Viral: ಕೋಳಿ, ಹಂದಿ ಇತ್ಯಾದಿ ಮಾಂಸಕ್ಕಿಂತ ಹೆಬ್ಬಾವಿನ ಮಾಂಸ ಬೆಸ್ಟ್; ಅಧ್ಯಯನ 

Weird Research: ಹೆಬ್ಬಾವು ಪ್ರಪಂಚದ ಅತಿ ದೊಡ್ಡ ಹಾವುಗಳಲ್ಲಿ ಒಂದಾಗಿದ್ದು, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾ ಖಂಡಗಳಲ್ಲಿ ಇವುಗಳು ಹೆಚ್ಚಾಗಿ ಕಂಡು ಬರುತ್ತವೆ. ಈ ದೈತ್ಯ  ಸರೀಸೃಪದ ಮಾಂಸ ಮಟನ್, ಚಿಕನ್ ಗಳಿಗಿಂತ  ಉತ್ತಮವಾಗಿದ್ದು,  ಭವಿಷ್ಯದಲ್ಲಿ ಈ ಹೆಬ್ಬಾವಿನ ಮಾಂಸ ಪ್ರಪಂಚದ ಮುಖ್ಯ ಮಾಂಸವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. 

Viral: ಕೋಳಿ, ಹಂದಿ ಇತ್ಯಾದಿ ಮಾಂಸಕ್ಕಿಂತ ಹೆಬ್ಬಾವಿನ ಮಾಂಸ ಬೆಸ್ಟ್; ಅಧ್ಯಯನ 
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 27, 2024 | 3:51 PM

ಪ್ರಪಂಚ ಕೆಲವು ದೇಶಗಳಲ್ಲಿ ಜನರು ಚಿಕನ್, ಮಟನ್ ತಿನ್ನುವ ಹಾಗೆ ಹಾವುಗಳನ್ನು ಸಹ ಬಹಳ ಇಷ್ಟಪಟ್ಟು ತಿನ್ತಾರೆ. ಇಂತಹ ಸುದ್ದಿಗಳನ್ನು ಕೇಳುವಾಗ ದೇವ್ರೆ ಹಾವುಗಳನ್ನು ಅದು ಹೇಗಪ್ಪಾ ಈ ಜನ ತಿನ್ತಾರೆ ಅಂತ ನಮಗೆಲ್ಲಾ ಆಶ್ಚರ್ಯವಾಗುತ್ತೆ. ಆದರೆ ಇದೀಗ ಸಂಶೋಧಕರು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು, ʼಚಿಕನ್ ಮಟನ್ ಗಳಿಗಿಂತ ಹೆಬ್ಬಾವಿನ ಮಾಂಸವೇ ಉತ್ತಮ. ಭವಿಷ್ಯದಲ್ಲಿ ಮುಂದೊಂದು ದಿನ ಹೆಬ್ಬಾವಿನ ಮಾಂಸವೇ ಪ್ರಂಚದ ಮುಖ್ಯ ಮಾಂಸವಾಗಲಿದೆʼ ಎಂದು ಹೇಳಿದ್ದಾರೆ. ಈ ಸುದ್ದಿಯನ್ನು ಕೇಳಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಆರೋಗ್ಯದ ದೃಷ್ಟಿಯಿಂದ ಉತ್ತಮ ಮಾಂಸಹಾರವನ್ನು ಸೇವನೆ ಮಾಡಲು ಹಾಗೂ ಪ್ರಾಣಿಗಳ ಕೊಲ್ಲುವಿಕೆಯಿಂದ ಉಂಟಾಗುವ ಪರಿಸರ ಹಾನಿಯನ್ನು ತಡೆಗಟ್ಟಲು  ಆಹಾರದ ಅಲಭ್ಯತೆಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು  ವಿಜ್ಞಾನಿಗಳು ಈ ಹೊಸ ಆವಿಷ್ಕಾರವನ್ನು ಮಾಡಿದ್ದು, ಚಿಕನ್, ಮಟನ್ ಇತ್ಯಾದಿ ಮಾಂಸಗಳಿಗಿಂತ ಹೆಬ್ಬಾವಿನ ಮಾಂಸವು ಹೆಚ್ಚು ಆರೋಗ್ಯಕ್ಕೆ ಪ್ರಯೋಜನಕಾರಿ ಹಾಗೂ  ಹೆಬ್ಬಾವಿನ ಮಾಂಸವು ಮಾನವರಿಗೆ ಮಾತ್ರವಲ್ಲದೆ ಪರಿಸರಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಸಂಶೋಧಕರು ಏನು ಹೇಳಿದ್ದಾರೆ?

ಪ್ರಪಂಚದಾದ್ಯಂತ ಮಾಂಸಹಾರಿಗಳು ಚಿಕನ್ ಮತ್ತು ಮಟನ್ ಗಳನ್ನೇ ಹೆಚ್ಚು ಸೇವನೆ ಮಾಡುತ್ತಾರೆ. ಆದರೆ ಕುರಿ, ಕೋಳಿ ಇತ್ಯಾದಿ ಮಾಂಸಗಳಿಗಿಂತ ಹೆಬ್ಬಾವಿನ ಮಾಂಸವನ್ನು ಸೇವನೆ ಮಾಡುವುದು ಉತ್ತಮ ಎಂದು ಸಂಶೋಧಕರು ಹೇಳಿದ್ದಾರೆ.  ಹೌದು ಕೋಳಿ, ಕುರಿ, ಮೇಕೆ, ಹಂದಿ ಇತ್ಯಾದಿಗಳ ಸಾಕಾಣಿಕೆಗೆ ಹೆಚ್ಚಿನ ಬಂಡವಾಳದ ಅವಶ್ಯಕತೆಯೂ ಇದೆ. ಅಷ್ಟೇ ಅಲ್ಲದೆ ಫಾರ್ಮ್ ಗಳಲ್ಲಿ ಇವುಗಳು ಬೇಗ ಬೆಳೆಯಬೇಕು ಎಂಬ ಕಾರಣಕ್ಕೆ ಅವುಗಳಿಗೆ ಕೆಮಿಕಲ್ ಕೂಡಾ ಇಂಜೆಕ್ಟ್ ಮಾಡಲಾಗುತ್ತದೆ. ಇಂತಹ ಮಾಂಸವು ನಮ್ಮ ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ. ಇದಕ್ಕೆ ಪೂರಕವಾಗಿ ಹೆಬ್ಬಾವಿನ ಮಾಂಸವು ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟಿಕೆಟ್ ಇಲ್ಲದ ಪ್ರಯಾಣಿಕರು ರೈಲಿನಲ್ಲಿ ಕಾಯ್ದಿರಿಸಿದ ಆಸನದಲ್ಲಿ ಪ್ರಯಾಣಿಸುವುದು ಸರಿಯೇ? ಕೆಟ್ಟ ಅನುಭವ ಹಂಚಿಕೊಂಡ ವ್ಯಕ್ತಿ

ಏಷ್ಯಾದ ಹೆಬ್ಬಾವು ಸಾಕಾಣೆ ಕೇಂದ್ರಗಳಲ್ಲಿ 12 ತಿಂಗಳ ಸಂಶೋಧನೆಯ ನಂತರ ಈ ಅಚ್ಚರಿಯ ಸುದ್ದಿ ಹೊರಬಿದ್ದಿದ್ದು, ಪೆಟಿಕ್ಯಲೇಟೆಡ್ ಮತ್ತು ಬರ್ಮೀಸ್ ಎಂಬ ಎರಡು ಮುಖ್ಯ ರೀತಿಯ ಹೆಬ್ಬಾವುಗಳ ಮೇಲೆ ಈ ಪ್ರಯೋಗವನ್ನು ನಡೆಸಲಾಯಿತು.  ಮಾರ್ಚ್ 14 ರಂದು ಸೈಂಟಿಫಿಕ್ ರಿಪೋರ್ಟ್ಸ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆಯಲ್ಲಿ  ವಿಜ್ಞಾನಿಗಳು ಹೆಬ್ಬಾವಿನ ಮಾಂಸವು ಹೆಚ್ಚಿನ ಪ್ರೋಟೀನ್, ಕಡಿಮೆ ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊದಿದ್ದು, ಈ ಮಾಂಸವು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಹಾಗೂ ಇದು ಭವಿಷ್ಯದಲ್ಲಿ ಆಹಾರ ಅಭತ್ರೆಯನ್ನು ನೀಗಿಸಲು ಪೂರಕ ಮಾಂಸಹಾರವಾಗಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ  ಹೆಬ್ಬಾವುಗಳು  ಬಹುಬೇಗ ಸಂತಾನೋತ್ಪತ್ತಿ ಮಾಡುವುದರಿಂದ ಮತ್ತು ಇವುಗಳು ಆಹಾರವಿಲ್ಲದೆ ನಾಲ್ಕು ತಿಂಗಳುಗಳ ಕಾಲ ಬದುಕಬಹುದರಿಂದ  ಇವುಗಳ ಸಾಕಾಣಿಕೆಯೂ ಲಾಭದಾಯಕ ಎನ್ನುತ್ತಾರೆ ಸಂಶೋಧಕರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ