ಸುಳಿವು ನೀಡದೇನೆ ಪತ್ನಿ ಕೆಲಸ ಮಾಡುವ ಬ್ಯಾಂಕ್‌ಗೆ ಹೋಗಿ ಸರ್ಪ್ರೈಸ್ ಕೊಟ್ಟ ಪತಿ

ಸಣ್ಣ ಪುಟ್ಟ ಸರ್ಪ್ರೈಸ್ ನೀಡಿ ಖುಷಿ ಪಡಿಸುವ ಗಂಡ ಸಿಕ್ಕರೆ ಅದಕ್ಕಿಂತ ಅದೃಷ್ಟ ಬೇರೊಂದಿಲ್ಲ. ಇದೀಗ ವ್ಯಕ್ತಿಯೊಬ್ಬ ತನ್ನ ಹೆಂಡತಿ ಕೆಲಸ ಮಾಡುವ ಸರ್ಕಾರಿ ಬ್ಯಾಂಕ್‌ಗೆ ಸರ್ಪ್ರೈಸ್ ವಿಸಿಟ್ ನೀಡಿದ್ದಾನೆ. ಕೆಲಸದ ಒತ್ತಡದಲ್ಲಿದ್ದ ಹೆಂಡತಿಯ ಮೊಗದಲ್ಲಿ ನಗು ಮೂಡಿಸಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಸುಳಿವು ನೀಡದೇನೆ ಪತ್ನಿ ಕೆಲಸ ಮಾಡುವ ಬ್ಯಾಂಕ್‌ಗೆ ಹೋಗಿ ಸರ್ಪ್ರೈಸ್ ಕೊಟ್ಟ ಪತಿ
ವೈರಲ್‌ ವಿಡಿಯೋ
Image Credit source: Instagram

Updated on: Aug 24, 2026 | 2:34 PM

ಈಗಿನ ಕಾಲದಲ್ಲಿ ಗಂಡ ಹೆಂಡತಿ (husband – wife) ಸಂಬಂಧವು ಅರ್ಥ ಕಳೆದುಕೊಳ್ಳುತ್ತಿದೆ. ಸಣ್ಣ ಪುಟ್ಟ ವಿಷ್ಯಕ್ಕೆ ದೂರಾಗುವ ದಂಪತಿಗಳ ನಡುವೆ ಹೆಂಡತಿಯನ್ನು ಖುಷಿಯಾಗಿಡಲು ಬಯಸುವ ಗಂಡ ಸಿಕ್ಕರೆ ಅದಕ್ಕಿಂತ ಅದುವೇ ಹೆಣ್ಣಿನ ಅದೃಷ್ಟ. ಇದಕ್ಕೆ ಉದಾಹರಣೆಯಂತಿದೆ ಈ ದೃಶ್ಯ. ಸರ್ಕಾರಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಮೊಗದಲ್ಲಿ ನಗು ಮೂಡಿಸಲು ಪತಿ ಸರ್ಪ್ರೈಸ್ ನೀಡಿದ್ದಾನೆ. ಕೆಲಸದ ಬ್ಯುಸಿಯಲ್ಲಿದ್ದ ಈ ಮಹಿಳೆ ತನ್ನ ಎದುರು ಬಂದು ನಿಂತ ಪತ್ನಿಯನ್ನು ಕಂಡು ಖುಷಿಯಾಗಿದ್ದಾಳೆ. ಗಂಡ ಹೆಂಡತಿ ಬಾಂಧವ್ಯ ಸಾರುವ ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಈ ದೃಶ್ಯ ನೋಡಿ ಖುಷಿ ಪಟ್ಟಿದ್ದಾರೆ.

ಸುಮಿತ್ ಹಾಗೂ ಅಪೂರ್ವ ಲೈಫ್ (sumithandapoorvalife)ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಕೆಲಸದ ಒತ್ತಡದಿಂದ ಪತ್ನಿಗೆ ಸ್ವಲ್ಪ ನೆಮ್ಮದಿ ನೀಡುವ ಉದ್ದೇಶದಿಂದ, ಆಕೆಗೆ ಮುನ್ಸೂಚನೆ ನೀಡದೆ ಇದ್ದಕ್ಕಿದ್ದಂತೆ ಆಕೆ ಕೆಲಸ ಮಾಡುವ ಬ್ಯಾಂಕ್‌ಗೆ ಹೋದೆ. ಅಲ್ಲಿ ಆಕೆಯ ಪ್ರತಿಕ್ರಿಯೆಗಳನ್ನು ನೋಡಿ ನನಗೆ ಆಶ್ಚರ್ಯವಾಯಿತು. ಸರ್ಕಾರಿ ಬ್ಯಾಂಕ್‌ಗಳಲ್ಲಿ ವಿಪರೀತ ಜನಸಂದಣಿ ಇರುತ್ತದೆ. ಆಫೀಸ್ ಟೈಮ್ ಮುಗಿದ ಬಳಿಕವೂ ಆಕೆಯನ್ನು ಭೇಟಿಯಾಗಿ ಕರೆದೊಯ್ಯಲು ನಾನು ಒಂದು ಗಂಟೆ ಕಾಯಬೇಕಾಯಿತು ಎಂದು ಬರೆದುಕೊಂಡಿದ್ದಾರೆ.

ಈ ಕ್ಲಿಪಿಂಗ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಕೆಲಸ ಮಾಡುವ ಬ್ಯಾಂಕ್ ಗೆ ಸರ್ಪ್ರೈಸ್ ನೀಡಿದ್ದಾನೆ. ಕೆಲಸದ ಒತ್ತಡದಲ್ಲಿದ್ದ ಈ ಮಹಿಳೆ ತನ್ನ ಗಂಡನ ಸರ್ಪ್ರೈಸ್ ವಿಸಿಟ್‌ಗೆ ಶಾಕ್ ಆಗಿದ್ದು ನಗುತ್ತಾ ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾಳೆ. ಆ ಬಳಿಕ ಇಬ್ಬರೂ ಜತೆಗೆ ಕುಳಿತು ಸಮೋಸಾ ಸವಿದಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಆರು ವರ್ಷಗಳ ಬಳಿಕ ವಿದೇಶದಿಂದ ಬಂದು ವೈದ್ಯೆ ಪತ್ನಿಗೆ ಸರ್ಪ್ರೈಸ್ ಕೊಟ್ಟ ಪತಿ

ಈ ವಿಡಿಯೋ 3 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮೈಂಡ್ ಫ್ರೆಶ್ ಆಗೋದಕ್ಕೆ ಇಂತಹ ಸರ್ಪ್ರೈಸ್ ಭೇಟಿಗಳು ಬೇಕು ಎಂದಿದ್ದಾರೆ. ಇನ್ನೊಬ್ಬರು, ಆಕೆಯ ನಗು ಎಲ್ಲವನ್ನೂ ಹೇಳುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮುದ್ದಾದ ಜೋಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 2:30 pm, Mon, 24 August 26

Loading...
Unable to load recommendations.
Follow Us