AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ, ಪತಿಗೆ ಹಿಗ್ಗಾಮುಗ್ಗಾ ಥಳಿತ

Video: ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ, ಪತಿಗೆ ಹಿಗ್ಗಾಮುಗ್ಗಾ ಥಳಿತ

ಅಕ್ಷಯ್​ ಪಲ್ಲಮಜಲು​​
|

Updated on: Jul 18, 2024 | 10:34 AM

Share

ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಪತಿ ಮತ್ತು ಆತನ ಜತೆಗೆ ಇದ್ದ ಮಹಿಳೆಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದು ವೈರಲ್​​ ಆಗಿದೆ.

ಆಂಧ್ರಪ್ರದೇಶದ ವಿಶಾಖ ಸೀತಮ್ಮಧಾರದಲ್ಲಿ ವ್ಯಕ್ತಿಯೊಬ್ಬ ಪರ ಸ್ತ್ರೀ ಜತೆಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ತನ್ನ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೀಗ ಈ ಬಗ್ಗೆ ವಿಡಿಯೋವೊಂದು ವೈರಲ್​​ ಆಗಿದೆ. ಬೇರೆಯೊಬ್ಬ ಮಹಿಳೆಯ ಜತೆಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಕೈಗೆ ಈ ಮಹಾರಾಯ ಸಿಕ್ಕಿಬಿದ್ದಿದ್ದಾನೆ. ಪತಿಯನ್ನು ಪರ ಸ್ತ್ರೀಯ ಜತೆಗೆ ಕಂಡು ಪತ್ನಿ ಮತ್ತು ಆಕೆಯ ಕುಟುಂಬದವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇನ್ನು ಥಳಿತಕ್ಕೆ ಒಳಗಾದ ವ್ಯಕ್ತಿಯನ್ನು ವಿವೇಕ್​​ ಎಂದು ಹೇಳಲಾಗಿದೆ. ವಿವೇಕ್​ ಹಾಗೂ ಆತನ ಪತ್ನಿಯ ನಡುವೆ ಕೆಲವು ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಇದರ ಜತೆಗೆ ವಿವೇಕ್​​​ ಬೇರೆ ಮಹಿಳೆ ಜತೆಗೆ ವಾಸವಾಗಿದ್ದಾರೆ ಎಂಬ ಬಗ್ಗೆಯೂ ಆತನ ಪತ್ನಿಗೆ ಅನುಮಾನ ಇತ್ತು ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಶ್ನಿಸಲು ಆಕೆಯ ಮನೆಗೆ ಹೋಗಿದ್ದಾನೆ. ವಿಚ್ಛೇದನ ನೀಡದೆ ಬೇರೆ ಹೆಣ್ಣಿನ ಜೊತೆ ಹೇಗೆ ಸಂಸಾರ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾಳೆ. ಜತೆಗೆ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಾಲಕೊಂಡದ ವಿವೇಕ್ ಮತ್ತು ಬುಚ್ಚಯ್ಯ ಪೇಟೆಯ ಹರಿತಾ 2020ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಮೂರು ತಿಂಗಳಲ್ಲೇ ಇಬ್ಬರ ನಡುವೆ ಜಗಳ ಶುರುವಾಗಿದೆ. ಹರಿತಾ 2021ರ ಫೆಬ್ರವರಿಯಲ್ಲಿ ಪತಿ ವಿರುದ್ಧ ದೂರು ನೀಡದ್ದರು. ಆ ನಂತರ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ವಿವೇಕ್ ಬೇರೊಬ್ಬ ಮಹಿಳೆಯೊಂದಿಗೆ ವಾಸವಾಗಿರುವ ವಿಚಾರ ತಿಳಿದು ಹರಿತಾ ಅವರ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More