
ತಿಳಿದೋ, ತಿಳಿಯದೇನೋ ಮಾಡುವ ಕೆಲ ಕೆಲಸಗಳು ಉಳಿದವರು ನಮ್ಮನ್ನು ನೋಡಿ ನಗುವಂತೆ ಮಾಡುತ್ತದೆ. ಇದೀಗ ಇದಕ್ಕೆ ಸಾಕ್ಷಿಯೆಂಬಂತಿದೆ ಈ ದೃಶ್ಯ. ಹೊಸ ಬೈಕ್ ಖರೀದಿ ಮಾಡಲು ಶೋರೂಮ್‌ಗೆ ಹೋದ ಹಳ್ಳಿಯ ಮುಗ್ಧ ವ್ಯಕ್ತಿಯೊಬ್ಬ (innocent people) ಮಾಡಿದ ಕೆಲಸದಿಂದ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಹೊಸ ಬೈಕ್‌ಗೆ ಹೂಮಾಲೆ ಹಾಕುವ ಬದಲು ಪತ್ನಿಗೆ ಕೊರಳಿಗೆ ಹಾಕಲು ಮುಂದಾಗಿದ್ದಾನೆ. ಈ ಘಟನೆಯೂ ಅಲ್ಲಿಂದವರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಶಿವಾನಿ (Shivani) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವ್ಯಕ್ತಿಯ ಉಡುಗೆಯೇ ಹೇಳುತ್ತೆ ಹಳ್ಳಿಯ ವ್ಯಕ್ತಿಯೆಂದು. ಹೌದು, ಅಪ್ಪಟ ಮುಗ್ಧ ವ್ಯಕ್ತಿ ತನ್ನ ಪತ್ನಿಯೊಂದಿಗೆ ಶೋ ರೂಮ್ ಗೆ ಭೇಟಿ ನೀಡಿ ಹೊಸ ಬೈಕ್ ಖರೀದಿ ಮಾಡಿದ್ದಾನೆ. ಇದೇ ವೇಳೆ ಅಲ್ಲೇ ಇದ್ದವರು ಈ ವ್ಯಕ್ತಿಯ ಕೈಗೆ ಹೂವಿನ ಮಾಲೆಯನ್ನು ಕೊಟ್ಟಿದ್ದಾರೆ. ಬೈಕ್ ಹೂ ಮಾಲೆ ಹಾಕೋ ಬದಲು ಹೆಂಡ್ತಿ ಕೊರಳಿಗೆ ಹೂ ಮಾಲೆ ಹಾಕಿದ್ದಾನೆ. ಇದೇ ವೇಳೆ ಶೋ ರೂಮ್ ನಲ್ಲಿದ್ದವರು ಬೈಕ್ ಹಾಕಿ ಎಂದು ನಗುತ್ತಾ ಹೇಳಿದ್ದಾರೆ. ತನ್ನ ಪತಿಯ ಕೆಲಸ ಪತ್ನಿ ಕೂಡ ಬಿದ್ದು ಬಿದ್ದು ನಕ್ಕಿದ್ದಾಳೆ. ಇತ್ತ ಈ ವ್ಯಕ್ತಿ ಕೂಡ ತನ್ನ ಮುಖಕ್ಕೆ ಕೈ ಹಿಡಿದುಕೊಂಡು ಮುಗ್ಧತೆಯಿಂದ ನಗುತ್ತಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: ಮನೆಗೆ ಬಂತು ಸ್ಮಾರ್ಟ್ ಟಿವಿ; ಡೆಲಿವರಿ ಬಾಯ್ ಕೆಲಸ ಮಾಡಿ ಅಮ್ಮನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಮಗ
ಈ ವಿಡಿಯೋ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಈ ವ್ಯಕ್ತಿಗೆ ಹೆಂಡ್ತಿ ಮೊದ್ಲು, ಆಮೇಲೆ ಬೈಕ್ ಎನ್ನುವುದು ಚೆನ್ನಾಗಿ ತಿಳಿದಿದೆ ಎಂದಿದ್ದಾರೆ. ಇನ್ನೊಬ್ಬರು, ಶುದ್ಧ ಪ್ರೀತಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಅಂಕಲ್ ತನ್ನ ಆದ್ಯತೆ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ತಮಾಷೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ