Friends : ನೀವು ಮದುವೆಯಾಗುತ್ತೀರಿ. ಆ ವಿಷಯವನ್ನು ನೀವು ಯಾರಿಗೆಲ್ಲ ಹೇಳುತ್ತೀರಿ? ನಿಮ್ಮ ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ, ಪರಿಚಿತರಿಗೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸ್ನೇಹಿತರಿಗೆ ಹೇಳಿದ್ದಾನೆ. ಅರೆ, ಸ್ನೇಹಿತರಿಗೆ ಹೇಳಿದರೆ ಆತ ಈಗ ಯಾಕೆ ಸುದ್ದಿಯಾಗುತ್ತಿದ್ದಾನೆ? ಏಕೆಂದರೆ ಅವನ ಸ್ನೇಹಿತರು ಒಬ್ಬಿಬ್ಬರಲ್ಲ. ನೂರು ಜನರು ಇರಲಿ ಅದಕ್ಕೇನಂತೆ? ಏಕೆಂದರೆ, ಇಲ್ಲಿ ಆತನ ಸ್ನೇಹಿತರೆಲ್ಲ ನಾಲ್ಕು ಕಾಲಿನವರು! ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಈತ ಅನೇಕ ಬೆಕ್ಕುಗಳಿಗೆ (Cats) ಮದುವೆಯ ಉಂಗುರ ತೋರಿಸುತ್ತ ತಾನು ಮದುವೆಯಾದ ಸುದ್ದಿಯನ್ನು ಹೇಳುತ್ತಾನೆ, ಅವುಗಳು ಅವನನ್ನು ನೋಡಿ ಪ್ರತಿಕ್ರಿಯಿಸುವ ರೀತಿಯನ್ನು ನೋಡಿಯೇ ಅನುಭವಿಸಬೇಕು.
ಇದನ್ನೂ ಓದಿ : Viral Video: ಜವಾನ್ ಜಮಾನಾ; ರೈಲಿನಲ್ಲಿ ಓಡಾಡಿದ ನಕಲಿ ‘ಆಝಾದ’ನನ್ನು ಮೆಚ್ಚದ ನೆಟ್ಟಿಗರು
ಪ್ರಾಣಿಪ್ರಿಯರು ಪ್ರಾಣಿಗಳೊಂದಿಗೆ ನಡೆಸುವ ಸಂವಹನ ಆಪ್ತವೂ ಮತ್ತು ವಿಭಿನ್ನವೂ ಆಗಿರುತ್ತದೆ. ಅದು ಪರಸ್ಪರ ಮಾತ್ರ ಅರ್ಥವಾಗುವಂತಿರುತ್ತದೆ. ಅವುಗಳನ್ನು ಕಾಳಜಿಯಿಂದ ನೋಡಿಕೊಳ್ಳುವ ರೀತಿ ಇರಬಹುದು, ತಿಂಡಿತಿನಿಸು ಕೊಟ್ಟು ಪೋಷಿಸುವುದು ಇರಬಹುದು. ಒಟ್ಟಾರೆಯಾಗಿ ಒಂದು ಬಂಧ ಪರಸ್ಪರರಲ್ಲಿ ರೂಪುಗೊಂಡಿರುತ್ತದೆ.
telling my friends I got married [OC]
byu/Parking-Program-9602 inaww
ನಿನ್ನೆ ಹಂಚಿಕೊಂಡ ಈ ವಿಡಿಯೋವನ್ನು 11,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಹೃದಯಸ್ಪರ್ಶಿಯಾದ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಇದು ತುಂಬಾ ಮುದ್ದಾದ ವಿಡಿಯೋ, ಅಭಿನಂದನೆಗಳು ಎಂದಿದ್ದಾರೆ ಒಬ್ಬರು. ಉಂಗುವನ್ನು ಅವರೆಲ್ಲ ಪ್ರೀತಿಸುತ್ತಿದ್ದಾರೆ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಬದುಕಿನಲ್ಲಿ ಶಾಶ್ವತವಾಗಿ ಶಾಂತಿ ಸಂತೋಷ ನೆಲೆಸಲಿ ಶುಭಾಶಯಗಳು ಎಂದಿದ್ದಾರೆ ಮತ್ತೊಬ್ಬರು. ಈ ದಿನ ಅಂತರ್ಜಾಲದಲ್ಲಿ ನೋಡಿದ ಅತ್ಯಂತ ಮಧುವರವಾದ ಸಂಗತಿ ಇದು ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಅಹಮದಾಬಾದ್; ಫಾರ್ಮಾ ಕೆಲಸದೊಂದಿಗೆ ಪಾಸ್ತಾ ಸ್ಟಾಲ್ ಕೂಡ ನಡೆಸುವ ಧ್ರುವಿ ಪಂಚಾಲ್
ಈ ಬೆಕ್ಕುಗಳು ಇರದಿದ್ದರೆ ಜಗತ್ತಿನಲ್ಲಿ ಅದೆಷ್ಟು ಜನ ಖಿನ್ನತೆಗೆ ಜಾರುತ್ತಿದ್ದರೋ ಎಂದಿದ್ದಾರೆ ಒಬ್ಬರು. ನಿಮ್ಮ ಈ ವಿಡಿಯೋ ನೋಡಿ ನನ್ನ ಮನಸ್ಸು ತುಂಬಿಬಂದಿತು. ಒಂದೋ ಎರಡೋ ಸರಿ, ಆದರೆ ನಿಮ್ಮ ಏರಿಯಾನಲ್ಲಿರುವ ಇಷ್ಟೊಂದು ಬೆಕ್ಕುಗಳೊಂದಿಗೆ ನೀವು ಭಾವನಾತ್ಮಕವಾಗಿ ಒಡನಾಡಿಕೊಂಡಿದ್ದು ನಿಜಕ್ಕೂ ಅದ್ಭುತ, ಅಚ್ಚರಿ ಮತ್ತು ಅಷ್ಟೇ ಆಪ್ತ ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ