ಅಕ್ಕನ ಗಂಡನೇ ಬೇಕು, ಆತನನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದ ಯುವತಿ! ಆಮೇಲೆನಾಯ್ತು?

|

Updated on: Jul 18, 2024 | 2:57 PM

ತನ್ನ ಅಕ್ಕನ ಗಂಡನನ್ನು ಪ್ರೀತಿಸುತ್ತಿದ್ದ ಯುವತಿ ಇಂದಿರಾ , ಆತನನ್ನೇ ಮದುವೆಯಾಗುವುದಾಗಿ ಪೋಷಕರಿಗೆ ಹೇಳಿದ್ದಾಳೆ. ಈ ವಿಷಯ ತಿಳಿದು ಆಘಾತಕ್ಕೊಳಗಾದ ಪೋಷಕರು ಇದರಿಂದಾಗಿ ನಿನ್ನ ಅಕ್ಕನ ಜೀವನ ಹಾಳಾಗುತ್ತದೆ, ಇದನ್ನು ಇಲ್ಲೇ ಬಿಟ್ಟು ಬಿಡು ಎಂದು ಬುದ್ದಿವಾದ ಹೇಳಿದ್ದಾರೆ. ಇದರಿಂದ ನೊಂದ ಯುವತಿ ಮಾಡಿದ್ದೇನು ಗೊತ್ತಾ?

ಅಕ್ಕನ ಗಂಡನೇ ಬೇಕು, ಆತನನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದ ಯುವತಿ! ಆಮೇಲೆನಾಯ್ತು?
ಅಕ್ಕನ ಗಂಡನೇ ಬೇಕು ಎಂದ ಯುವತಿ
Follow us on

ತೆಲಂಗಾಣ: ತನ್ನ ಸ್ವಂತ ಅಕ್ಕನ ಗಂಡನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು, ಈ ಸಂಬಂಧವನ್ನು ಮನೆಯವರು ಒಪ್ಪದೇ ಇದ್ದಾಗ ಯುವತಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​​​​ನ ಹಯಾತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಕ್ಕನ ಮದುವೆಯಾದ ದಿನದಿಂದ ತನ್ನ ಭಾವನನ್ನು ಪ್ರೀತಿಸುತ್ತಿದ್ದ ಯುವತಿ ಇಂದಿರಾ , ಆತನನ್ನೇ ಮದುವೆಯಾಗುವುದಾಗಿ ಪೋಷಕರಿಗೆ ಹೇಳಿದ್ದಾಳೆ. ಈ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದ ಪೋಷಕರು ಆಕೆಗೆ ಇದರಿಂದಾಗಿ ನಿನ್ನ ಅಕ್ಕನ ಜೀವನ ಹಾಳಾಗುತ್ತದೆ, ಇದನ್ನು ಇಲ್ಲೇ ಬಿಟ್ಟು ಬಿಡು ಎಂದು ಬುದ್ದಿ ಹೇಳಿದ್ದಾರೆ.

ಆದರೆ ಹಠ ಬಿಡದ ಇಂದಿರಾ ಭಾವನವರ ಜೊತೆ ನನ್ನ ಜೀವನ ಹಂಚಿಕೊಳ್ಳಲು ಬಯಸಿದ್ದೇನೆ ಎಂದು ಹೇಳಿದ್ದಾಳೆ. ಈ ಸಮಯದಲ್ಲಿ ಕುಟುಂಬದ ಹಿರಿಯರು ಮನವೊಲಿಸಲು ಮುಂದಾದ ವೇಳೆ ಯುವತಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: Aanvi Kamdar: ರೀಲ್ಸ್ ಮಾಡುವ ವೇಳೆ 300 ಅಡಿ ಜಲಪಾತಕ್ಕೆ ಬಿದ್ದು ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್ ಸಾವು

ಸೋಮವಾರ ಬೆಳಗ್ಗೆ ಇಂದಿರಾ ಮನೆಯಿಂದ ಹೊರಗೆ ಹೋಗಿ ಕೀಟನಾಶಕ ಸೇವಿಸಿದ್ದು, ಮನೆಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಕುಟುಂಬಸ್ಥರು ಆಕೆಯನ್ನು ಉಸ್ಮಾನಿಯಾ ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. ಆದರೆ ಇಂದಿರಾ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ