
ಕೆಲವರಿಗೆ ತಮ್ಮ ಆತ್ಮೀಯ ವ್ಯಕ್ತಿಗಳ ಫೋಟೋ ಪರ್ಸ್‌ನಲ್ಲಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ದುಬೈನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಮಹಿಳೆಯೂ (Indian woman) ಅಗಲಿದ ತಂದೆಯ ಪಾಸ್‌ಪೋರ್ಟ್ ಗಾತ್ರದ ಫೋಟೋವಿದ್ದ ವ್ಯಾಲೆಟ್‌ನ್ನು ಕಳೆದುಕೊಂಡಿದ್ದಾರೆ. ಆದರೆ ಕ್ಯಾಬ್ ಚಾಲಕನ ಪ್ರಾಮಾಣಿಕತೆ ಹಾಗೂ ಒಳ್ಳೆತನದಿಂದ ತನ್ನ ಈ ಪರ್ಸ್‌ನ್ನು ಮರಳಿ ಪಡೆದಿದ್ದಾರೆ. ಅಮೂಲ್ಯದ ವ್ಯಾಲೆಟ್‌ನ್ನು ಹಿಂದಿರುಗಿಸಿದ ಕ್ಯಾಬ್ ಡ್ರೈವರ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ವರ್ತಿಕಾ ಶರ್ಮಾ (vartika sharma) ತಮ್ಮ ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ ತಂದೆಯ ಫೋಟೋವಿದ್ದ ಪರ್ಸ್ ಕಳೆದುಕೊಂಡ ಘಟನೆಯನ್ನು ವಿವರಿಸಿದ್ದಾರೆ. ಈ ಪೋಸ್ಟ್ ನಲ್ಲಿ ದುಬೈನಲ್ಲಿ ಪ್ರಯಾಣಿಸುವ ವೇಳೆ ಕ್ಯಾಬ್‌ನಿಂದ ಇಳಿದ ಬಳಿಕ ವ್ಯಾಲೆಟ್ ನನ್ನ ಪರ್ಸ್ ಇಲ್ಲದಿರುವುದನ್ನು ಗಮನಿಸಿದೆ. ನನ್ನ ವ್ಯಾಲೆಟ್ ಕ್ಯಾಬ್ ನಲ್ಲೇ ಬಿಟ್ಟು ಬಂದೆ ಎಂಬ ಬಗ್ಗೆ ಗಮನ ಹರಿಸಿದೆ. ಕೊನೆಗೆ ಕ್ಯಾಬ್ ಸೇವೆ ಮೂಲಕ ವ್ಯಾಲೆಟ್ ಹುಡುಕುವ ಪ್ರಯತ್ನದಲ್ಲಿ ತೊಡಗಿದೆ.
ಅದರಲ್ಲಿ ಪಾಸ್‌ಪೋರ್ಟ್, ಕಾರ್ಡ್‌ಗಳು ಹಾಗೂ ಹಣದ ಜತೆಗೆ ಕಳೆದ ಡಿಸೆಂಬರ್‌ನಲ್ಲಿ ಅಗಲಿದ ತಂದೆಯ ಪಾಸ್‌ಪೋರ್ಟ್ ಗಾತ್ರದ ಫೋಟೋವಿತ್ತು. ಆತಂಕದಲ್ಲಿದ್ದ ನನಗೆ ಕ್ಯಾಬ್ ಸೇವೆಯ ಕೇರ್ ತಂಡದಿಂದ ಫೋನ್ ಬಂದಿತು. ಕ್ಯಾಬ್ ಡ್ರೈವರ್ ಎಬೆನೆಜರ್ ಅಫಿಬಿ ವ್ಯಾಲೆಟ್ ಜೋಪಾನವಾಗಿ ಇಟ್ಟುಕೊಂಡಿರುವುದು ತಿಳಿಯಿತು. ಕೈಗೆ ವ್ಯಾಲೆಟ್ ಸಿಗುತ್ತಿದ್ದಂತೆ ತಂದೆಯ ಫೋಟೋ ಇರುವ ಬಗ್ಗೆ ಖಾತರಿ ಪಡಿಸಿಕೊಂಡೆ.
ಕ್ಯಾಬ್ ಡ್ರೈವರ್ ವ್ಯಾಲೆಟ್ ಕೈಗೆ ತಲುಪಿಸುತ್ತಿದ್ದಂತೆ ಡ್ರೈವರ್ ಗೆ ಧನ್ಯವಾದ ಅರ್ಪಿಸಿ ಟಿಪ್ಸ್ ನೀಡಿದೆ. ಆದರೆ ಟಿಪ್ಸ್ ನಿರಾಕರಿಸಿದ ಚಾಲಕ ತಮ್ಮದಲ್ಲದ ವಸ್ತುಗಳನ್ನು ಹಿಂದಿರುಗಿಸುವುದು ನನ್ನ ಅಭ್ಯಾಸ ಎಂದು ನಗುತ್ತಲೇ ಹೇಳಿದ್ರು. ಈ ಡ್ರೈವರ್ ನ ಒಳ್ಳೆತನವನ್ನು ಪೋಸ್ಟ್‌ನಲ್ಲಿ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ಟಿಪ್ಸ್ ವಾಪಾಸ್ ಕೊಟ್ಟ ಕ್ಯಾಬ್ ಡ್ರೈವರ್ ಒಳ್ಳೆತನಕ್ಕೆ ರಷ್ಯನ್ ಲೇಡಿ ಫಿದಾ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆತನ ಇವತ್ತಿಗೂ ಜೀವಂತವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ದುಡ್ಡಿಗಾಗಿ ಬಾಯಿ ಬಿಡುವ ಜನರ ನಡುವೆ ಈ ಕ್ಯಾಬ್ ಚಾಲಕನ ಒಳ್ಳೆತನ ಮನಸ್ಸು ಮುಟ್ಟಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ಮನಸ್ಸಿನಿಂದ ಮಾಡಿದ ಸಹಾಯ ಯಾವತ್ತೂ ಒಳ್ಳೆಯದ್ದನ್ನೇ ಮಾಡುತ್ತದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ