ ವರದಿ ಬಳಿಕ ಎಚ್ಚೆತ್ತ ಬಿಬಿಎಂಪಿ: ಮರ, ರೆಂಬೆ, ಕೊಂಬೆ ತೆರವಿಗೆ ಸಹಾಯವಾಣಿ ಬಿಡುಗಡೆ
ಅಪಾಯದ ಸ್ಥಿತಿಯಲ್ಲಿರುವ ಮರ, ರೆಂಬೆ, ಕೊಂಬೆ ತೆರವಿಗೆ ಬಿಬಿಎಂಪಿ ಮುಂದಾಗಿದ್ದು, ಸಾರ್ವಜನಿಕರು ದೂರು ನೀಡಿದ ತಕ್ಷಣ ತೆರವಿಗೆ ಧಾವಿಸಲಿದೆ. ಇದಕ್ಕಾಗಿ ಬಿಬಿಎಂಪಿಯಿಂದ ಸಹಾಯವಾಣಿ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು ವಾಟ್ಸಾಪ್ನಲ್ಲೇ ದೂರು ನೀಡಬಹುದಾಗಿದೆ. ವಲಯವಾರು ಅರಣ್ಯಾಧಿಕಾರಿಗಳ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಲಾಗಿದೆ. ದೂರು ನೀಡಿದ ಕೂಡಲೇ ಪಾಲಿಕೆ ಸಿಬ್ಬಂದಿಗಳು ಬಂದು ತೆರವು ಮಾಡುತ್ತಾರೆ.
ಬೆಂಗಳೂರು, ಮೇ 17: ನಗರದಲ್ಲಿ ಕೆಲ ದಿನಗಳಿಂದ ಮಳೆರಾಯ (Rain) ಹಗಲು ರಾತ್ರಿಯೆನ್ನದೇ ಆರ್ಭಟಿಸಿದ್ದಾನೆ. ಮಳೆಯಿಂದಾಗಿ ಈಗಾಗಲೇ ನಗರದ ಹಲವೆಡೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಸಾಕಷ್ಟು ಮರಗಳು ಧರೆಗುರುಳಿವೆ. ಹೀಗಾಗಿ ಈ ನಿಟ್ಟಿನಲ್ಲಿ ಟಿವಿ9 ಅಪಾಯದ ಸ್ಥಿತಿಯಲ್ಲಿರುವ ಮರ, ರೆಂಬೆ, ಕೊಂಬೆ ಬಗ್ಗೆ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ಮರ, ರೆಂಬೆ, ಕೊಂಬೆ ತೆರವಿಗೆ ಸಹಾಯವಾಣಿ ಬಿಡುಗಡೆ ಮಾಡಿದೆ.
ಅಪಾಯದ ಸ್ಥಿತಿಯಲ್ಲಿರುವ ಮರ, ರೆಂಬೆ, ಕೊಂಬೆ ತೆರವಿಗೆ ಬಿಬಿಎಂಪಿ ಮುಂದಾಗಿದ್ದು, ಸಾರ್ವಜನಿಕರು ದೂರು ನೀಡಿದ ತಕ್ಷಣ ತೆರವಿಗೆ ಧಾವಿಸಲಿದೆ. ಇದಕ್ಕಾಗಿ ಬಿಬಿಎಂಪಿಯಿಂದ ಸಹಾಯವಾಣಿ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು ವಾಟ್ಸಾಪ್ನಲ್ಲೇ ದೂರು ನೀಡಬಹುದಾಗಿದೆ.
ಇದನ್ನೂ ಓದಿ: ಮಳೆಗಾಲದ ವೇಳೆ ಧರೆಗುರುಳುವ ಮರದ ರೆಂಬೆ, ಕೊಂಬೆಗಳನ್ನು ತೆರವುಗೊಳಿಸಲು 39 ತಂಡಳನ್ನು ನಿಯೋಜಿಸಿದ ಬಿಬಿಎಂಪಿ
ವಲಯವಾರು ಅರಣ್ಯಾಧಿಕಾರಿಗಳ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಲಾಗಿದ್ದು, ಆ ಮೂಲಕ ಅಪಾಯದ ಸ್ಥಿತಿಯಲ್ಲಿರುವ ಮರ ಫೋಟೋ ಕಳಿಸಬಹುದು. ದೂರು ನೀಡಿದ ಕೂಡಲೇ ಪಾಲಿಕೆ ಸಿಬ್ಬಂದಿಗಳು ಬಂದು ತೆರವು ಮಾಡುತ್ತಾರೆ.
ಬಿಬಿಎಂಪಿಯಿಂದ ಸಹಾಯವಾಣಿ ಹೀಗಿದೆ.
- ಪೂರ್ವ ವಲಯ-9380090027
- ಪಶ್ಚಿಮ ವಲಯ-9449659252
- ದಕ್ಷಿಣ ವಲಯ-9480685039
- ದಾಸರಹಳ್ಳಿ-9164042566
- ಬೊಮ್ಮನಹಳ್ಳಿ ವಲಯ-9580685399/9480685539
- ಯಲಹಂಕ ವಲಯ-9164042566/9483139438
- ರಾಜರಾಜೇಶ್ವರಿನಗರ ವಲಯ-7760553545/9880516322
- ಮಹದೇವಪುರ ವಲಯ-8147276414/9480685541
39 ಮರ ಕಟಾವು ತಂಡಗಳ ನಿಯೋಜನೆ
ಪಾಲಿಕೆ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 28 ಮರ ಕಟಾವು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ ತುರ್ತಾಗಿ ಮರಗಳನ್ನು ತೆರವುಗೊಳಿಸುವ ಸಲುವಾಗಿ ಹೆಚ್ಚುವರಿಯಾಗಿ 11 ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂಗಾರು ಮಳೆ ಪ್ರವಾಹ ಮುನ್ನೆಚ್ಚರಿಕೆ ನೀಡಲಿದೆ ಸೆನ್ಸರ್: ತಂತ್ರಜ್ಞಾನದ ಮೊರೆಹೋದ ಬಿಬಿಎಂಪಿ
ಪ್ರತಿ ತಂಡದಲ್ಲೂ ಏಳು ಕಾರ್ಮಿಕರು, ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಮರಗಳನ್ನು ತೆರವುಗೊಳಿಸುವ ಅವಶ್ಯಕತೆಯಿರುವ ಗರಗಸ, ಕೊಂಬೆಗಳನ್ನು ತುಂಡರಿಸುವ ಯಂತ್ರ, ಹಾರೆ, ಹಗ್ಗ ಸೇರಿದಂತೆ ಇನ್ನಿತರೆ ಸಲಕರಣೆಗಳಿರಲಿವೆ. ಜೊತೆಗೆ ಕಟಾವು ಮಾಡಿದ ಮರದ ತುಂಡುಗಳ ಸಾಗಣೆಗಾಗಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.