Viral: ಹನಿಮೂನ್‌ ಮುಗಿಸಿ ಬಂದು ಗಂಡ ಬೇಡ, ಲವರ್‌ ಬೇಕು ಎಂದ ನವವಿವಾಹಿತೆ

ಪ್ರಿಯಕರನಿಗಾಗಿ ಗಂಡನನ್ನು ಕೊಲೆಗೈದ, ಗಂಡನನ್ನು ಬಿಟ್ಟು ಬಂದಂತಹ ಘಟನೆಗಳು ಈ ಹಿಂದೆಯೂ ನಡೆದಿದೆ. ಇದೀಗ ಅಂತಹದೇ ಶಾಕಿಂಗ್‌ ಘಟನೆಯೊಂದು ನಡೆದಿದ್ದು, ಮದುವೆಯಾಗಿ ಖುಷಿ ಖುಷಿಯಾಗಿ ಹನಿಮೂನ್‌ ಮುಗಿಸಿ ಬಂದು, ಇದೀಗ ನನಗೆ ನನ್ನ ಲವರ್‌ ಬೇಕೆಂದು ನವ ವಿವಾಹಿತೆಯೊಬ್ಬಳು ಗಂಡನನ್ನೇ ತೊರೆದು ತವರು ಮನೆ ಸೇರಿದ್ದಾಳೆ.

Viral: ಹನಿಮೂನ್‌ ಮುಗಿಸಿ ಬಂದು ಗಂಡ ಬೇಡ, ಲವರ್‌ ಬೇಕು ಎಂದ ನವವಿವಾಹಿತೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 18, 2024 | 11:32 AM

ಕೆಲವು ವಿವಾಹಿತ ಮಹಿಳೆಯರು ತಮ್ಮ ಪ್ರಿಯಕರನಿಗಾಗಿ ಗಂಡನನ್ನೇ ಬಿಟ್ಟು ಬಂದ, ದೇವರಂತಹ ಪತಿಯನ್ನು ಕೊಲೆಗೈದ ಸಾಕಷ್ಟು ಘಟನೆಗಳು ನಡೆದಿವೆ. ಇಂತಹ ಆಘಾತಕಾರಿ ಪ್ರಕರಣಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಅಂತಹದೇ ಘಟನೆಯೊಂದು ಇದೀಗ ನಡೆದಿದ್ದು, ನವವಿವಾಹಿತೆಯೊಬ್ಬಳು ಪ್ರಿಯಕರನಿಗಾಗಿ ಗಂಡನನ್ನೇ ತೊರೆದಿದ್ದಾಳೆ. ಆಕೆಗೆ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಖುಷಿ ಖುಷಿಯಿಂದ ಹನಿಮೂನ್‌ ಕೂಡಾ ಮುಗಿಸಿ ಬಂದಿದ್ದಳು. ಆದರೆ ಪ್ರಿಯಕರನನ್ನು ಬಿಟ್ಟು ಇರಲಾಗದೇ ಪರಿತಪಿಸುತ್ತಿದ್ದ ಆ ನವವಿವಾಹಿತೆ ಇದೀಗ ಗಂಡನನ್ನು ತೊರೆದು ತವರು ಮನೆ ಸೇರಿದ್ದಾಳೆ.

ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಹನಿಮೂನ್‌ ಮುಗಿಸಿ ಬಂದ ನವವಿವಾಹಿತೆಯೊಬ್ಬಳು ನನಗೆ ಗಂಡ ಬೇಡವೆಂದು ತವರು ಮನೆ ಸೇರಿದ್ದಾಳೆ. ಹೌದು ನನಗೆ ನನ್ನ ಗಂಡ ಇಷ್ಟವಿಲ್ಲ, ನಾನು ಬಾಯ್‌ಫ್ರೆಂಡ್‌ ಜೊತೆ ಬದುಕಬೇಕೆಂದು ಆಕೆ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದು, ಮಗಳ ಈ ಮಾತಿಗೆ ಪೋಷಕರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ; ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ, ಪತಿಗೆ ಹಿಗ್ಗಾಮುಗ್ಗಾ ಥಳಿತ

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಗರುಡ್‌ ತಹಸಿಲ್‌ ಎಂಬಲ್ಲಿನ ಯುವಕನೊಂದಿಗೆ ಆಕೆ ಮದುವೆಯಾಗಿದ್ದಳು. ಎಲ್ಲವೂ ಚೆನ್ನಾಗಿಯೇ ಇತ್ತು. ಗಂಡನೊಂದಿಗೆ ಖುಷಿಯಿಂದ ಹನಿಮೂನ್‌ ಕೂಡಾ ಮುಗಿಸಿ ಬಂದಿದ್ದಳು. ಆದರೆ ಇದ್ದಕ್ಕಿದ್ದಂತೆ ಆಕೆ ತವರು ಮನೆ ಸೇರಿದ್ದು, ಆಕೆ ವಾರಗಳು ಕಳೆದರೂ ಗಂಡನ ಮನೆಗೆ ಹೋಗದಿರುವುದನ್ನು ಕಂಡು ಹೆತ್ತವರು ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಆಕೆ ನನಗೆ ನನ್ನ ಗಂಡ ಇಷ್ಟವಿಲ್ಲ, ನಾನು ಬಾಯ್‌ಫ್ರೆಂಡ್‌ ಜೊತೆ ಬದುಕಬೇಕೆಂದು ಹೇಳಿದ್ದು, ನಂತರ ಈ ಗಂಭೀರ ಪ್ರಕರಣ ಠಾಣೆಯ ಮೆಟ್ಟಿಲೇರಿದೆ. ಠಾಣೆಯಲ್ಲಿ ಮಾತುಕತೆ ನಡೆದ ನಂತರ ನವ ವಿವಾಹಿತೆಯ ಮನೆಯವರು ಮದುವೆಗೆ ಖರ್ಚಾದ ಹಣ ಮತ್ತು ಒಡವೆಗಳನ್ನು ಗಂಡನ ಮನೆಗೆ ಹಿಂದಿರುಗಿಸಿದ್ದಾರೆ. ಮತ್ತು ನವವಿವಾಹಿತೆ ತನ್ನ ಪ್ರಿಯಕರನ ಮನೆಗೆ ತೆರಳಿದ್ದು, ಶ್ರೀಘ್ರದಲ್ಲೇ ಅವರಿಬ್ಬರು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ