ಜಾರ್ಖಂಡ್: ಇನ್‌ಸ್ಟಾಗ್ರಾಮ್ ರೀಲ್ (Instagram Reels) ಚಿತ್ರೀಕರಿಸಲು 18 ವರ್ಷದ ಯುವಕನೊಬ್ಬ 100 ಅಡಿ ಎತ್ತರದಿಂದ ಆಳಕ್ಕೆ ಹಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಮೃತ ತೌಸಿಫ್(18) ಸೋಮವಾರ ಸಂಜೆ ಸುಮಾರು 100 ಅಡಿ ಎತ್ತರದಿಂದ ಕ್ವಾರಿ ಕೆರೆಗೆ ಹಾರಿದ್ದಾನೆ. ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಆತನ ಸ್ನೇಹಿತರು ಆತನನ್ನು ರಕ್ಷಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ.
ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶೋಧ ಕಾರ್ಯಾಚರಣೆಯ ಕೆಳ ಹೊತ್ತಿನ ಬಳಿಕ ಯುವಕನ ಮೃತದೇಹ ಪತ್ತೆಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕ ನೀರಿಗೆ ಜಿಗಿದಿರುವುದನ್ನು ಆತನ ಸ್ನೇಹಿತ ರೆಕಾರ್ಡ್ ಮಾಡಿದ್ದಾನೆ. ಆದರೆ, ಈಜುವ ಬದಲಾಗಿ ಯುವಕ ಮುಳುಗುತ್ತಿದ್ದರೂ ಆತನ ಗೆಳೆಯರು ಪ್ರಾರಂಭದಲ್ಲಿ ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಎಷ್ಟೇ ಹೊತ್ತಾದರೂ ಆತನ ಮೇಲೆ ಬಾರದೇ ಇದ್ದಿದ್ದರಿಂದ ಸ್ನೇಹಿತರು ಆತನನ್ನು ರಕ್ಷಿಸಿ ಮೇಲೆ ತರಲು ಮುಂದಾಗಿದ್ದಾರೆ.
ಇದನ್ನೂ ಓದಿ: ಹಲವರಿಗೆ ಅಂಗಾಂಗ ದಾನ; ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ
ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಕುಶ್ವಾಹ ಅವರ ಪ್ರಕಾರ, “100 ಅಡಿ ಆಳದ ನೀರಿಗೆ ಹಾರಿದ ನಂತರ, ಯುವಕ ತನ್ನನ್ನು ನಿಯಂತ್ರಿಸಲು ಸಾಧ್ಯವಾಗದೆ ಮುಳುಗಿ ಸಾವನ್ನಪ್ಪಿದ್ದಾನೆ” ಎಂದು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ