ಬೆಂಗಳೂರು: ಕಳೆದ ಜೂನ್ನಲ್ಲಿ ಟಿಕ್ ಟಾಕ್ ನಿಷೇಧದ ನಂತರ ದೇಶೀಯ ಕಿರು ವಿಡಿಯೋ ಆ್ಯಪ್ಗಳು ಮುಂಚೂಣಿಗೆ ಬಂದಿವೆ. ದೇಶೀಯ ಆ್ಯಪ್ಗಳೇ ಕಿರು ವಿಡಿಯೋ ಮಾರುಕಟ್ಟೆಯ ಶೇ. 40 ಭಾಗ ಹೊಂದಿವೆ ಎಂದು ಬೆಂಗಳೂರಿನ ರೆಡ್ಸೀರ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ದೇಶದಲ್ಲಿ ಟಿಕ್ ಟಾಕ್ ನಿಷೇಧದ ನಂತರ 17 ಕೋಟಿ ಬಳಕೆದಾರರು ಇತರ ಆ್ಯಪ್ಗಳತ್ತ ಮುಖಮಾಡಿದ್ದರು. ಈ ಅವಕಾಶವನ್ನು ದೇಶೀಯ ಕಿರು ವಿಡಿಯೋ ಆ್ಯಪ್ಗಳು ಸದ್ಬಳಕೆ ಮಾಡಿಕೊಂಡವು. ಡೈಲಿ ಹಂಟ್ ಒಡೆತನದ ಜೋಶ್ ಕಿರು ವಿಡಿಯೋ ಆ್ಯಪ್ ವಿನೂತನ ಸೌಲಭ್ಯಗಳನ್ನು ಒದಗಿಸುವ ಎಂಎಕ್ಸ್ ಟಕಾಟಕ್ ಎಂಬ ಆ್ಯಪ್ನ್ನು ಬಿಡುಗಡೆಗೊಳಿಸಿತು.
ರೋಪ್ಸೋ, ಚಿಂಗಾರಿ, ಮೋಜ್ ಮಿತ್ರೋನ್, ಟ್ರೆಲ್ ಮುಂತಾದ ಆ್ಯಪ್ಗಳು ಟಿಕ್ ಟಾಕ್ ನಿಷೇಧದ ನಂತರವೇ ಜನಪ್ರಿಯವಾದವು. ಕಿರು ವಿಡಿಯೋ ಆ್ಯಪ್ಗಳು ಮುನ್ನೆಲೆಗೆ ಬರುತ್ತಿರುವುದನ್ನು ಗಮನಿಸಿದ ಫೇಸ್ಬುಕ್ ‘ಫೇಸ್ಬುಕ್ ರೀಲ್ಸ್’, ಮತ್ತು ಯೂಟ್ಯೂಬ್ ‘ಯೂಟ್ಯೂಬ್ ಶಾರ್ಟ್’ ಎಂಬ ಸೌಲಭ್ಯಗಳನ್ನು ಬಿಡುಗಡೆಗೊಳಿಸಿವೆ.
ಭಾರತೀಯ ಕಿರು ವಿಡಿಯೋ ಆ್ಯಪ್ಗಳು ಹೊಸ ನಮೂನೆಯ ವಿಷಯಗಳನ್ನು ಬಿತ್ತರಿಸುತ್ತಿವೆ. ಈ ಕಾರಣದಿಂದಲೇ ಹೆಚ್ಚು ಬಳಕೆದಾರರನ್ನು ಸೆಳೆಯಲು ಸಾಧ್ಯವಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ದೇಶಿ ಕಿರು ವಿಡಿಯೋ ಆ್ಯಪ್ಗಳು ನಾಲ್ಕು ಪಟ್ಟು ಹೆಚ್ಚು ಬೆಳೆಯಲಿವೆ ಎಂದು ರೆಡ್ಸೀರ್ ಸಂಸ್ಥೆಯ ಸಿಇಒ ಅನಿಲ್ ಕುಮಾರ್ ತಿಳಿಸಿದ್ದಾರೆ.
10 ಭಾರತೀಯ ಭಾಷೆಗಳಲ್ಲಿ ಸೇವೆ ಒದಗಿಸುತ್ತಿರುವ ರೋಪ್ಸೋ ಕೃತಕ ಬುದ್ಧಿಮತ್ತೆಯ ಪ್ರಮಾಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಹೂಡಿಕೆ ಮಾಡಲಿದೆ. ಸದ್ಯ ಭಾರತದಲ್ಲಿ 60 ಕೋಟಿ ಅಂತರ್ಜಾಲ ಬಳಕೆದಾರರಿದ್ದ ಮುಂದಿನ 5 ವರ್ಷದೊಳಗೆ ಈ ಸಂಖ್ಯೆ 97 ಕೋಟಿಗೆ ಏರುವ ಸಾಧ್ಯತೆಯಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ದೇಶಿ ಕಿರು ವಿಡಿಯೋ ಆ್ಯಪ್ಗಳು ಯೋಜನೆ ರೂಪಿಸುತ್ತಿವೆ.
ಇರಲಿ ಎಚ್ಚರ, ಬೇಡ ಆತುರ.. Dating App ಬಳಸುವ ಮುನ್ನ ನೀವು ಓದಲೇಬೇಕಾದ ಸ್ಟೋರಿ ಇದು
Published On - 2:02 pm, Fri, 1 January 21