Video: ವಿಶೇಷ ಚೇತನ ವ್ಯಕ್ತಿಗೆ ಬ್ರಿಡ್ಜ್‌ ದಾಟಲು ನೆರವಾದ ಟ್ರಾಫಿಕ್‌ ಪೊಲೀಸ್, ಈ ಕಾರ್ಯವನ್ನು ಶ್ಲಾಘಿಸಿದ ಸಿಎಂ

ಟ್ರಾಫಿಕ್‌ ಪೊಲೀಸ್‌ ಅಧಿಕಾರಿಯೊಬ್ಬರು ವಿಕಲಾಂಗ ಚೇತನ ವ್ಯಕ್ತಿ ಕುಳಿತಿದ್ದಂತಹ ತಳ್ಳು ಗಾಡಿಯನ್ನು ತಳ್ಳುತ್ತಾ ಆ ವ್ಯಕ್ತಿಗೆ ಬ್ರಿಡ್ಜ್‌ ದಾಟಲು ಸಹಾಯವನ್ನು ಮಾಡಿದ್ದು, ಕರ್ತವ್ಯದ ನಡುವೆಯೂ ಮಾನವೀಯತೆಯನ್ನು ಮೆರೆದ ಟ್ರಾಫಿಕ್‌ ಪೊಲೀಸ್‌ ಅಧಿಕಾರಿಯ ಈ ಕಾರ್ಯಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

Video: ವಿಶೇಷ ಚೇತನ ವ್ಯಕ್ತಿಗೆ ಬ್ರಿಡ್ಜ್‌ ದಾಟಲು ನೆರವಾದ ಟ್ರಾಫಿಕ್‌ ಪೊಲೀಸ್, ಈ ಕಾರ್ಯವನ್ನು ಶ್ಲಾಘಿಸಿದ ಸಿಎಂ
ವೈರಲ್​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 18, 2024 | 4:32 PM

ಟ್ರಾಫಿಕ್‌ ಪೊಲೀಸ್‌ ಆಗಿ ಸೇವೆ ಸಲ್ಲಿಸುವುದು ಸವಾಲಿನ ಸಂಗತಿಯೇ ಸರಿ. ವಾಹದ ದಟ್ಟಣೆ, ಮಳೆ, ಸುಡು ಬಿಸಿಲು ಹೀಗೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಟ್ರಾಫಿಕ್‌ ಪೊಲೀಸರು ತಾಳ್ಮೆಯನ್ನು ಕಳೆದುಕೊಳ್ಳದೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ. ಜೊತೆ ಜೊತೆ ವಾಹನ ಸವಾರರ, ಸಾರ್ವಜನಿಕರ ಜೀವ ರಕ್ಷಣೆಗಾಗಿ ಮಾನವೀಯ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಇಂತಹ ಸುದ್ದಿಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಅದೇ ರೀತಿ ಟ್ರಾಫಿಕ್‌ ಪೊಲೀಸ್‌ ಅಧಕಾರಿಯೊಬ್ಬರು ಬ್ರಿಡ್ಜ್‌ ದಾಟಲು ವಿಶೇಷ ಚೇತನ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ.

ಗುವಾಹಟಿಯ ಟ್ರಾಫಿಕ್‌ ಪೊಲೀಸ್‌ ಅಧಿಕಾರಿ ತಮ್ಮ ಒತ್ತಡದ ಕೆಲಸದ ನಡುವೆಯೂ ವಿಕಲ ಚೇತನ ವ್ಯಕ್ತಿಯೊಬ್ಬರು ಕುಳಿತಿದ್ದಂತಹ ತಳ್ಳು ಗಾಡಿಯನ್ನು ತಳ್ಳುತ್ತಾ ಅವರಿಗೆ ಬ್ರಿಡ್ಜ್‌ ದಾಟಲು ಸಹಾಯವನ್ನು ಮಾಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇವರ ಈ ಮಾನವೀಯ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದು, “ನಮ್ಮ ಪೊಲೀಸ್‌ ಅಧಿಕಾರಿಗಳು ಅಸ್ಸಾಂನ ನಾಗರಿಕರಿಗೆ ಸಹಾಯ ಹಸ್ತ ಚಾಚಲು ಯಾವಾಗಲೂ ಸಿದ್ಧರಿರುತ್ತಾರೆ. ವಿಶೇಷ ಚೇತನ ವ್ಯಕ್ತಿಗೆ ಬ್ರಿಡ್ಜ್‌ ದಾಟಲು ಸಹಾಯ ಮಾಡಿದ ಟ್ರಾಫಿಕ್‌ ಪೊಲೀಸ್‌ ಜವಾನನಿಗೆ ನನ್ನ ಅಭಿನಂದನೆಗಳು” ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್‌ ಒಂದನ್ನು ANI ಸುದ್ದಿ ಸಂಸ್ಥೆ ತನ್ನ ಅಧೀಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. 8 ಸೆಕೆಂಡುಗಳ ಈ ವೈರಲ್‌ ವಿಡಿಯೋದಲ್ಲಿ ಟ್ರಾಫಿಕ್‌ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ಒತ್ತಡದ ಕೆಲಸದ ನಡುವೆಯೂ ವಿಶೇಷ ಚೇತನ ವ್ಯಕ್ತಿಯೊಬ್ಬರ ತಳ್ಳು ಗಾಡಿಯನ್ನು ತಳ್ಳುತ್ತಾ ಹೋಗಿ ಅವರಿಗೆ ಬ್ರಿಡ್ಜ್‌ ದಾಟಲು ಸಹಾಯ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಈಕೆ ತಾಯಿಯಲ್ಲ ನರರೂಪದ ರಾಕ್ಷಸಿ; ಮಗನಿಗೆ ಮನಬಂದಂತೆ ಥಳಿಸಿದ ಹೆತ್ತಮ್ಮ

ಇಂದು ಮಧ್ಯಾಹ್ನ ಹಂಚಿಕೊಳ್ಳಲಾದ ಈ ವಿಡಿಯೋ 10 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಪೊಲೀಸಪ್ಪನ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ