Video: ಈಕೆ ತಾಯಿಯಲ್ಲ ನರರೂಪದ ರಾಕ್ಷಸಿ; ಮಗನಿಗೆ ಮನಬಂದಂತೆ ಥಳಿಸಿದ ಹೆತ್ತಮ್ಮ
ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು, ಆದ್ರೆ ಕೆಟ್ಟ ತಾಯಿ ಮಾತ್ರ ಇರೊಲ್ಲ ಎಂಬ ಮಾತಿದೆ. ಆದ್ರೆ ಇಲ್ಲೊಂದು ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ತಾಯಿಯೊಬ್ಬಳು ತನ್ನ ಸ್ವಂತ ಮಗುವಿನ ಮೇಲೆ ದೌರ್ಜನ್ಯ ನಡೆಸಿದ್ದಾಳೆ. ಹೌದು ಈ ಕ್ರೂರಿ ತಾಯಿ ತನ್ನ ಮಗುವಿಗೆ ಮನ ಬಂದಂತೆ ಥಳಿಸಿ, ರಾಕ್ಷಸಿ ವರ್ತನೆಯನ್ನು ತೋರಿದ್ದಾಳೆ. ಈ ಕುರಿತ ಆಘಾತಕಾರಿ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ತಾಯಿ ಮಕ್ಕಳ ಸಂಬಂಧ ಇಡೀ ಪ್ರಪಂಚದಲ್ಲಿಯೇ ಶ್ರೇಷ್ಠವಾದ ಸಂಬಂಧ. ಹೆತ್ತ ತಾಯಿ ತನ್ನ ಮಕ್ಕಳಿಗೆ ಒಂದಿಷ್ಟು ನೋವಾಗದಂತೆ ನೋಡಿಕೊಳ್ಳುತ್ತಾಳೆ. ಸದಾ ಮಕ್ಕಳ ಏಳಿಗೆಯನ್ನು ಬಯಸುವ ಆಕೆ ತನ್ನ ಕಂದಮ್ಮನಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧಳಿರುತ್ತಾಳೆ. ತಾಯಿಯ ಈ ತ್ಯಾಗ, ನಿಸ್ವಾರ್ಥ ಪ್ರೀತಿ, ಮಮತೆಯ ಕಾರಣದಿಂದಲೇ ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು, ಆದ್ರೆ ಕೆಟ್ಟ ತಾಯಿ ಮಾತ್ರ ಇರೊಲ್ಲ ಎಂದು ಹೇಳ್ತಾರೆ. ಆದ್ರೆ ಇಲ್ಲೊಬ್ಬಳು ಪಾಪಿ ತಾಯಿ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದು, ಹೆತ್ತ ಕಂದಮ್ಮನಿಗೆಯೇ ಮನಬಂದಂತೆ ಥಳಿಸಿ ರಾಕ್ಷಸಿ ಕೃತ್ಯವನ್ನು ಮೆರೆದಿದ್ದಾಳೆ. ಈ ಕುರಿತ ಆಘಾತಕಾರಿ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಈ ಆಘಾತಕಾರಿ ಘಟನೆ ಹರಿದ್ವಾರದ ಜಬ್ರೆದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಾಯಿಯೊಬ್ಬಳು ತಮ್ಮ ಪುಟ್ಟ ಮಗನನ್ನು ಅಮಾನುಷವಾಗಿ ಥಳಿಸಿದ್ದಾಳೆ. ಈ ಅಮಾನವೀಯ ಕೃತ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಹರಿದ್ವಾರ ಪೊಲೀಸರು, ʼಇದು ಎರಡು ತಿಂಗಳ ಹಿಂದೆ ನಡೆದ ಘಟನೆಯಾಗಿದೆ. ಮನೆಗೂ ಬಾರದೆ, ಖರ್ಚಿಗೆ ಹಣವನ್ನೂ ಕೊಡದೆ ಸತಾಯಿಸುತ್ತಿದ್ದ ಪತಿಯನ್ನು ಹೆದರಿಸಲು ಆ ಮಹಿಳೆ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾಳೆ. ಇದೀಗ ಈಕೆಗೆ ಮೊದಲ ಹಂತದ ಕೌನ್ಸೆಲಿಂಗ್ ಕೂಡಾ ನಡೆಸಲಾಗಿದೆʼ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
क्या दुनिया में माँ ऐसी भी होती हैं? रूह कंपा देने वाली वीडियो 😡😡
90 KG की महिला अपने छोटे 25 KG बेटे के ऊपर बैठकर उसे मुक्कों, दांतों सर पटकना गाला दबाना !! एक मासूम छोटा बच्चा वहीं पर खड़ा देख रहा! अगर ये सच है तो इसको जल्द गिरफ्तार करे !! #viralvideo #up #uttrakhand pic.twitter.com/NCZzsihfCw
— MANOJ SHARMA LUCKNOW UP🇮🇳🇮🇳🇮🇳 (@ManojSh28986262) July 17, 2024
ಮನೋಜ್ ಶರ್ಮಾ (Manojsh28986262) ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಜಗತ್ತಿನಲ್ಲಿ ಇಂತಹ ತಾಯಂದಿರೂ ಇದ್ದಾರೆಯೇ? ತನ್ನ ಪುಟ್ಟ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಈಕೆಯನ್ನು ತಕ್ಷಣ ಬಂಧಿಸಿ” ಎಂಬ ಶೀರ್ಷಿಕೆಯನ್ನು ಬರದುಕೊಂಡಿದ್ದಾರೆ.
ಇದನ್ನೂ ಓದಿ: ಹನಿಮೂನ್ ಮುಗಿಸಿ ಬಂದು ಗಂಡ ಬೇಡ, ಲವರ್ ಬೇಕು ಎಂದ ನವವಿವಾಹಿತೆ
ವೈರಲ್ ವಿಡಿಯೋದಲ್ಲಿ ಪುಟ್ಟ ಮಗನನ್ನು ನೆಲದ ಮೇಲೆ ಮಲಗಿಸಿ, ಆತನ ಮೇಲೆ ಕ್ರೂರಿ ತಾಯಿ ಕುಳಿತು ಮಗುವಿನ ತಲೆಯನ್ನು ನೆಲಕ್ಕೆ ಜಜ್ಜಿ, ಹಲ್ಲೆ ನಡೆಸಿ ವಿಪರೀತವಾಗಿ ಹಿಂಸೆ ನೀಡುತ್ತಿರುವ ಅಮಾನವೀಯ ದೃಶ್ಯವನ್ನು ಕಾಣಬಹುದು.
ಜುಲೈ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ದಯವಿಟ್ಟು ಈ ಕ್ರೂರಿ ಮಹಿಳೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ