ಚಿಕನ್ ಶಾಪ್​ನಲ್ಲಿ ಕಾಗೆಯ ಕಾಲನ್ನು ಹಗ್ಗದಿಂದ ಕಟ್ಟಿದ ಮಾಲೀಕನಿಗೆ ಬುದ್ಧಿ ಕಲಿಸಿದ ಕಾಗೆಗಳು; ವಿಡಿಯೋ ವೈರಲ್

ಕಾಗೆಯನ್ನು ಹಗ್ಗದಿಂದ ಕಟ್ಟಿಹಾಕುತ್ತಿದ್ದಂತೆ ಬೇರೆ ಕಾಗೆಗಳು ಆ ಕಾಗೆಯನ್ನು ಬಿಡಿಸಲು ಚಿಕನ್ ಶಾಪ್ ಬಳಿ ಬಂದು ಕೂಗಲಾರಂಭಿಸಿವೆ. ಇದರಿಂದ ಆತಂಕಕ್ಕೀಡಾದ ಮಾಲೀಕ ತಾನು ಕಟ್ಟಿಹಾಕಿದ ಕಾಗೆಯನ್ನು ಬಿಟ್ಟಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.

ಚಿಕನ್ ಶಾಪ್​ನಲ್ಲಿ ಕಾಗೆಯ ಕಾಲನ್ನು ಹಗ್ಗದಿಂದ ಕಟ್ಟಿದ ಮಾಲೀಕನಿಗೆ ಬುದ್ಧಿ ಕಲಿಸಿದ ಕಾಗೆಗಳು; ವಿಡಿಯೋ ವೈರಲ್
ಕಾಗೆ
Follow us
ಸುಷ್ಮಾ ಚಕ್ರೆ
|

Updated on: Jul 18, 2024 | 3:15 PM

ತಾಟಿಪಾಕ: ಆಂಧ್ರಪ್ರದೇಶದ ಅಂಬೇಡ್ಕರ್ ಕೋಣಸೀಮಾ ಜಿಲ್ಲೆಯ ತಾಟಿಪಾಕದ ಮಾರುಕಟ್ಟೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಚಿಕನ್ ಶಾಪ್ ಮಾಲೀಕನೊಬ್ಬ ಅಮಾಯಕ ಕಾಗೆಯನ್ನು ಹಗ್ಗದಿಂದ ಕಟ್ಟಿ ಹಾಕಿರುವ ಘಟನೆ ನಡೆದಿದೆ. ದಿನವೂ ಕಾಗೆಯ ಎಡೆಬಿಡದ ಕಾಟದಿಂದ ಸಿಟ್ಟಿಗೆದ್ದ ಅಂಗಡಿಯ ಮಾಲೀಕ ಆ ಕಾಗೆಯನ್ನು ಸುಮ್ಮನಾಗಿಸಲು ಹಗ್ಗದಿಂದ ಕಟ್ಟಿಹಾಕಿದ್ದಾನೆ. ಇದಾದ ನಂತರ ಹೊಸ ಸಮಸ್ಯೆ ಪ್ರಾರಂಭವಾಯಿತು.

ಈ ಘಟನೆಯ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಕಾಗೆಯ ಸಂಕಟದ ಕೂಗನ್ನು ಕೇಳಿದ ಇತರೆ ಕಾಗೆಗಳು ಸ್ವಲ್ಪ ಸಮಯದೊಳಗೆ ಮಾರುಕಟ್ಟೆಯಲ್ಲಿ ಜಮಾಯಿಸಿ, ಜೋರಾಗಿ ಒಕ್ಕೊರಲಿನಿಂದ ಕೂಗಲಾರಂಭಿಸಿದವು. ಕಾ ಕಾ ಎಂಬ ಕಾಗೆಗಳು ಕಿವಿಗಡಚಿಕ್ಕುವ ಕೂಗನ್ನು ಕೇಳಿ ಎಲ್ಲ ವ್ಯಾಪಾರಿಗಳು ಗಲಾಟೆ ಮಾಡಿದರು. ಇದರಿಂದ ಇತರ ವ್ಯಾಪಾರಿಗಳು ಮತ್ತು ಮಾರುಕಟ್ಟೆಗೆ ಹೋಗುವವರು ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿದರು.

ಇದನ್ನೂ ಓದಿ: Viral Video: ಕೇರಳದ ದೇವಾಲಯಕ್ಕೆ ಸೀರೆಯುಟ್ಟ ವಿದೇಶಿ ಮಹಿಳೆಗೆ ನಿರ್ಬಂಧ; ವಿಡಿಯೋ ವೈರಲ್

ಈ ಕರ್ಕಶ ಶಬ್ದವನ್ನು ಸಹಿಸಲಾಗದೆ, ಇತರ ಅಂಗಡಿಯವರು ಆ ಕಾಗೆಯನ್ನು ಬಿಡುವಂತೆ ಚಿಕನ್ ಅಂಗಡಿಯ ಮಾಲೀಕರಿಗೆ ಮನವಿ ಮಾಡಿದರು. ಕೊನೆಗೂ ಚಿಕನ್ ಶಾಪ್ ಮಾಲೀಕನಿಗೆ ಕಾಗೆಯನ್ನು ಬಿಡಿಸಿ ಬಿಡದೆ ಬೇರೆ ದಾರಿ ಇರಲಿಲ್ಲ. ಹೀಗಾಗಿ, ತಾನು ಕಟ್ಟಿಹಾಕಿದ ಕಾಗೆಯನ್ನು ಬಿಟ್ಟು ಕಳಿಸಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ