Video: ಟಿಪ್ಸ್ ವಾಪಾಸ್ ಕೊಟ್ಟ ಕ್ಯಾಬ್ ಡ್ರೈವರ್ ಒಳ್ಳೆತನಕ್ಕೆ ರಷ್ಯನ್ ಲೇಡಿ ಫಿದಾ
ಭಾರತೀಯರು ವಿದೇಶೀಗರನ್ನು ಪ್ರೀತಿ ಆದರದಿಂದ ಸತ್ಕಾರಿಸುತ್ತಾರೆ, ತಮ್ಮವರು ಎಂಬಂತೆ ನಡೆದುಕೊಳ್ಳುತ್ತಾರೆ. ಇದೀಗ ಕ್ಯಾಬ್ ಚಾಲಕನ ಹೃದಯ ಶ್ರೀಮಂತಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ರಷ್ಯಾದಿಂದ ಭಾರತಕ್ಕೆ ಬಂದ ವಿದೇಶಿ ಮಹಿಳೆ ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದಾಳೆ. ಇದೇ ವೇಳೆ ಕ್ಯಾಬ್ ಡ್ರೈವರ್ ತನಗೆ ಕೊಟ್ಟ ಟಿಪ್ಸ್ ನಿರಾಕರಿಸಿ ಅತಿಥಿ ದೇವೋ ಎಂಬಂತೆ ನಡೆದುಕೊಂಡಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಅತಿಥಿ ದೇವೋ ಭವ ಎಂಬ ಮಾತಿದೆ. ಹೀಗಾಗಿ ವಿದೇಶಿಗರು (foreigner) ಭಾರತಕ್ಕೆ ಬಂದರೆ ಅವರನ್ನು ಪ್ರೀತಿಯಿಂದ ಮಾತನಾಡಿಸಿ, ಸತ್ಕರಿಸುವ ಗುಣ ನಮ್ಮದು. ಇದಕ್ಕೆ ಸಾಕ್ಷಿ ಎನ್ನುವಂತಿದೆ ಈ ಘಟನೆ. ಮೊದಲ ಬಾರಿಗೆ ಭಾರತಕ್ಕೆ ಬಂದ ರಷ್ಯಾದ ಮಹಿಳೆ ನೀಡಿದ ವೇಳೆ ಕ್ಯಾಬ್ ಡ್ರೈವರ್‌ಗೆ ಟಿಪ್ಸ್ ನೀಡಿದ್ದಾಳೆ. ಆದರೆ ಈ ಕ್ಯಾಬ್ ಡ್ರೈವರ್ ಆಕೆ ನೀಡಿದ ಟಿಪ್ಸ್ ವಾಪಾಸ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಹೃದಯ ಸ್ಪರ್ಶಿ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ಯಾಬ್ ಚಾಲಕನ ಒಳ್ಳೆತನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಕ್ಯಾಬ್ ಡ್ರೈವರ್ ಒಳ್ಳೆತನಕ್ಕೆ ರಷ್ಯನ್ ಮಹಿಳೆ ಫಿದಾ
ಲಕ್ಷ್ಮಿ (Lakshmi) ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಹೃದಯ ಸ್ಪರ್ಶಿ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ರಾತ್ರಿ ಸಮಯದಲ್ಲಿ ರಷ್ಯಾದಿಂದ ಬಂದಿದ್ದ ಮಹಿಳೆ ಭಾರತದ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾಳೆ. ಈ ವೇಳೆ ತಾವು ಉಳಿಯಬೇಕಿದ್ದ ಹೋಟೆಲ್‌ಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಾಳೆ.
ವೈರಲ್ ಪೋಸ್ಟ್ ಇಲ್ಲಿದೆ
A night, a Russian woman arrived at an Indian airport and took a cab to her hotel.
The driver looked at her and asked, “Madam, do you know English? Please show me the OTP.”
She understood a little English and showed him the OTP.
During the journey, the driver asked, “Is this your first time in India? Are you travelling alone?”
She nodded and said she was hungry and wanted to have pizza.
After a few minutes, the driver stopped near a hotel. He got out, returned after two minutes, and then continued driving. The woman felt a little uncomfortable, so she sent the cab details to her husband and told him that something felt strange.
But she soon realized the driver had actually stopped to collect the pizza she had ordered.
He brought the pizza, gave it to her, and even showed her the location of her hotel so she could find it easily.
The woman was surprised and happy. She paid the driver the cab fare, along with the pizza money, and gave him ₹1,000 extra as a thank-you.
The driver immediately returned the extra money, folded his hands, and said, “Atithi Devo Bhava.”
The woman smiled and thanked him.
After reaching her room, she went live on social media and shared the whole experience. She said she had a wonderful first impression of India and would love to bring her husband with her on her next visit.
— Lakshmi (@Lakshmi_D_N) October 3, 2026
ರಷ್ಯನ್ ಮಹಿಳೆಯ ಜತೆಗೆ ಮಾತಿಗಿಳಿದ ಡ್ರೈವರ್
ಕ್ಯಾಬ್‌ನಲ್ಲಿ ಕುಳಿತಕೊಂಡ ವಿದೇಶಿ ಮಹಿಳೆಯ ಬಳಿ, ಮೇಡಂ, ನಿಮಗೆ ಇಂಗ್ಲಿಷ್ ಬರುತ್ತದಾ? ದಯವಿಟ್ಟು ಒಟಿಪಿ ತೋರಿಸಿ ಎಂದು ಕ್ಯಾಬ್ ಚಾಲಕ ಕೇಳಿದ್ದಾನೆ. ಚಾಲಕ ಹೇಳಿದ ಮಾತನ್ನು ತಕ್ಕ ಮಟ್ಟಿಗೆ ಅರ್ಥ ಮಾಡಿಕೊಂಡು ಒಟಿಪಿ ತೋರಿದ್ದಾಳೆ. ಪ್ರಯಾಣದ ವೇಳೆ ಇಬ್ಬರ ನಡುವೆ ಸಂಭಾಷಣೆ ನಡೆದಿದೆ. ಡ್ರೈವರ್ ಈ ವಿದೇಶಿ ಮಹಿಳೆಯ ಬಳಿ, ಭಾರತಕ್ಕೆ ಇದು ನಿಮ್ಮ ಮೊದಲ ಭೇಟಿಯೇ? ನೀವು ಒಬ್ಬರೇ ಬಂದಿದ್ದೀರಾ? ಎಂದು ಕೇಳಿದ್ದಾನೆ.
ಕ್ಯಾಬ್ ಡ್ರೈವರ್ ವರ್ತನೆಗೆ ಭಯಗೊಂಡಿದ್ದ ವಿದೇಶಿ ಮಹಿಳೆ
ನಾನು ಒಬ್ಬಳೇ ಬಂದಿದ್ದೇನೆ ಎಂದು ತಲೆ ಅಲ್ಲಾಡಿಸಿದ ಈ ರಷ್ಯನ್ ಮಹಿಳೆ, ನನಗೆ ಹಸಿವಾಗುತ್ತಿದೆ. ಪಿಜ್ಜಾ ತಿನ್ನಬೇಕು ಎಂದು ಡ್ರೈವರ್ ಮುಂದೆ ಹೇಳಿದ್ದಾಳೆ. ಸ್ವಲ್ಪ ದೂರ ಹೋದ ಡ್ರೈವರ್ ಗಾಡಿ ನಿಲ್ಲಿಸಿ ಸ್ವಲ್ಪ ಸಮಯದ ಬಳಿಕ ಬಂದಿದ್ದಾನೆ. ಕ್ಯಾಬ್ ಡ್ರೈವರ್ ವರ್ತನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಮಹಿಳೆ ಆ ತಕ್ಷಣವೇ ಕ್ಯಾಬ್‌ನ ವಿವರಗಳನ್ನ ತನ್ನ ಪತಿಗೆ ಕಳುಹಿಸಿದ್ದಾಳೆ.
ಪಿಜ್ಜಾ ತರಲು ಹೋಗಿದ್ದ ಕ್ಯಾಬ್ ಡ್ರೈವರ್
ಕ್ಯಾಬ್ ಡ್ರೈವರ್ ತನ್ನ ವಾಹನ ನಿಲ್ಲಿಸಿ ವಿದೇಶಿ ಮಹಿಳೆಗೆ ಪಿಜ್ಜಾ ತರಲು ಹೋಗಿದ್ದ ಎನ್ನುವುದು ಆಮೇಲೆ ತಿಳಿದಿದೆ. ತಾನು ತಂದಿದ್ದ ಪಿಜ್ಜಾ ಆಕೆಗೆ ನೀಡಿ, ಬುಕ್ ಮಾಡಿದ ಹೋಟೆಲ್ ಗೆ ತಲುಪಿಸಿದ್ದಾನೆ. ಕ್ಯಾಬ್ ನಿಂದ ಇಳಿಯುತ್ತಿದ್ದಂತೆ ಕ್ಯಾಬ್ ಬಾಡಿಗೆ, ಪಿಜ್ಜಾದ ಹಣದ ಜತೆಗೆ 1000 ಟಿಪ್ಸ್ ನೀಡಿದ್ದಾಳೆ. ಆದರೆ ಕ್ಯಾಬ್ ಚಾಲಕ ಆ ದುಡ್ಡನ್ನು ನಿರಾಕರಿಸಿ ಅತಿಥಿ ದೇವೋ ಭವ ಎಂದು ಹೇಳಿ ಅಲ್ಲಿಂದ ಹೊರಟಿದ್ದಾನೆ. ಈ ರಷ್ಯನ್ ಮಹಿಳೆ ಕ್ಯಾಬ್ ಡ್ರೈವರ್ ಮಾನವೀಯತೆ ನಗುತ್ತಾ ಕೃತಜ್ಞತೆ ಸಲ್ಲಿಸಿದ್ದಾಳೆ.
ಕ್ಯಾಬ್ ಡ್ರೈವರ್ ಒಳ್ಳೆತನ ಹಾಡಿ ಹೊಗಳಿದ ರಷ್ಯನ್ ಲೇಡಿ
ತಾನು ಬುಕ್ ಮಾಡಿದ್ದ ರೂಮ್ ತಲುಪಿದ ಬಳಿಕ ಲೈವ್ ಈ ಅನುಭವ ಹಂಚಿಕೊಂಡಿದ್ದಾಳೆ. ಮೊದಲ ಬಾರಿಗೆ ಭಾರತಕ್ಕೆ ಬಂದ ವೇಳೆ ನನ್ನ ಮೊದಲ ಅನುಭವವೇ ಚೆನ್ನಾಗಿದೆ. ಇಲ್ಲಿನ ಜನರು ಅಪರಿಚಿತ ವ್ಯಕ್ತಿಗಳ ಜತೆಗೆ ನಡೆದುಕೊಳ್ಳುವ ರೀತಿ ಝೆಡ್ ಅವರು ನೀಡುವ ಪ್ರೀತಿ ಕಾಳಜಿ ನನ್ನ ಹೃದಯ ಗೆದ್ದಿದೆ. ಮುಂದಿನ ಬಾರಿ ನಾನು ಭಾರತಕ್ಕೆ ಬರುವಾಗ ನನ್ನ ಪತಿಯನ್ನು ಜತೆಗೆ ಕರೆದುಕೊಂಡು ಬರುತ್ತೇವೆ ಎಂದು ಹೇಳಿದ್ದಾಳೆ ಎಂದು ಇಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ಪಾರ್ಲೆ-ಜಿ ಬಿಸ್ಕೆಟ್ ಸವಿದು ಕ್ಯೂಟ್ ರಿಯಾಕ್ಷನ್ ಕೊಟ್ಟ ಕೆನಡಿಯನ್ ಮಹಿಳೆ
ಅಕ್ಟೋಬರ್ 3 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ ಇಪ್ಪತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತೀಯರು ಪ್ರತಿಯೊಬ್ಬರಿಗೂ ಗೌರವ ನೀಡುತ್ತಾರೆ, ತಮ್ಮವರು ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಗೆ ನನ್ನದೊಂದು ಸೆಲ್ಯೂಟ್ ಎಂದು ಹೇಳಿದ್ದಾರೆ. ಇನ್ನೊಬ್ಬರು, ಕ್ಯಾಬ್ ಚಾಲಕರನ್ನು ಟಿಕೀಸುವ ಮುನ್ನ ಒಳ್ಳೆಯವರು ಇರುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




