Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್ಐಟಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ, ಪ್ರಜ್ವಲ್ ನನ್ನು ಸೆಕ್ಯೂರ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ: ಪರಮೇಶ್ವರ್

ಎಸ್ಐಟಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ, ಪ್ರಜ್ವಲ್ ನನ್ನು ಸೆಕ್ಯೂರ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ: ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 17, 2024 | 1:32 PM

ಇಂಥ ಪ್ರಕರಣಗಳನ್ನು ಹಗುರವಾಗಿ ತೆಗೆದುಕೊಳ್ಳುವ ಪ್ರಶ್ನೆಯೇ ಉದ್ಭವಿಸಲ್ಲ, ವಿರೋಧ ಪಕ್ಷಗಳ ನಾಯಕರು ಹಾಗೆ ಅರೋಪಗಳನ್ನು ಮಾಡುತ್ತಿರುತ್ತಾರೆ, ಅವರ ಕೆಲಸವೇ ಅದು, ಆದರೆ ನಾವು ನಮ್ಮ ಕೆಲಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿದ್ದೇವೆ, ಎಸ್ಐಟಿ ಅಧಿಕಾರಿಗಳು ಅಗತ್ಯಬಿದ್ದಾಗ ಮುಖ್ಯಮಂತ್ರಿ ಇಲ್ಲವೇ ತನಗೆ ಬ್ರೀಫ್ ಮಾಡುತ್ತಿರುತ್ತಾರೆ ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದ (Prajwal Revanna) ತನಿಖೆ ಬಗ್ಗೆ ಸದಾ ಕಾಮೆಂಟ್ ಗಳನ್ನು ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ (HD Kumaraswamy) ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಮತ್ತೊಮ್ಮೆ ಖಡಕ್ ಉತ್ತರ ನೀಡಿದರು. ಪ್ರಕರಣವೊಂದು ತನಿಖೆಯ ಹಂತದಲ್ಲಿರುವಾಗ ವಿವರಗಳನನ್ನು ಬಹಿರಂಗಗೊಳಿಸಲಾಗಲ್ಲ, ಅದು ಕುಮಾರಸ್ವಾಮಿಯವರಿಗೂ ಗೊತ್ತಿದೆ, ಮಂಡ್ಯದ ಶಾಸಕರಿಗೆ ಯಾರೂ ವಿಷಯವನ್ನು ಬ್ರೀಫ್ ಮಾಡಲ್ಲ, ಒಂದು ಸರ್ಕಾರದ ಭಾಗವಾಗಿ ನಮಗೆ ಜವಾಬ್ದಾರಿಗಳಿವೆ, ಎಸ್ಐಟಿ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಮರ್ಥವಾಗಿ ತನಿಖೆ ಮಾಡುತ್ತಿದೆ ಎಂದು ಪರಮೇಶ್ವರ್ ಹೇಳಿದರು. ಇಂಥ ಪ್ರಕರಣಗಳನ್ನು ಹಗುರವಾಗಿ ತೆಗೆದುಕೊಳ್ಳುವ ಪ್ರಶ್ನೆಯೇ ಉದ್ಭವಿಸಲ್ಲ, ವಿರೋಧ ಪಕ್ಷಗಳ ನಾಯಕರು ಹಾಗೆ ಅರೋಪಗಳನ್ನು ಮಾಡುತ್ತಿರುತ್ತಾರೆ, ಅವರ ಕೆಲಸವೇ ಅದು, ಆದರೆ ನಾವು ನಮ್ಮ ಕೆಲಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿದ್ದೇವೆ, ಎಸ್ಐಟಿ ಅಧಿಕಾರಿಗಳು ಅಗತ್ಯಬಿದ್ದಾಗ ಮುಖ್ಯಮಂತ್ರಿ ಇಲ್ಲವೇ ತನಗೆ ಬ್ರೀಫ್ ಮಾಡುತ್ತಿರುತ್ತಾರೆ ಎಂದು ಪರಮೇಶ್ವರ್ ಹೇಳಿದರು.

ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ಸೆಕ್ಯೂರ್ ಮಾಡಿ ಬೆಂಗಳೂರಿಗೆ ಕರೆತರುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಗೃಹ ಸಚಿವ ಹೇಳಿದರು. ತಮ್ಮ ಕ್ಷೇತ್ರದ ಕಾರ್ಯಕರ್ತನೊಬ್ಬ ತನ್ನೊಂದಿಗೆ ಫೋಟೋ ತೆಗೆಸಿಕೊಂಡು ಅದನ್ನು ದುರುಪಯೋಗ ಮಾಡಿಕೊಂಡು ಜನರಿಂದ ಹಣ ಪೀಕುತ್ತಿದ್ದ, ಪೊಲೀಸರು ಅವನನ್ನು ಬಂಧಿಸಿದ್ದಾರೆ, ಕಾನೂನು ಪ್ರಕಾರ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಹೇಳಿರುವುದಾಗಿ ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೀನಾ ಪ್ರಕರಣದ ತ್ವರಿತ ವಿಚಾರಣೆಗೂ ಒಂದು ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು: ಜಿ ಪರಮೇಶ್ವರ್