Lip Filler : ತುಟಿಯ ಅಂದ ಹೆಚ್ಚಿಸಲು ಲಿಪ್ ಫಿಲ್ಲರ್ ಚಿಕಿತ್ಸೆಗೊಳಗಾದ ಯುವತಿ, ಮುಂದೇನಾಯಿತು?
ಎಲ್ಲರಿಗೂ ಕೂಡ ತಾವು ಚೆನ್ನಾಗಿ ಕಾಣಬೇಕೆಂಬ ಆಸೆ. ಹೀಗಾಗಿ ಹೆಂಗಳೆಯರು ಸೌಂದರ್ಯಕ್ಕೆ ಹೆಚ್ಚು ಗಮನ ಕೊಡುವ ಮೂಲಕ ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಮುಖದ ಸೌಂದರ್ಯವನ್ನು ಹೆಚ್ಚಿಸಲು ಪ್ಲಾಸ್ಟಿಕ್ ಸರ್ಜರಿಯಂತಹ ಕೆಲಸಕ್ಕೂ ಕೈ ಹಾಕುತ್ತಾರೆ. ಇದೀಗ ವಿದೇಶಿ ಯುವತಿಯೊಬ್ಬಳು ಲಿಪ್ ಫಿಲ್ಲರ್ ಮಾಡಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಚಿಕಿತ್ಸೆಯ ಪಡೆದ ಬಳಿಕ ಸಾಕಷ್ಟು ಅಡ್ಡಪರಿಣಾಮಗಳಾಗಿವೆ.
ಇತ್ತೀಚೆಗಿನ ದಿನಗಳಲ್ಲಿ ಕೃತಕವಾಗಿ ತಮ್ಮ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಲು ಹೋಗಿ ಪ್ರಾಣ ಕಳೆದುಕೊಂಡ ಅದೆಷ್ಟೋ ನಿದರ್ಶನಗಳು ನಮ್ಮ ಸುತ್ತಲಿನಲ್ಲಿ ಕಾಣಬಹುದು. ಕಳೆದ ಕೆಲವು ವರ್ಷಗಳಿಂದ ಲಿಪ್ ಫಿಲ್ಲರ್ ಅಂದರೆ ಲಿಪ್ ಸರ್ಜರಿಯ ಟ್ರೆಂಡ್ ಕೂಡ ಸಾಕಷ್ಟು ಹೆಚ್ಚಾಗಿದೆ. ಲಿಪ್ ಫಿಲ್ಲರ್ ಶಸ್ತ್ರಚಿಕಿತ್ಸೆಗೆ ಒಳಗಾದ ಅನೇಕ ಮಹಿಳೆಯರನ್ನು ನೀವು ಪ್ರಪಂಚದಾದ್ಯಂತ ಕಾಣಬಹುದು. ಈ ಸರ್ಜರಿಯಿಂದ ಮುಖದ ಅಂದವನ್ನೇ ಕಳೆದುಕೊಂಡವರು ಇದ್ದಾರೆ. ಇಂತಹದೊಂದು ಘಟನೆಯೊಂದು ಬೆಳಕಿಗೆ ಬಂದಿದೆ.
ಶೌನ್ನ ಎನ್ನುವವಳು ವಿದೇಶಿ ಯುವತಿಯು ಲಿಪ್ ಫಿಲ್ಲರ್ ಚಿಕಿತ್ಸೆಗೆ ಒಳಗಾಗಿದ್ದಾಳೆ. ಎರಡು ಬಾರಿ ಚಿಕಿತ್ಸೆ ಪಡೆದಿದ್ದ ಯುವತಿಯು ಮೂರನೇ ಬಾರಿ ಚಿಕಿತ್ಸೆಯ ಬಳಿಕ ಮುಖವು ಸಂಪೂರ್ಣವಾಗಿ ವಿಕಾರವಾಗಿದೆ. ಲಿಪ್ ಫಿಲ್ಲರ್ ನ ಅಡ್ಡಪರಿಣಾಮದಿಂದಾಗಿ ಕೆಲವೇ ಕೆಲವು ನಿಮಿಷಗಳಲ್ಲಿ ಕಣ್ಣು, ಮುಖ ಹಾಗೂ ತುಟಿಯು ಊದಿಕೊಂಡು ಮುಖದ ಅಂದವೇ ಹಾಳಾಗಿದೆ.
ಕೊನೆಗೆ ಈ ವಿಕಾರವಾದ ಮುಖವನ್ನು ಪರೀಕ್ಷಿಸಿದ ವೈದ್ಯರು ಲಿಪ್ ಫಿಲ್ಲರ್ ತೆಗೆದುಕೊಂಡದ್ದರ ಪರಿಣಾಮವಾಗಿ ಅಲರ್ಜಿಯಾಗಿದೆ ಎಂದಿದ್ದಾರೆ. ಆ ಬಳಿಕ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಆಕೆಗೆ ಡ್ರಿಪ್ಸ್ ನೀಡಲಾಗಿದೆ. ಈ ಯುವತಿಯು ಉಸಿರಾಟದ ತೊಂದರೆಯಿಂದ ತಾನು ಬದುಕುವುದು ಕಷ್ಟ ಎಂದೇ ಭಾವಿಸಿದ್ದಾಳೆ. ಈ ಯುವತಿಯು ಸಹಜ ಸ್ಥಿತಿಗೆ ಮರಳಲು ಒಂದು ವಾರ ತೆಗೆದುಕೊಂಡಿದ್ದು ಅಪಾಯದಿಂದ ಪಾರಾಗಿದ್ದಾಳೆ.
ಇದನ್ನೂ ಓದಿ: ಕಾಮಕಸ್ತೂರಿ ಬೀಜದಲ್ಲಿದೆ ಆರೋಗ್ಯ ಕರಾಮತ್ತು, ಇಲ್ಲಿದೆ ಸರಳ ಮನೆ ಮದ್ದುಗಳು
ಲಿಪ್ ಫಿಲ್ಲರ್ ಗಳಿಂದಾಗುವ ತೊಂದರೆಗಳೇನು?
ಲಿಪ್ ಫಿಲ್ಲರ್‌ಗಳು ಸ್ವತಃ ಅಪಾಯಕಾರಿ ವಿಧಾನವಾಗಿದ್ದು, ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಚ್ಚರ ವಹಿಸುವುದು ಅಗತ್ಯ. ಈ ಚಿಕಿತ್ಸೆಯಿಂದ ಅಡ್ಡಪರಿಣಾಮಗಳಾಗುವ ಸಾಧ್ಯತೆಯು ಅಧಿಕವಾಗಿದೆ. ಕೆಲವೊಮ್ಮೆ ನರಗಳ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಇಲ್ಲವಾದರೆ ತುಟಿಗಳು ಮತ್ತು ಮುಖದ ವಿಪರೀತ ಊತ, ತಲೆನೋವು, ವಾಕರಿಕೆ ಮತ್ತು ವಾಂತಿ, ಉಸಿರಾಟದ ತೊಂದರೆ, ದೀರ್ಘಕಾಲದ ತುರಿಕೆ ಹಾಗೂ ಕೆಂಪಾದ ಚರ್ಮ ಹೀಗೆ ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ